ಬೆಂಗಳೂರು: ರಾಜ್ಯದಲ್ಲಿ ಎನ್ಕೌಂಟರ್ ಮಾಡುವ ಯಾವುದೇ ಪರಿಸ್ಥಿತಿ ಬಂದಿಲ್ಲ, ಅಂತಹ ಪರಿಸ್ಥಿತಿ ಬಂದರೆ ಖಂಡಿತ ಎನ್ಕೌಂಟರ್ ಫಿಕ್ಸ್ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ಹೇಳಿದ್ದಾರೆ.

ಉದಯಗಿರಿ ಗಲಭೆ, ಕೊಪ್ಪಳದಲ್ಲಿ ವಿದೇಶಿ ಮಹಿಳೆ ಮೇಲೆ ನಡೆದ ಅತ್ಯಾಚಾರ ಪ್ರಕರಣ ಮುಂತಾದವುಗಳ ಬಗ್ಗೆ ನಡೆದ ಚರ್ಚೆಯ ಬಳಿಕ ಪ್ರತಿಕ್ರಿಯೆ ನೀಡಿದ ಅವರು ರಾಜ್ಯದಲ್ಲಿ ನಡೆದ ಹಲವಾರು ಕುಕೃತ್ಯಗಳಿಗೆ ಪೊಲೀಸರು ಸರಿಯಾದ ಕ್ರಮ ಕೈಗೊಂಡಿದ್ದಾರೆ,ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ,ಅದಕ್ಕೂ ಮೀರಿ ಕುಕೃತ್ಯಗಳ ಕೈಂಗೊಂಡವರ ಮೇಲೆ ಎನ್ಕೌಂಟರ್ ಕೈಗೊಳ್ಳಲು ರೆಡಿ ಇದ್ದೇವೆ ಎಂದರು.

ಕೊಲೆ, ದರೋಡೆ, ಗಲಭೆ ಸೇರಿದಂತೆ ವಿವಿಧ ಅಪರಾಧಗಳು ಇಳಿಕೆಯಾಗಿವೆ. ಸಮಾಜದಲ್ಲಿ ಅಶಾಂತಿ ತೋರಿದ ವ್ಯಕ್ತಿಗಳ ವಿರುದ್ಧ ಕಾನೂನಿನಡಿ ಪ್ರಕರಣ ದಾಖಲಿಸಿ ಸಮಾಜದ ಶಾಂತಿ ಕಾಪಾಡಲಾಗುತ್ತಿದೆ. ಕಳೆದ 3 ವರ್ಷಗಳಲ್ಲಿ ಗೂಂಡಾ ಕಾಯ್ದೆಯಡಿ 139 ಮಂದಿ ಬಂಧಿಸಿ ಜೈಲಿಗಟ್ಟಲಾಗಿದೆ. ಪೊಲೀಸರ ಮೇಲೆ ಹಲ್ಲೆಮಾಡಿ ಪರಾರಿಯಾಗುತ್ತಿದ್ದರ ಮೇಲೆ ಗುಂಡಿನ ರುಚಿ ತೋರಿಸಲಾಗಿದೆ. ಆದರೆ ಎನ್ಕೌಂಟರ್ ನಡೆಸಿಲ್ಲ ಎಂದು ಹೇಳಿದರು.
ಆದರೆ ಗೃಹ ಸಚಿವರ ಉತ್ತರ ತೃಪ್ತಿ ತಂದಿಲ್ಲ ಎಂದು ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.


Leave a Reply