ANKOLA|ನಾವು ಎಷ್ಟೇ ಎತ್ತರಕ್ಕೆ ಬೆಳೆದರು ಈ ಮಣ್ಣಿನ ಮಕ್ಕಳು ಎಂಬುದನ್ನು ಮರೆಯಬಾರದು-ಎಂ ಜಿ ನಾಯ್ಕ.

Spread the love

ಅಂಕೋಲಾ: ನಾವು ಎಷ್ಟೇ ಎತ್ತರಕ್ಕೆ ಬೆಳೆದರು,ಎಷ್ಟೇ ಸಾಧನೆ ಮಾಡಿದರು ನಾವು ಈ ಮಣ್ಣಿನ ಮಕ್ಕಳು ಎನ್ನುವುದನ್ನು ಮರೆಯಬಾರದು ಎಂದು ಕುಮಟಾ ಬಾಳಿಗಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಂ ಜಿ ನಾಯ್ಕ ಹೇಳಿದರು.

ಅವರು ತಾಲೂಕಿನ ಆರ್ಯ ಈಡಿಗ ನಾಮಧಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಭಾಂಗಣದಲ್ಲಿ ಆರ್ಯ ಈಡಿಗ ನಾಮಧಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂಘದ ವಾರ್ಷಿಕ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಸಮುದಾಯದ ಮಕ್ಕಳಲ್ಲಿ ಏನನ್ನಾದರೂ ಸಾಧನೆಗೈಯ್ಯಬೇಕೆಂಬ ತುಡಿತ ಇರಬೇಕು, ಹಾಗಿದ್ದರೆ ಮಾತ್ರ ಸಾಮಾಜಿಕ ಬೆಳವಣಿಗೆ ಸಾಧ್ಯ.ಇಂತಹ ಕಾರ್ಯಕ್ರಮಗಳಲ್ಲಿ ಸಮಾಜದ ಹೆಚ್ಚಿನ ವಿದ್ಯಾರ್ಥಿಗಳನ್ನು ಕರೆತಂದು ಅವರ ಮುಂದೆ ಸಾಧನೆಗೈದವರಿಗೆ ಸನ್ಮಾನಿಸಿದರೆ ವಿದ್ಯಾರ್ಥಿಗಳಲ್ಲಿ ಚೈತನ್ಯದ ಚಿಲುಮೆ ಮೂಡಿಸಲು ಸಾಧ್ಯ.ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಜ್ಜಾಗಿರುವವರಿಗೆ ಉಪನ್ಯಾಸ ನೀಡಲು ಸಿದ್ಧನಿದ್ದೇನೆ ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ್ ಎಂ ನಾಯ್ಕ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿ ಸಾಧನೆಗೈದ ಸಾಧಕರನ್ನು ನೋಡಿ ಮಕ್ಕಳು ಪ್ರೇರಣೆಯಾಗಬೇಕು, ಇವತ್ತಿನ ದಿನಗಲ್ಲಿ ನಮ್ಮ ಸಮಾಜ ಎತ್ತರಕ್ಕೆ ಬೆಳೆಯುತ್ತಿದೆ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮವರು ಮುನ್ನುಗ್ಗುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಸಮಾಜದ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ,ಮುಂದಿನ ದಿನಗಳ್ಳಲಿ ರಾಜ್ಯ ಮಟ್ಟದ ಕಾರ್ಯಕ್ರಮವಾಗಿ ರೂಪುಗೊಳ್ಳಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಂತವೈದ್ಯರಾದ ಕರುಣಾಕರ ನಾಯ್ಕ ಭವ್ಯವಾದ ಕಟ್ಟಡದಲ್ಲಿ ಇಂತಹ ಕಾರ್ಯಕ್ರಮಗಳು ಹಮ್ಮಿಕೊಳ್ಳುವುದೇ ಸಂಘದ ನಿಜವಾದ ಸಾಧನೆ.ನಮಗೆ ಯಾರಾದರೂ ಕೀಳುಮಟ್ಟದಲ್ಲಿ ನೋಡಿದ್ದಾರೋ ಅವರ ಮುಂದೆ ತಲೆ ಎತ್ತಿ ನಿಲ್ಲುವಂತೆ ಬೆಳೆಯಬೇಕು, ಹಾಗೆಯೇ ಅಸಹಾಯಕರ ನೆರವಿಗೆ ನಿಲ್ಲುವುದೇ ನಿಜವಾದ ಸಮಾಜಮುಖಿ ಕಾರ್ಯ,ನಮ್ಮ ಸಮಾಜ ಎಲ್ಲಾ ಕ್ಷೇತ್ರದಲ್ಲಿ ಬೆಳೆದು ಮತ್ತಷ್ಟು ಸದೃಢವಾಗಬೇಕು,ಸಮಾಜದ ಸಂಘಟನೆ ಹರಿಯುವ ನೀರಿನಂತೆ ಹರಿದು ಸಾಗರದಂತಾಗಬೇಕು ಎಂದರು.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕ ವಿನಾಯಕ ಎಸ್ ನಾಯ್ಕ, ಸ್ಟೇಟ್ ಬ್ಯಾಂಕ್ ಹೊನ್ನಾವರ ಶಾಖೆಯ ವ್ಯವಸ್ಥಾಪಕ ಮಂಜುನಾಥ್ ಎಚ್ ನಾಯ್ಕ, ವೈದ್ಯರಾದ ಎಸ್ ನಿತೀಶಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜದ ಸಾಧಕರಾದ ಕಲಾವಿಬಾಗದಲ್ಲಿ ಅಲಗೇರಿ ಪ್ರೌಢ ಶಾಲೆಯ ಶಿಕ್ಷಕ ನಾಗರಾಜ್ ಹನೆಹಳ್ಳಿ, ಧಾರ್ಮಿಕ ಕ್ಷೇತ್ರದಲ್ಲಿ ದಾಮೋದರ ನಾಯ್ಕ,ಶೈಕ್ಷಣಿಕ ಕ್ಷೇತ್ರದಲ್ಲಿ ಕುಮಾರಿ ಚೈತ್ರಾ ನಾಗಪ್ಪ ನಾಯ್ಕ ಹಾಗೂ ಅನನ್ಯ ಉದಯ ನಾಯ್ಕ ಸಹಕಾರಿ ಕ್ಷೇತ್ರದಲ್ಲಿ ಭೈರವ ಡಿ ನಾಯ್ಕ,ಉಮೇಶ ನಾಯ್ಕ,ನಾಗೇಂದ್ರ ಸಿ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ನಂತರದಲ್ಲಿ 2023/24 ರಲ್ಲಿ ಹಲವು ಇಲಾಖೆಗಳಲ್ಲಿ ಸೇವಾ ನಿವೃತ್ತಿ ಹೊಂದಿದ ನಿರ್ಮಲಾ ಕೆ ನಾಯ್ಕ,ಶಾಂತಿ ಆರ್ ನಾಯ್ಕ,ರಜನಿ ನಾಯ್ಕ,ವಿನೋದ್ ಎಸ್ ನಾಯ್ಕ,ಶಾರದಾ ನಾಯ್ಕ,ರಮಾ ಅಜೀತ್ ನಾಯ್ಕ,ಸವಿತಾ ಆರ್ ನಾಯ್ಕ,ನಿತ್ಯಾನಂದ ಆರ್ ನಾಯ್ಕ,ಡಿ ಡಿ ನಾಯ್ಕ,ಉದಯ ಬಿ ನಾಯ್ಕ,ಶಕುಂತಲಾ ಎಂ ನಾಯ್ಕ,ಯಶವಂತ್ ವಿ ನಾಯ್ಕ,ಕಮಲಾಕರ್ ನಾಯ್ಕ,ಉದಯ ಆರ್ ನಾಯ್ಕ,ಗಣಪತಿ ಎಸ್ ನಾಯ್ಕ,ಗಜಾನನ ಎಂ ನಾಯ್ಕ,ವೆಂಕಟರಮಣ ನಾಯ್ಕ,ಸಾಧನಾ ಡಿ ನಾಯ್ಕ ಸನ್ಮಾನಿಸಿ ಗೌರವಿಸಾಯಿತು.

ಸನ್ಮಾನ ಸ್ವೀಕರಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ನ್ಯಾಯವಾದಿ ಭೈರವ ನಾಯ್ಕ ಮಾತನಾಡಿ ಪ್ರತಿವರ್ಷ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ನೌಕರರ ಸಂಘದ ಕಾರ್ಯ ಶ್ಲಾಘನೀಯ ಎಂದರು.

ಕಲಾ ಕ್ಷೇತ್ರದಲ್ಲಿ ಸಾಧನೆಗೈದ ನಾಗರಾಜ ಹನೆಹಳ್ಳಿ ನಾವು ಮುಂದುವರೆದರೆ ಮಾತ್ರ ಸಮಾಜ ಮುಂದುವರೆಯಲು ಸಾಧ್ಯ,ಸಾಧಿಸಬೇಕಾದದ್ದು ಬೇಕಾದಷ್ಟಿದೆ ಇಂದಿನ ಸನ್ಮಾನ ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.

ನನ್ನ ಮಗಳಿಗೆ ಏನನ್ನಾದರೂ ಸಾಧನೆ ಮಾಡಬೇಕೆನ್ನುವ ಹಠ ಇತ್ತು,ಅಂದಿನ ಜಿಲ್ಲಾಧಿಕಾರಿಯಾಗಿದ್ದ ಮುಲ್ಲೈ ಮೂಹಿಲನ್ ರವರು ನೀಡಿರುವ ಸಲಹೆಗಳು ಮತ್ತಷ್ಟು ಪ್ರೇರಣೆ  ನೀಡಿತ್ತು,ಹಾಗೆಯೇ ಸಮಾಜ ಬಾಂಧವರ ಆಶೀರ್ವಾದದಿಂದ ನನ್ನ ಮಗಳು ಅನನ್ಯಾ ನಾಯ್ಕ  ಐಐಟಿ ಮದ್ರಾಸಿಗೆ ಹೋಗಲು ಸಾಧ್ಯವಾಗಿದೆ ಎಂದರು.

ನಾಮಧಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿಕ್ಷಕ ವಿನಾಯಕ ನಾಯ್ಕ ಸರ್ವರನ್ನು ಸ್ವಾಗತಿಸಿದರು, ಶಿಕ್ಷಕ ಕೃಷ್ಣ ಜಿ ನಾಯ್ಕ ನಿರೂಪಿಸಿದರು.ಮಹಾಬಲೇಶ್ವರ ನಾಯ್ಕ ವಂದಿಸಿದರು.

Leave a Reply

Your email address will not be published. Required fields are marked *