ಗೊಬ್ಬರದಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು!

Spread the love

ಅಂಕೋಲಾ: ಗೊಬ್ಬರದ ಗುಂಡಿಗೆ ಬಿದ್ದು ಎರಡೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ತಾಲೂಕಿನ ಡೊಂಗ್ರಿ ಗ್ರಾಪಂ ವ್ಯಾಪ್ತಿಯ ಹಳವಳ್ಳಿಯಲ್ಲಿ ನಡೆದಿದೆ.

ಹಳವಳ್ಳಿ ಗ್ರಾಮದ ಮೂಲೆಮನೆಯ ಶ್ರೀಕಾಂತ್ ಹೆಬ್ಬಾರ್ ಮತ್ತು ರೂಪಾ ದಂಪತಿಯ ದ್ವಿತೀಯ ಪುತ್ರಿ ಸಾದ್ವಿ ಶ್ರೀಕಾಂತ್ ಹೆಬ್ಬಾರ್ (2.3) ವರ್ಷ ಸಾವನ್ನಪ್ಪಿದ ಮಗುವಾಗಿದ್ದಾಳೆ.

ಬುಧವಾರ ಬೆಳಿಗ್ಗೆ ಎಂದಿನಂತೆ ಸಾದ್ವಿ ಅಪ್ಪನೊಂದಿಗೆ ದನದ ಕೊಟ್ಟಿಗೆ ಬಳಿ ತೆರಳಿದ್ದಾಳೆ,ಕೊಟ್ಟಿಗೆಯ ಕೆಲಸದಲ್ಲಿ ಮಗ್ನರಾಗಿದ್ದ ಶ್ರೀಕಾಂತ್ ಹೆಬ್ಬಾರ್ ಮಗಳ ಚಲನವಲನವನ್ನು ಗಮನಿಸಿರಲಿಲ್ಲ,ಕೆಲ ಸಮಯದ ಬಳಿಕ ಮಗಳ ಸದ್ದು ಕೇಳಿಸದೆ ಇದ್ದುದರಿಂದ ಸುತ್ತಲೂ ಹುಡುಕಾಟ ನಡೆಸಿದ್ದಾನೆ. ಎಲ್ಲಿಯೂ ಕಾಣದ ಸಾದ್ವಿ ಗೊಬ್ಬರ ಗುಂಡಿಯಲ್ಲಿ ಬಿದ್ದಿರುವುದು ಕಂಡುಬಂದಿದೆ ತಕ್ಷಣ ಗುಂಡಿಯಿಂದ ಮಗುವನ್ನು ಮೇಲಕೆತ್ತಲಾಗಿದ್ದು ತಾಲೂಕಾಸ್ಪತ್ರೆ ಕರೆತಂದಿದ್ದಾರೆ,ವೈದ್ಯರು ಪರೀಕ್ಷಿಸಿದಾಗ ಮಗು ಸಾವನ್ನಪ್ಪಿರುವ ಬಗ್ಗೆ ದೃಢಪಡಿಸಿದ್ದಾರೆ.ಪುಟ್ಟ ಕಂದಮ್ಮನ ಸಾವಿನಿಂದ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.

ತೆರೆದ ಗುಂಡಿಗಳಿಂದ ಎಚ್ಚರ!
ಹಳ್ಳಿಗಳಲ್ಲಿ ತೆರೆದ ಗುಂಡಿಗಳು ಹೆಚ್ಚಾಗಿ ಕಂಡುಬರುತ್ತದೆ ಮಳೆಗಾಲದಲ್ಲಿ ನೀರು ತುಂಬಿಕೊಳ್ಳುವುದರಿಂದ ಇಂತಹ ಅವಘಡಗಳು ಸಂಭವಿಸುತ್ತದೆ.ಆದ್ದರಿಂದ ಈ ಕುರಿತು ಸಾರ್ವಜನಿಕರು ಮುಂಜಾಗ್ರತಾ ಕ್ರಮ ವಹಿಸಬೇಕಾಗಿದೆ.

Leave a Reply

Your email address will not be published. Required fields are marked *