SIDDAPUR|ಕ್ಯಾದಗಿ ಸಹಕಾರಿಗೆ ಎಂ.ಜಿ.ನಾಯ್ಕ ಅಧ್ಯಕ್ಷ, ಭಾರತಿ ಭಟ್ಟ ಉಪಾಧ್ಯಕ್ಷೆ

Spread the love

ಸಿದ್ದಾಪುರ: ತಾಲೂಕಿನ ಕ್ಯಾದಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದಿನ ಐದು ವರ್ಷದ ಅವಧಿಗೆ ಅಧ್ಯಕ್ಷರಾಗಿ ಎಂ.ಜಿ.ನಾಯ್ಕ ಹಾದ್ರಿಮನೆ ಹಾಗೂ ಉಪಾಧ್ಯಕ್ಷರಾಗಿ ಭಾರತಿ ಸೀತಾರಾಮ ಭಟ್ಟ ಕಲ್ಲಾಳ ಇವರು ಶುಕ್ರವಾರ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

 

ಈ ಸಂದರ್ಭದಲ್ಲಿ ಆಡಳಿತ ಮಂಡಳಿಗೆ ಆಯ್ಕೆ ಆದ ಪಿ.ಬಿ. ನಾಯ್ಕ ಶಿರಗಳ್ಳೆ, ಗಣೇಶ ಭಟ್ಟ ಕೆರೆಹೊಂಡ, ರಾಘವೇಂದ್ರ ನಾಯ್ಕ ಹೆಗ್ಗೇರಿ, ಸುಬ್ರಾಯ ಹೆಗಡೆ ಮಕ್ಕಿಗದ್ದೆ, ಲಕ್ಷ್ಮಣ ನಾಯ್ಕ ಹೊನ್ನೇಬಿಡಾರ, ವಿಜಯಾ ರಮೇಶ ನಾಯ್ಕ ಹಳ್ಳಿಬೈಲು, ನಾರಾಯಣ ಚೌಡ ಹಸಲರ ಹಂದೀಮನೆ, ಕೆ.ಪಿ.ರಘುಪತಿ ಕ್ಯಾದಗಿ ಇವರು ಉಪಸ್ಥಿತರಿದ್ದರು.

 

ರಿಟರ್ನಿಂಗ್ ಅಧಿಕಾರಿಯಾಗಿ ಯಲ್ಲಾಪುರದ ಸಹಕಾರ ಅಭಿವೃದ್ಧಿ ಅಧಿಕಾರಿ ಎ.ಕೆ.ಮಾಸ್ತಿ ಕರ್ತವ್ಯನಿರ್ವಹಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಎನ್ ಗೌಡ ಹಾಗೂ ಸಿಬ್ಬಂದಿಗಳು ಸಹಕರಿಸಿದರು.

Leave a Reply

Your email address will not be published. Required fields are marked *