ಅಂಕೋಲಾ: ತಾಲ್ಲೂಕಿನ ಬ್ರಹ್ಮೂರು ಗ್ರಾಮದಲ್ಲಿ ನಡೆದ ಕೇಶವ ದೇವರ ಜಾತ್ರಾ ಮಹೋತ್ಸವದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್ ನಾಯ್ಕ ಪಾಲ್ಗೊಂಡು ದೇವರ ರಥೋತ್ಸವದ ಮೆರವಣಿಗೆ ವೀಕ್ಷಿಸಿ ದೇವರ ದರ್ಶನ ಪಡೆದರು.

ಬಳಿಕ ಶ್ರೀ ಮಹಾಗಣಪತಿ ಹಾಗೂ ಶ್ರೀ ಕೇಶವ ದೇವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಮಾತನಾಡಿ ಕನ್ನಡದ ಕಲೆಯನ್ನು ವಿಶ್ವಕ್ಕೆ ಪರಿಚಯಿಸಿರುವ ಹಿರಿಮೆ ಯಕ್ಷಗಾನ ಕಲಾವಿದರಿಗೆ ಸಲ್ಲುತ್ತದೆ. ಗ್ರಾಮೀಣ ಭಾಗದಲ್ಲಿ ಯಕ್ಷಗಾನ ಹಾಗೂ ಉಳಿದ ಕಲೆ ಉಳಿಸುವ ಹಾಗೂ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರದು. ಹಳೆ ಬೇರು ಹೊಸ ಚಿಗುರಿನಂತೆ ಈ ಪುರಾತನ ದೇವಸ್ಥಾನವು ಮುಂದಿನ ದಿನಗಳಲ್ಲಿ ಹೊಸ ರೂಪವನ್ನು ಪಡೆದು ಅದರ ಕೀರ್ತಿ ಕರ್ನಾಟಕದಾದ್ಯಂತ ಪಸರಿಸುವುದು ಎಂದರು. ನಂತರ ಎಲ್ಲಾ ಕಲಾವಿದರಿಗೆ ಗ್ರಾಮಸ್ಥರಿಗೆ ಧನ್ಯವಾದಗಳು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಕೇಶವದೇವ ಯಕ್ಷಗಾನ ಹಾಗೂ ಸಾಂಸ್ಕೃತಿಕ ಕಲಾವೃಂದ(ರಿ ) ವತಿಯಿಂದ ಕ್ಷೇತ್ರದಲ್ಲಿ ರೂಪಾಲಿ ನಾಯ್ಕ ಅವರು ಮಾಡಿದ ಅನೇಕ ಜನ ಪರ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸುವ ಮೂಲಕ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸೀತಾರಾಮ್ ಪುರಾಣಿಕ, ಅಂಕೋಲಾ ಮಂಡಲ ಅಧ್ಯಕ್ಷ ಗೋಪಾಲ ಕೃಷ್ಣ ವೈದ್ಯ, ಪುರಸಭೆ ಅಧ್ಯಕ್ಷ ಸೂರಜ ನಾಯ್ಕ, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಜಗದೀಶ ನಾಯಕ ಮೊಗಟಾ, ಪುರಸಭೆ ಸದಸ್ಯರಾದ ಶ್ರೀಧರ ನಾಯ್ಕ, ಮಂಗೇಶ್ ಆಗೇರ್, ಬಿಜೆಪಿ ಪ್ರಮುಖರಾದ ಸಂಜಯ ನಾಯ್ಕ, ಚಂದ್ರಕಾಂತ ನಾಯ್ಕ,ಮೊಗಟಾ ಗ್ರಾಮ ಪಂಚಾಯತ ಸದಸ್ಯರಾದ ದೇವಾನಂದ ನಾಯಕ, ಹಾಗೂ ಸಂದೇಶ ನಾಯಕ , ಹಾಗೂ ಮಾಹಾಶಕ್ತಿ ಕೇಂದ್ರ ಶಕ್ತಿ ಕೇಂದ್ರ ಪ್ರಮುಖರು, ಕಾರ್ಯಕರ್ತರು, ಭಕ್ತಾಧಿಗಳು ಶ್ರೀ ಕೇಶವದೇವ ಯಕ್ಷಗಾನ ಹಾಗೂ ಸಾಂಸ್ಕೃತಿಕ ಕಲಾವೃಂದ(ರಿ ) ಸದಸ್ಯರು ದೇವಸ್ಥಾನ ಕಮಿಟಿಯವರು ಉಪಸ್ಥಿತರಿದ್ದರು.


Leave a Reply