ಅಂಕೋಲಾ: ತಾಲೂಕು ಪಂಚಾಯತ್ ಅಂಕೋಲದಲ್ಲಿ ಸರಳ-ಮಾನವೀಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಸುನೀಲ್ ಎಂ ಭಟ್ಕಳ ತಾಲೂಕು ಪಂಚಾಯತ್ ಇ ಓ ಆಗಿ ವರ್ಗಾವಣೆಯಾಗಿದ್ದಾರೆ.

ಹೌದು… ಅಂಕೋಲಾ ತಾಲೂಕಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಅತ್ಯುತ್ತಮವಾಗಿ ಜನಪರ ಕಾಳಜಿಯಿಂದ ತಾಪಂ ಸಹಾಯಕ ನಿರ್ದೇಶಕ ಹುದ್ದೆಯಲ್ಲಿ (ಗ್ರಾಮೀಣ ಉದ್ಯೋಗ)ಸಮರ್ಥವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಕಳೆದ ಎರಡು ವರ್ಷಗಳಿಂದ ತಾಪಂ ಕಾರ್ಯನಿರ್ವಹಣಾಧಿಕಾರಿಯಾಗಿ ಉತ್ತಮವಾಗಿ ಸೇವೆಸಲ್ಲಿಸುತ್ತಿದ್ದರು. ತಾಲೂಕಿನಲ್ಲಿ ಬಂದೇರಗಿದಂತ ಅನೇಕಾರು ದುರ್ಘಟನೆಗಳಾದ ಗಂಗಾವಳಿ ನದಿ ಪ್ರವಾಹ,ಶಿರೂರು ಗುಡ್ಡಕುಸಿತದಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ನೊಂದವರ ಜೊತೆಗೆ ಇದ್ದು ದೈರ್ಯತುಂಬಿದ್ದರು.ಹಾಗೆಯೇ ಇಲಾಖೆಯ ಪ್ರತಿಯೊಬ್ಬ ಸಿಬ್ಬಂದಿಗಳಿಗೂ ಏನೇ ಅಡ್ಡಿ ಆತಂಕಗಳು ಎದುರಾದರೂ ಅವರೊಂದಿಗೆ ಇದ್ದು ಪರಿಹಾರದ ಮೂಲವನ್ನು ಹುಡುಕಿಕೊಳ್ಳುತ್ತಿದ್ದರು. ಹೀಗೆ ಅನೇಕಾರು ಉತ್ತಮ ಕೆಲಸಗಳನ್ನು ಮಾಡುತ್ತ ಜನಪ್ರಿಯ ಅಧಿಕಾರಿಯಾಗಿದ್ದ ಅವರು ಭಟ್ಕಳ ತಾಪಂ ಇಓ ಆಗಿ ವರ್ಗಾವಣೆ ಹೊಂದಿದ್ದಾರೆ.

ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದು.
ಈ ಸಂದರ್ಭದಲ್ಲಿ ಮಾತನಾಡಿದ ಸುನೀಲ್ ಎಂ ಸರಕಾರಿ ನೌಕರರೆಂದರೆ ವರ್ಗಾವಣೆ ಸಹಜ ಆದರೆ ಅಂಕೋಲಾ ತಾಲೂಕಿನಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಇಲ್ಲಿಯ ಜನರು ಮುಖ್ಯಕಾರಣಿಕರ್ತರು. ಹಾಗೆಯೇ ಪ್ರತಿಯೊಂದು ಗ್ರಾಪಂ ಅಧ್ಯಕ್ಷರು,ಸದಸ್ಯರು ನಮ್ಮೊಂದಿಗೆ ಕೈಜೋಡಿಸಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಸಹಕರಿಸಿದ್ದಾರೆ ಅವರೆಲ್ಲರಿಗೂ ಈ ಸಂದರ್ಭದಲ್ಲಿ ನೆನೆಯುತ್ತೇನೆ.ಹಾಗೆಯೇ ನಮ್ಮ ಸಿಬ್ಬಂದಿಗಳು ಸಹಿತ ಪ್ರತಿಯೊಂದು ಹಂತದಲ್ಲಿಯೂ ನಮ್ಮೊಂದಿಗೆ ಇದ್ದು, ಜನಪರ ಕಾರ್ಯಕ್ಕೆ ಕೈಜೋಡಿಸಿದ್ದಾರೆ ಎಂದರು.


Leave a Reply