ವಾಸುದೇವ ಡ್ರೀಮ್ ಸ್ಕೇಪ್ ಲೋಕಾರ್ಪಣೆ! ಶಾಸ್ತ್ರೋಕ್ತವಾಗಿ ನೆರವೇರಿದ ಶೆಟಗೇರಿ ವರಮಹಾಗಣಪತಿ ದೇವರ ವರ್ದಂತಿ ಉತ್ಸವ.

Spread the love

ಅಂಕೋಲಾ: ತಾಲೂಕಿನ ಶೆಟಗೇರಿಯಲ್ಲಿ ಸಂಪ್ರದಾಯ ಸೇವಾ ಸಂಸ್ಥೆಯ ವತಿಯಿಂದ ನಡೆದ ವರಮಹಾಗಣಪತಿ ದೇವರ ವರ್ದಂತಿ ಉತ್ಸವವು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅದ್ದೂರಿಯಿಂದ ಆಚರಣೆಗೊಂಡಿತು.ನಾರಾಯಣ ಬೀರಣ್ಣ ನಾಯಕರ ಕನಸಿನ ಕೂಸಾದ ಸಂಪ್ರದಾಯ ಸೇವಾ ಸಂಸ್ಥೆ ಪ್ರಾರಂಭಗೊಂಡು ಇಪ್ಪತ್ತುವರ್ಷ ಸಂದ  ಹಿನ್ನೆಲೆಯಲ್ಲಿ ವರಮಹಾಗಣಪತಿ ದೇವಸ್ಥಾನದ ವರ್ದಂತಿ ಉತ್ಸವವು ಧಾರ್ಮಿಕ ವಿಧಿವಿಧಾನಗಳ ಮೂಲಕ ಅದ್ದೂರಿಯಿಂದ ನೆರವೇರಿತು.

ಮಂಗಳವಾರದಿಂದಲೇ ಇಪ್ಪತ್ತಕ್ಕೂ ಹೆಚ್ಚಿನ ಪುರೋಹಿತರಿಂದ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿದ್ದವು,ಹಾಗೆಯೇ ಬುಧವಾರ ಬ್ರಾಹ್ಮಿಮುಹೂರ್ತದಲ್ಲಿ ವರಮಹಾಗಣಪತಿ ದೇವರ ವರ್ದಂತಿ ಉತ್ಸವಕ್ಕೆ ಚಾಲನೆದೊರೆತಿದ್ದು,108 ತೆಂಗಿನಕಾಯಿಯ ಗನಹವನ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.ತದನಂತರದಲ್ಲಿ ವರಮಹಾಗಣಪತಿ ದೇವರ ಮಹಾಮಂಗಳಾರತಿಯನ್ನು ಬೆಳಗಿ ಮಹಾಅನ್ನ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.ಪೃಕೃತಿ ಹಾಗೂ ಅನೂಪ್ ನಾಯಕ ದಂಪತಿಗಳು ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸರ್ವರನ್ನು ಸತ್ಕರಿಸಿ ಪ್ರಸಾದ ನೀಡಿದರು.

ಬೇಡಿದ್ದನ್ನು ನೀಡುವ ವರಮಹಾಗಣಪತಿ!

ದಿವಂಗತ ನಾರಾಯಣ ನಾಯಕರ ಕನಸಿನಲ್ಲಿ ಬಂದ ಗಣಪನ ಆಜ್ಞೆಯಂತೆ 2005 ಜೂನ್ 7 ರಂದು ಪ್ರತಿಷ್ಠಾಪಿಸಲ್ಪಟ್ಟ ವರಮಹಾಗಣಪತಿ ಅಂದಿನಿಂದ ಇಂದಿನವರೆಗೂ ಹಲವರ ಬೇಡಿಕೆಗಳನ್ನು ಈಡೇರಿಸಿದ್ದಾನೆ ಎನ್ನುವ ಪ್ರತೀತಿಯಿದೆ. ನಾರಾಯಣ ನಾಯಕರ ನಿಧನದ ನಂತರದಲ್ಲಿ ದ್ವಿತೀಯಪುತ್ರನಾದ ಅನೂಪ್ ನಾಯಕ ಹಾಗೂ ಕುಟುಂಬಸ್ಥರು ಶ್ರದ್ಧಾ ಭಕ್ತಿಯಿಂದ ಪೂಜೆಸಲ್ಲಿಸುತ್ತಾ ಬಂದಿದ್ದು ವರ್ದಂತಿ ಉತ್ಸವವನ್ನು ಅತೀ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದಾರೆ.

ನವನವೀನ ವಾಸುದೇವ ಡ್ರೀಮ್ ಸ್ಕೇಪ್ ಲೋಕಾರ್ಪಣೆ.

ಸಂಪ್ರದಾಯ ಉತ್ಸವ ಹಾಗೂ ವರಮಹಾಗಣಪತಿ ದೇವಸ್ಥಾನದ 20 ನೇ ವಾರ್ಷಿಕೋತ್ಸವ ಅಂಗವಾಗಿ ನವನವೀನವಾಗಿ ಉದ್ಘಾಟನೆಗೊಂಡ ವಾಸುದೇವ ಡ್ರೀಮ್ ಸ್ಕೇಪ್ ಹೊರಾಂಗಣ ಸಭಾಂಗಣವನ್ನು ದಿವಂಗತ ನಾರಾಯಣ ನಾಯಕರ ಧರ್ಮಪತ್ನಿ ಬೀರಮ್ಮ ನಾಯಕ ಲೋಕಾರ್ಪಣೆಗೊಳಿಸಿದರು.ವಾಸುದೇವ ಡ್ರೀಮ್ ಸ್ಕೇಪ್ ಹೊರಾಂಗಣ ಸಭಾಂಗಣವು ಉತ್ತರ ಕನ್ನಡ ಜಿಲ್ಲೆಯಲ್ಲೇ ಅತ್ಯಂತ ಸುಂದರ ಹಾಗೂ ಸವಿಸ್ತಾರವಾಗಿರುವ ಹೊರಾಂಗಣ ಸಭಾಂಗಣವಾಗಿದೆ.ಸರಿಸುಮಾರು ಎರಡು ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಸಮರ್ಥವಾಗಿ ನಿಭಾಯಿಸಬಲ್ಲ 16000  ಅಧಿಕ ಚದರ್ ಅಡಿಯ ಅಳತೆಯನ್ನು ಹೊಂದಿದ್ದು,ಜಿಲ್ಲೆಯಲ್ಲೇ ಅತ್ಯಂತ ದೊಡ್ಡ ಹೊರ ಸಭಾಂಗಣ ಎನಿಸಿಕೊಂಡಿದೆ.ಅದರಂತೆಯೇ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡು ಅತ್ಯದ್ಭುತ ವಿದ್ಯುತ್ ಅಲಂಕಾರ,ನೂತನ ಶೈಲಿಯ ದ್ವನಿವರ್ಧಕಗಳು,ಅಚ್ಚುಕಟ್ಟಾದ ವಿನ್ಯಾಸ,ಪ್ರಕೃತಿಯ ಮಡಿಲಿನಲ್ಲಿರುವಂತೆ ಹಸಿರು ಹಾಸಿಗೆಯ ನೆಲಗಟ್ಟು,ಮನಮೋಹಕವಾಗಿ ಚಿಮ್ಮುವ ಕಾರಂಜಿಗಳು,ಹಳ್ಳಿಯ ಸೊಗಡಿನ ಎತ್ತಿನ ಗಾಡಿ ಒಳಗೊಂಡಂತೆ ಅನೇಕ ಪರಿಕರಗಳು,ಸಾಂಸ್ಕೃತಿಕ ಚಿತ್ರಣಗಳು ನೆರೆದಂತವರನ್ನು ತನ್ನತ್ತ ಸೆಳೆಯುವಂತೆ ಮಾಡಿತ್ತು. ಈ ಸಂದರ್ಭದಲ್ಲಿ ದಿವಂಗತ ನಾರಾಯಣ ನಾಯಕರ ಪುತ್ರಿ ರಮ್ಯಾ ನಾಯಕ್ ಹಾಗೂ ಅಳಿಯ ಅಕ್ಷಯ ನಾಯಕ ಜೊತೆಯಾದರು.

ನಾರಾಯಣ ನಾಯಕರ ಕಂಚಿನ ಪುತ್ಥಳಿ ಅನಾವರಣ!


ಸಂಪ್ರದಾಯ ಸೇವಾ ಸಮಿತಿಯ ಸಂಸ್ಥಾಪಕರಾದ ನಾರಾಯಣ ನಾಯಕರ ಕಂಚಿನ ಪುತ್ಥಳಿಯನ್ನು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಾಬು ಶೆಟ್ಟಿಯವರು ತಮ್ಮ ಅಮೃತ ಹಸ್ತದಿಂದ ಅನಾವರಣಗೊಳಿಸಿದರು.

ಡ್ರೀಮ್ ಸ್ಕೇಪ್ ಹೊರಾಂಗಣ ಸಭಾಂಗಣಕ್ಕೆ ಮನಸೋತ ಸೈಲ್!

ವರಮಹಾಗಣಪತಿ ವರ್ದಂತಿ ಉತ್ಸವ ಹಾಗೂ ಸಂಪ್ರದಾಯ ಸೇವಾ ಸಂಸ್ಥೆಯ 20 ನೇ ವರ್ಷದ ಸಂಪ್ರದಾಯ ಉತ್ಸವದಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡ ಸ್ಥಳೀಯ ಶಾಸಕ ಸತೀಶ್ ಸೈಲ್ ವರಮಹಾಗಣಪತಿ ದೇವರ ದರ್ಶನಪಡೆದು ಪ್ರಸಾದ ಸ್ವೀಕರಿಸಿದರು,ಈ ಸಂದರ್ಭದಲ್ಲಿ ನೂತನ ವಿನ್ಯಾಸದೊಂದಿಗೆ,ಅಚ್ಚುಕಟ್ಟಾಗಿ ರೂಪುಗೊಂಡ
ಲೋಕಾರ್ಪಣೆಗೊಂಡ ವಾಸುದೇವ ಡ್ರೀಮ್ ಸ್ಕೇಪ್ ಹೊರಾಂಗಣ ಸಭಾಂಗಣಕ್ಕೆ ಮನಸೋತು ಹರ್ಷವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಅವರೊಂದಿಗೆ ಬೆಂಬಲಿಗರು ಉಪಸ್ಥಿತರಿದ್ದರು.

ಮುಸ್ಸಂಜೆಯಲ್ಲಿ ಮನರಂಜಿಸಿದ ರಸಮಂಜರಿ ಕಾರ್ಯಕ್ರಮ!

ವಾಸುದೇವ ಡ್ರೀಮ್ ಸ್ಕೇಪ್ ಹೊರಾಂಗಣ ಸಭಾಂಗಣವು ಲೋಕಾರ್ಪಣೆಗೊಳ್ಳುತ್ತಿದ್ದಂತೆ ಮುಸ್ಸಂಜೆಯಲ್ಲಿ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು,ರಾಜ್ಯದ ಹಲವಾರು ಹಾಡುಗಾರರು ಈ ಕಾರ್ಯಕ್ರಮದಲ್ಲಿ ನೆರೆದಂತವರ ಮನರಂಜಿಸಿದರು. ನಿರೂಪಕ ಯೋಗೇಶ್ ಮಿರ್ಜಾನ್ ಅವರ ಅದ್ಬುತ ನಿರೂಪಣೆಯೊಂದಿಗೆ ಗಾಯಕ ರಘುದೀಕ್ಷಿತ್ ತಂಡದ ಹೆಸರಾಂತ ಹಾಡುಗಾರ ಮಂಗಳೂರು ಮೂಲದ ರಾಕೇಶ್ ದಿಲಸೆ,ವಿದ್ಯಾ ರಾಕೇಶ,ದೀಪ್ತಿ ಸುವರ್ಣ,ಪರೀದ್ ಕೇರಳಾ ಮುಂತಾದ ಹಾಡುಗಾರರಿಂದ ಏರ್ಪಟ್ಟ ರಸಮಂಜರಿ ಕಾರ್ಯಕ್ರಮ ನೆರೆದಂತವರಿಗೆ ಅದ್ಭುತವಾಗಿ ಮನರಂಜನೆ ನೀಡಿತ್ತು.ಈ ಸಂದರ್ಭದಲ್ಲಿ ಡ್ರೀಮ್ ಸ್ಕೇಪ್ ಕಟ್ಟಡ ಕಾಮಗಾರಿಯಲ್ಲಿ ಕಾರ್ಯನಿರ್ವಹಿಸಿವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಸತೀಶ್ ಸೈಲ್,ಮುಂಬಯಿ ಮೂಲದ ಉದ್ಯಮಿ ಎಂ ಎಚ್ ನಾಯಕ,ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಬಾಬು ಶೆಟ್ಟಿ,ಯಕ್ಷಗಾನ ಕಲಾವಿದೆ ಪ್ರಜ್ಞಾ ಮತ್ತಿಹಳ್ಳಿ,ಶೆಟಗೇರಿ ಗ್ರಾಪಂ ಅಧ್ಯಕ್ಷ ಲಕ್ಷೀಧರ್ ನಾಯಕ,ಲೋಕೋಪಯೋಗಿ ಇಲಾಖೆಯ ಅಭಿಯಂತರ ರಾಮು ಅರ್ಗೆಕರ್, ಹಾಲಕ್ಕಿ ಸಮಾಜದ ಜಿಲ್ಲಾಧ್ಯಕ್ಷ ಹನುಮಂತ ಗೌಡ,ನಿವೃತ್ತ ಪ್ರಾಧ್ಯಾಪಕ ಕೆ ವಿ ನಾಯಕ,ಉದ್ಯಮಿ ಡಿ ಎನ್ ನಾಯಕ,ಅರ್ಬನ್ ಬ್ಯಾಂಕಿನ ಅಧ್ಯಕ್ಷ ರಾಜೇಂದ್ರ ಶೆಟ್ಟಿ,ನಿರ್ದೇಶಕ ಬಾಸ್ಕರ್ ನಾರ್ವೆಕರ್, ಶ್ರೀರಾಮ ಪರಿಸರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ವಸಂತ್ ನಾಯಕ ಜಮಗೋಡ, ಪ್ರಮುಖರಾದ ಮಂಜೇಶ್ವರ ನಾಯಕ,ಸರಸ್ವತಿ ಸಿರ್ಸಿ,ತುಳಸಿದಾಸ್ ಕಾಮತ್,ಜ್ಞಾನದೇವ ನಾಯಕ ಮುಂತಾದವರು ಉಪಸ್ಥಿತರಿದ್ದರು.

ನಮ್ಮ ಕರೆಗೆ ಓಗೊಟ್ಟು ವರಮಹಾಗಣಪತಿ ದೇವರ ವರ್ದಂತಿ ಉತ್ಸವದಲ್ಲಿ ಪಾಲ್ಗೊಂಡು ದೇವರಕೃಪೆಗೆ ಪಾತ್ರರಾಗಿದ್ದೀರಿ,ಹಾಗೆಯೇ ಸಂಪ್ರದಾಯ ಸೇವಾ ಸಂಸ್ಥೆಯ 20 ನೇ ವರ್ಷದ ಅಂಗವಾಗಿ ಲೋಕಾರ್ಪಣೆಗೊಂಡ ವಾಸುದೇವ ಡ್ರೀಮ್ ಸ್ಕೇಪ್ ಹೊರಾಂಗಣ ಸಭಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು,ನಮಗೆ ಹರಸಿ ಹಾರೈಸಿದ ನಿಮಗೆ  ವರಮಹಾಗಣಪತಿ ದೇವರು ಸಕಲ ಅಷ್ಟೈಶ್ವರ್ಯವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಅನೂಪ್ ನಾಯಕ್.
ಧರ್ಮದರ್ಶಿ
ವರಮಹಾಗಣಪತಿ ದೇವಸ್ಥಾನ ಶ್ರೀ ಕ್ಷೇತ್ರ ಶೆಟಗೇರಿ

Leave a Reply

Your email address will not be published. Required fields are marked *