ಅಂಕೋಲಾ: ತಾಲೂಕಿನ ಶೆಟಗೇರಿಯ ವರಮಹಾಗಣಪತಿ ದೇಗುಲ ಹಾಗೂ ಸಂಪ್ರದಾಯ ಸೇವಾ ಸಂಸ್ಥೆ ಪ್ರಾರಂಭಗೊಂಡು ಇಂದು ಎರಡುದಶಕಗಳು ಪೂರೈಸಿದ ಹಿನ್ನೆಲೆಯಲ್ಲಿ ವರಮಹಾಗಣಪತಿ ದೇವಸ್ಥಾನದ ವರ್ದಂತಿ ಉತ್ಸವ ಹಾಗೂ ಸಂಪ್ರದಾಯ ಉತ್ಸವ 2025 ರ ಅಂಗವಾಗಿ ಸುಸಜ್ಜಿತವಾಗಿ ನಿರ್ಮಾಣಗೊಂಡ ವಾಸುದೇವ ಡ್ರೀಮ್ ಸ್ಕೇಪ್ ಹೊರಾಂಗಣ ಸಭಾಂಗಣ ಲೋಕಾರ್ಪಣೆಗೊಳ್ಳಲಿದ್ದು, ಅಂಕೋಲಿಗರ ಸೇವೆಗೆ ಸಜ್ಜಾಗಿದೆ.

ಕಳೆದ ಎರಡು ದಶಕಗಳಿಂದ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ, ಧಾರ್ಮಿಕ ವಿಧಿವಿಧಾನಗಳನ್ನು ಅಚ್ಚುಕಟ್ಟಾಗಿ ನೆರವೇರಿಸುತ್ತಾ ಬಂದಿರುವ ತಾಲೂಕಿನ ವಾಸುದೇವ ಕಲ್ಯಾಣಮಂಟಪವು ಅತೀ ವೈಭವದಿಂದ,ಅತ್ಯಾಧುನಿಕ ತಂತ್ರಜ್ಞಾನದ ಮೂಲಕ, ಮೂಲ ಸೌಕರ್ಯದೊಂದಿಗೆ ತನ್ನದೆಯಾದ ವಿಭಿನ್ನ ಶೈಲಿಯಲ್ಲಿ ಸಾರ್ವಜನಿಕರ ಸೇವೆಗೆ ಮುಡಿಪಿಟ್ಟಂತೆ ಸಂಪ್ರದಾಯ ಸೇವಾಸಂಸ್ಥೆಯು ಕಾರ್ಯನಿರ್ವಹಿಸುತ್ತ ಬಂದಿರುವುದು ಅಂಕೋಲೆಗೆ ಹೆಮ್ಮೆಯ ವಿಷಯವಾಗಿದೆ.

ಮೈನವಿರೇಳಿಸುವಂತಿದೆ ವಾಸುದೇವ ಡ್ರೀಮ್ ಸ್ಕೇಪ್ ಹೊರಾಂಗಣ ಸಭಾಂಗಣ!
ಸಂಪ್ರದಾಯ ಉತ್ಸವ ಹಾಗೂ ವರಮಹಾಗಣಪತಿ ದೇವಸ್ಥಾನದ 20 ನೇ ವಾರ್ಷಿಕೋತ್ಸವ ಅಂಗವಾಗಿ ನೂತನವಾಗಿ ಉದ್ಘಾಟನೆಗೊಳ್ಳಲಿರುವ ಉತ್ತರ ಕನ್ನಡ ಜಿಲ್ಲೆಯಲ್ಲೇ ಅತ್ಯಂತ ಸುಂದರ ಹಾಗೂ ಸವಿಸ್ತಾರವಾಗಿರುವ ಡ್ರಿಮ್ಸ್ಕೇಪ್ ಹೊರಾಂಗಣ ಸಭಾಂಗಣ ಎರಡು ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಸಮರ್ಥವಾಗಿ ನಿಭಾಯಿಸಬಲ್ಲ 15000 ಕ್ಕೂ ಅಧಿಕ ಚದರ್ ಅಡಿಯನ್ನು ಹೊಂದಿದ್ದು,ಜಿಲ್ಲೆಯಲ್ಲೇ ಅತ್ಯಂತ ದೊಡ್ಡ ಸಭಾಂಗಣವಾಗಿದೆ.ಅದರಂತೆಯೇ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡು ಅತ್ಯದ್ಭುತ ವಿದ್ಯುತ್ ಅಲಂಕಾರದೊಂದಿಗೆ,ಅಚ್ಚುಕಟ್ಟಾದ ವಿನ್ಯಾಸ,ಪ್ರಕೃತಿಯ ಮಡಿಲಿನಲ್ಲಿರುವಂತೆ ಹಸಿರು ಹಾಸಿಗೆಯ ನೆಲಗಟ್ಟು,ಮನಮೋಹಕವಾಗಿ ಚಿಮ್ಮುವ ಕಾರಂಜಿಗಳು,ಹಳ್ಳಿಯ ಸೊಗಡಿನ ಎತ್ತಿನ ಗಾಡಿ ಒಳಗೊಂಡಂತೆ ಅನೇಕ ಪರಿಕರಗಳು,ಸಾಂಸ್ಕೃತಿಕ ಚಿತ್ರಣಗಳು ನೆರೆದಂತವರನ್ನು ಆಕರ್ಷಿಸುವಲ್ಲಿ ಸಂದೇಹವೇ ಇಲ್ಲ, ಒಟ್ಟಾರೆ ಸಂಪ್ರದಾಯ ಸೇವಾ ಸಂಸ್ಥೆಯು ತನ್ನ 20 ನೇ ಸಂಭ್ರಮಾಚರಣೆಯಲ್ಲಿ ಹೊಸಮೈಲಿಗಲ್ಲನ್ನು ಸ್ಥಾಪಿಸಿದೆ.

ನಾರಾಯಣ ನಾಯಕರ ಕನಸಿನ ಕೂಸು ಈ ಸಂಪ್ರದಾಯ ಉತ್ಸವ!
ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಹೆಸರಾಗಿದ್ದ ಈ ಸಂಪ್ರದಾಯ ಸೇವಾ ಸಂಸ್ಥೆಯ ಸಂಸ್ಥಾಪಕರಾದ ಶೇಟಗೇರಿಯ ನಾರಾಯಣ ಬಿರಣ್ಣ ನಾಯಕ ಕನಸಿನಂತೆ 2005 ಜೂನ್ 7 ರಂದು ವರಮಹಾಗಣಪತಿ ದೇವಾಸ್ಥಾನ ಹಾಗೂ ಧಾರ್ಮಿಕ ಕೈಂಕರ್ಯಗಳೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಂಪ್ರದಾಯ ಸೇವಾ ಸಂಸ್ಥೆಯನ್ನು ಹುಟ್ಟುಹಾಕಿದರು. ಅಂದಿನಿಂದ ಇಂದಿನವರೆಗೂ ಸಾಂಪ್ರದಾಯಿಕವಾಗಿ ಸಂಪ್ರದಾಯ ಉತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರುತ್ತಿದೆ.ಅಂದು ನಾರಾಯಣ ನಾಯಕರು ಸಮಾಜಸೇವೆಗೆಂದು ಹುಟ್ಟುಹಾಕಿದ ಸಂಸ್ಥೆಯನ್ನು ನಾರಾಯಣ ನಾಯಕರ ದ್ವಿತೀಯ ಪುತ್ರನಾದ ಅನೂಪ್ ನಾಯಕ ಮತ್ತಷ್ಟು ಮೆರಗುನಿಡುವಂತೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ.

ಹಿರಿಮಗನ ಸವಿನೆನಪಿಗೆ ವಾಸುದೇವ ಕಲ್ಯಾಣ ಮಂಟಪ!
2007 ಅಕಾಲಿಕ ಮರಣಹೊಂದಿದ ವರಮಹಾಗಣಪತಿ ದೇವಸ್ಥಾನದ ಧರ್ಮದರ್ಶಿ ನಾರಾಯಣ ನಾಯಕರ ಹಿರಿಯ ಮಗನಾದ ವಾಸುದೇವ ನಾಯಕರ ಸವಿನೆನಪಿಗೆ,ದೇವಸ್ಥಾನದ ಪಕ್ಕದಲ್ಲಿ 2017 ಜೂನ್ 16 ರಂದು ಆತನ ಹೆಸರಿನಲ್ಲಿ ಮನಮೋಹಕ ಕಲ್ಯಾಣಮಂಟಪವನ್ನು ನಿರ್ಮಿಸಿ ಅದಕ್ಕೆ ‘ವಾಸುದೇವ’ ಎಂದು ನಾಮಕರಣ ಮಾಡಲಾಯಿತು. ಅಂದಿನಿಂದ ಇಂದಿನವರೆಗೆ 700 ಕ್ಕೂ ಅಧಿಕ ಮದುವೆಯ ಶುಭಕಾರ್ಯ ನಡೆದಿರುವುದು ನಾರಾಯಣ ನಾಯಕರ ಕನಸು ಈಡೇರಿದಂತಾಗಿದೆ ಎನ್ನಲಾಗಿದೆ.

ಪ್ರತಿಭೆಗಳಿಗೆ ಸಂಪ್ರದಾಯ ಉತ್ಸವದಲ್ಲಿ ಭರ್ಜರಿ ಮನ್ನಣೆ!
ಕಳೆದ ಎರಡು ದಶಕಗಳಿಂದ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿರುವ ಸಂಪ್ರದಾಯ ಉತ್ಸವವು ಕಲೆ ಮತ್ತು ಸಾಂಸ್ಕೃತಿಕ ರಾಯಭಾರಿಯಾಗಿ ಗಿರುತಿಸಿಕೊಂಡಿದೆ. ಜಿಲ್ಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗಿತ್ತದೆ. ಹಾಗೆಯೇ ಸಂಸ್ಕೃತಿ,ಪ್ರತಿಭೆ,ಧಾರ್ಮಿಕ ಹಾಗೂ ಯಕ್ಷಗಾನ ಒಳಗೊಂಡಂತೆ ಈ ಉತ್ಸವವು ಅತ್ಯಂತ ಮನರಂಜನೆ ನೀಡುವುದರೊಂದಿಗೆ ತಾಲೂಕಿನಲ್ಲಿಯೇ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿ ರೂಪುಗೊಂಡಿದೆ. ಹಾಗೆಯೇ ಕಾರ್ಯಕ್ರಮದಲ್ಲಿ ರಾಘವೇಶ್ವರ ಭಾರತಿ ಸ್ವಾಮೀಜಿ,ಮಾರುತಿ ಗುರೂಜಿ,ರವಿಹೆಗಡೆ ಹೂವಿನಮನೆ,ಡಿ ಶಂಕರಭಟ್,ಪಗ ಭಟ್,ವಾಸುದೇವ ಸಾಮಗ,ಚಿಟ್ಟಾಣಿ ರಾಮಚಂದ್ರ ಹೆಗಡೆ,ಜಲವಳ್ಳಿ ವೆಂಕಟೇಶ್ವರ ರಾವ್,ಅನ್ಸೋಟ್ ಮಂಜುನಾಥ್ ಬಾಗವತ್,ಪದ್ಮಶ್ರೀ ಸುಕ್ರಿ ಗೌಡ,ಪದ್ಮಶ್ರೀ ತುಳಸಿ ಗೌಡ,ಉದಯ ಪ್ರಭು,ವಿಶೇಶ್ವರ ಹೆಗಡೆ ಕಾಗೇರಿ,ಮೋಹನ್ ಆಳ್ವಾ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ.

ನಾರಾಯಣ ನಾಯಕರ ಕಂಚಿನ ಪುತ್ಥಳಿ ಅನಾವರಣ!
ಸಂಪ್ರದಾಯ ಸೇವಾ ಸಮಿತಿಯ ಸಂಸ್ಥಾಪಕರಾದ ನಾರಾಯಣ ನಾಯಕರ ಕಂಚಿನ ಪುತ್ಥಳಿ ನೂತನವಾಗಿ ಆರಂಭಗೊಂಡ ಕಟ್ಟಡದಲ್ಲಿ ದ್ವಿತೀಯ ಪುತ್ರನಾದ ಅನೂಪ ನಾಯಕ ಹಾಗೂ ಕುಟುಂಬಸ್ಥರ ಆಶಯದೊಂದಿಗೆ ಲೋಕಾರ್ಪಣೆಗೊಳ್ಳಲಿದ್ದು, ಹಾಗೆಯೇ ಅದರೊಂದಿಗೆ ಸ್ಥಳೀಯ ಲೇಖಕರಿಂದ ರಚಿಸಲ್ಪಟ್ಟ ಪುಸ್ತಕಗಳನ್ನು ಒಳಗೊಂಡ ಗ್ರಂಥಾಲಯ ಕೂಡ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.

ತಾಯಿ ಬೀರಮ್ಮ ನಾಯಕ ಮಾರ್ಗದರ್ಶನ ಹಾಗೂ ಪತ್ನಿ ಪೃಕೃತಿ ನಾಯಕರ ಸಹಕಾರದಿಂದ ಸಂಪ್ರದಾಯ ಸೇವಾ ಸಂಸ್ಥೆ ಸಾಧನೆಯತ್ತ ತೆರಳುತ್ತಿದೆ,ಅದರಂತೆಯೇ ನನ್ನೊಂದಿಗೆ ಪ್ರತಿಯೊಂದು ಸಂದರ್ಭದಲ್ಲಿ ಇದ್ದು ಸಲಹೆ,ಸೂಚನೆಗಳನ್ನು ನೀಡಿದ ನನ್ನೆಲ್ಲ ಗೆಳೆಯರ ಬಳಗದವರಿಗೆ ಹೃತಪೂರ್ವಕ ಧನ್ಯವಾದಗಳು.ಸಂಪ್ರದಾಯ ಉತ್ಸವ ಹಾಗೂ ವರಮಹಾಗಣಪತಿ ದೇವಸ್ಥಾನದ ವರ್ದಂತಿ ಉತ್ಸವಕ್ಕೆ ಎಲ್ಲರನ್ನೂ ಅಮಂತ್ರಿಸುವ ಹಂಬಲವಿತ್ತು,ಸಮಯದ ಕೊರತೆಯಿಂದ ಸಾಧ್ಯವಾಗಲಿಲ್ಲ,ತಾವೆಲ್ಲರೂ ಇಂದು ನಡೆಯುವ ಕಾರ್ಯಕ್ರಮದಲ್ಲಿ ಉಪಸ್ಥಿತರೀರಬೇಕಾಗಿ ಈ ಮೂಲಕ ವಿನಂತಿಸುತ್ತೇನೆ.
ಅನೂಪ್ ನಾಯಕ
ಧರ್ಮದರ್ಶಿಗಳು ವರಮಹಾಗಣಪತಿ ದೇವಸ್ಥಾನ .

ಕಳೆದ 20 ವರ್ಷಗಳಿಂದ ತಾಲೂಕಿನಲ್ಲಿ ತನ್ನದೆಯಾದ ವೈಶಿಷ್ಟ್ಯತೆಯಿಂದ ಕಾರ್ಯನಿರ್ವಹಿಸುತ್ತ ಬಂದಿರುವ ಸಂಪ್ರದಾಯ ಸೇವಾ ಸಂಸ್ಥೆಯ ಕಾರ್ಯ ಶ್ಲಾಘನೀಯ,ಅತ್ಯಾಕರ್ಷಕವಾಗಿ ರೂಪುಗೊಂಡಿರುವ ವಾಸುದೇವ ಡ್ರೀಮ್ ಸ್ಕೇಪ್ ಹೊರಾಂಗಣ ಸಭಾಂಗಣವು ನನ್ನ ಕ್ಷೇತ್ರದಲ್ಲಿ ಶುಭಾರಂಭಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಸತೀಶ್ ಸೈಲ್.
ಶಾಸಕರು.

ತಾಲೂಕಿನಲ್ಲಿ ಅತ್ಯಂತ ವಿಶಾಲವಾದ ಹಾಗೂ ಪ್ರಕೃತಿಯ ಮಡಿಲಿನಲ್ಲಿ ಕಂಗೊಳಿಸುತ್ತಿರುವ ವಾಸುದೇವ ಕಲ್ಯಾಣ ಮಂಟಪ ಅತ್ಯಂತ ಅಚ್ಚುಕಟ್ಟಾದ ವ್ಯವಸ್ಥೆಯಿಂದ ಕೂಡಿರುವ ಕಲ್ಯಾಣಮಂಟಪವಾಗಿದೆ,ಅದರಂತೆಯೇ ಇಂದು ನೂತನವಾಗಿ ಶುಭಾರಂಭಗೊಳ್ಳುವ ವಾಸುದೇವ ಡ್ರೀಮ್ ಸ್ಕೇಪ್ ಹೊರಾಂಗಣ ಸಭಾಂಗಣವಂತು ಜಿಲ್ಲೆಯಲ್ಲೇ ಪ್ರಸಿದ್ಧಿಪಡೆಯುವುದು ನಿಶ್ಚಿತವಾಗಿದೆ.
ಹನುಮಂತ ಗೌಡ
ಜಿಲ್ಲಾಧ್ಯಕ್ಷರು
ಹಾಲಕ್ಕಿ ಸಮುದಾಯ ಉತ್ತರ ಕನ್ನಡ.

ತಾಲೂಕಿನಲ್ಲಿ ಸಂಪ್ರದಾಯ ಸೇವಾ ಸಂಸ್ಥೆ 20 ನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ.ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನದೆಯಾದ ಕೊಡುಗೆಯನ್ನು ನೀಡುತ್ತಾ ಬಂದಿರುವ ಈ ಸಂಸ್ಥೆ ವಾಸುದೇವ ಡ್ರೀಮ್ ಸ್ಕೇಪ್ ಹೊರಾಂಗಣ ಸಭಾಂಗಣ ನಿರ್ಮಿಸುವ ಮೂಲಕ ಮತ್ತೊಂದು ದಾಪುಗಾಲು ಇಟ್ಟಿದೆ.ಮುಂದಿನ ದಿನಗಳಲ್ಲಿ ಮತ್ತಷ್ಟು ಹಿರಿಮೆಗಳು ಈ ಸಂಸ್ಥೆಯ ಪಾಲಾಗಲಿ ಎಂದು ಆಶಿಸುತ್ತೇನೆ.
ವಸಂತ ನಾಯಕ, ಜಮಗೋಡ
ಸಂಸ್ಥಾಪಕ ಅಧ್ಯಕ್ಷರು
ಶ್ರೀರಾಮ್ ಪರಿಸರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ


Leave a Reply