ಅಂಕೋಲಾ;ಸಿಡಿಲು ಬಡಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಅಂಕೋಲಾ ತಾಲೂಕಿನ ಉಳುವರೆ ಗ್ರಾಮದಲ್ಲಿ ನಡೆದಿದೆ.

ತಮ್ಮಾಣಿ ಅನಂತ ಗೌಡ 65 ಸಾವನ್ನಪ್ಪಿದ ವೃದ್ಧನಾಗಿದ್ದು, ಮನೆಯ ಮೇಲ್ಛಾವಣಿ ದುರಸ್ಥಿ ಮಾಡುತ್ತೀರುವ ಸಂದರ್ಭದಲ್ಲಿ ಸಿಡಿಲು ಬಡಿದಿದ್ದು, ಸ್ಥಳೀಯರು ಆತನನ್ನು ಅಂಕೋಲಾ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿತ್ತು, ಪರೀಕ್ಷಿಸಿದ ವೈದ್ಯರು ಸಾವನ್ನಪ್ಪಿರುವ ಬಗ್ಗೆ ದೃಢ ಪಡಿಸಿದ್ದಾರೆ.

ಉಳುವರೆ ಗ್ರಾಮದ ತಮ್ಮಾಣಿ ಅನಂತ ಗೌಡ ಶಿರೂರು ಗುಡ್ಡ ಕುಸಿತದ ದುರಂತದಲ್ಲಿ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದ ಎನ್ನಲಾಗಿದೆ. ಅಂದು ಬಹಿರ್ದೆಸೆಗೆ ತೆರಳಿದ್ದ ತಮ್ಮಾಣಿ ಗುಡ್ಡ ಕುಸಿತದಿಂದ ಗಂಗಾವಳಿ ನದಿಯ ನೀರು ತಮ್ಮ ಮನೆಗೆ ಅಪ್ಪಳಿಸುವುದನ್ನು ಕಣ್ಣಾರೆ ಕಂಡು ಓಡಿಹೋಗಿ ತಮ್ಮ ಪ್ರಾಣವನ್ನು ರಾಕ್ಷಿಸಿಕೊಂಡಿದ್ದ ಎನ್ನಲಾಗಿದೆ.ಆದರೆ ಸೋಮವಾರ ಸಂಜೆ ಜವರಾಯನಂತೆ ಬಂದೇರಗಿದ ಸಿಡಿಲಿಗೆ ಪ್ರಾಣ ಕಳೆದುಕೊಂಡಿದ್ದಾರೆ.ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Leave a Reply