ಸ್ಮಶಾನದಲ್ಲಿ ಮರಗಳ ಮಾರಣಹೋಮ ಪ್ರಕರಣ!ಪುರಸಭೆ ಮುಖ್ಯಾಧಿಕಾರಿ ಮೇಲೆ ಎಫ್ ಐ ಆರ್ ದಾಖಲು!

Spread the love

ಅಂಕೋಲಾ: ತಾಲೂಕಿನ ಹಿಂದೂ ಸ್ಮಶಾನಭೂಮಿಯಲ್ಲಿ ಮರ ಕಡಿದ ಪ್ರಕರಣದ ಕುರಿತು ನುಡಿಜೇನು ಪತ್ರಿಕೆ ವರದಿ ಬಿತ್ತರಿಸಿತ್ತು, ವರದಿಯ ಫಲಶೃತಿ ಎಂಬಂತೆ ಅರಣ್ಯ ಇಲಾಖೆ ಪುರಸಭೆ ಮುಖ್ಯಾಧಿಕಾರಿ ಎಚ್ ಅಕ್ಷತಾರವರ ಮೇಲೆ ಎಫ್ ಐ ಆರ್ ದಾಖಲಾಗಿದೆ.

ಹೌದು..ಹಿಂದೂ ಸ್ಮಶಾನ ಭೂಮಿಯಲ್ಲಿ ಪರಿಸರ ದಿನಾಚರಣೆಯ ನಿಮಿತ್ತ ಹಿಂದಿನ ಪುರಸಭೆ ಅಧ್ಯಕ್ಷರು ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಅನೇಕಾರು ಗಿಡಮರಗಳನ್ನು ನೆಟ್ಟಿದ್ದರು ಆದರೆ ಪುರಸಭೆ ಅಧಿಕಾರಿಗಳು ಕಳೆದ ವಾರವಷ್ಟೇ ಅನಾವಶ್ಯಕವಾಗಿ ಹದಿನೈದರಿಂದ ಇಪ್ಪತ್ತುವರ್ಷ ಹಳೆಯದಾದ ಆಲದಮರವನ್ನು ಕಡಿದು ಅಟ್ಟಹಾಸ ಮೆರೆದಿದ್ದರು.

ಹದಿನೈದು ವರ್ಷಕ್ಕೂ ಹಳೆಯದಾದ ಮರಗಳನ್ನು ಕಡಿದು ಮರಗಳ ಮಾರಣಹೋಮ ಮಾಡಿದ್ದ ಪುರಸಭೆ ಅಧಿಕಾರಿಗಳ ವಿರುದ್ಧ  ಪುರಸಭೆ ಅಧಿಕಾರಿಗಳ ಅಂದಾದರ್ಬಾರ್! ಸ್ಮಶಾನದಲ್ಲಿದ್ದ ಮರಗಳ ಮಾರಣ ಹೋಮ!
ಎಂಬ ಶೀರ್ಷಿಕೆಯಡಿ ನುಡಿಜೇನು ಪತ್ರಿಕೆ ವರದಿ ಮಾಡಿದ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ಬಾರಿ ಆಕ್ರೋಶ ವ್ಯಕ್ತವಾಗಿತ್ತು, ಹಿಂದೂ ಸ್ಮಶಾನ ಭೂಮಿ ಅಭಿವೃದ್ಧಿ ಕಮಿಟಿಯ ಮುಖ್ಯಸ್ಥರು ಸ್ಮಶಾನದ ಮರಗಳ ಮೇಲೆ ನಡೆದ ದೌರ್ಜನ್ಯದ ಕುರಿತು ಪುರಸಭೆ ಮುಖ್ಯಾಧಿಕಾರಿಗೆ ಧಿಕ್ಕಾರ ಕೂಗಿ ಎಚ್ಚರಿಸಿದ್ದರು. ಅದರಂತೆಯೇ  ಮಾಡಿದ ತಪ್ಪನ್ನು ಮುಚ್ಚಿಹಾಕಲು ರಾತ್ರೋ ರಾತ್ರಿ ಬುಡದಲ್ಲೇ ಕತ್ತರಿಸಿದ ಮರವನ್ನು ಮತ್ತೆ ನೆಟ್ಟು ಬಯಲಾಟ ಪ್ರದರ್ಶಿಸಿದ್ದು ಸಾರ್ವಜನಿಕ ವಲಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿತ್ತು.

ಪತ್ರಿಕೆಯಲ್ಲಿ ಸುದ್ಧಿ ಬರುತ್ತಿದ್ದಂತೆ ಎಚ್ಚೆತ್ತ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಮಶಾನ ಭೂಮಿಯಲ್ಲಿ ಮರಗಳನ್ನು ಕಡಿದ ಬಗ್ಗೆ ಪಂಚನಾಮೆ ನಡೆಸಿ ಮುಖ್ಯಾಧಿಕಾರಿಯ ಮೇಲೆ ಎಫ್ ಐ ಆರ್ ದಾಖಲಿಸಿದ್ದಾರೆ.

ಬಲಿಕಾ ಬಕ್ರಾ! ಗುತ್ತಿಗೆದಾರನೇ ಆ ಚೋಕ್ರಾ!

ಸ್ಮಶಾನ ಭೂಮಿಯಲ್ಲಿ ಮರ ಕಡಿದ ಬಗ್ಗೆ ಪತ್ರಿಕೆಯಲ್ಲಿ ವರದಿ ಬರುತ್ತಿದ್ದಂತೆ ಎಚ್ಚೆತ್ತ ಪುರಸಭೆ ಅಧಿಕಾರಿಗಳು ಪ್ರಕರಣವನ್ನು ತಿರುಚಲು ಹರಸಾಹಸ ಪಟ್ಟಿದ್ದರು,ಕತ್ತರಿಸಿದ ಮರದ ಕಾಂಡವನ್ನೇ ಮತ್ತೆ ನೆಟ್ಟಿದ್ದರು ಈ ವಿಷಯ ಸಾರ್ವಜನಿಕ ವಲಯದಲ್ಲಿ ಅಪಹಾಸ್ಯಕ್ಕೆ ಇಡಾಗುತ್ತಿದ್ದಂತೆ ಹಾಲಕ್ಕಿ ಸಮುದಾಯದ ಗುತ್ತಿಗೆದಾರನೋರ್ವನ ಮೇಲೆ ಮರ ಕಡಿದ ಪ್ರಕರಣವನ್ನು ಹೊರಿಸಲು ಮುಂದಾಗಿದ್ದು,ಆತನಿಗೆ ನೋಟಿಸ್ ಕೂಡ ನೀಡಿದ್ದರು ಎನ್ನಲಾಗಿದೆ.

Leave a Reply

Your email address will not be published. Required fields are marked *