ಅಂಕೋಲಾ: ತಾಲೂಕಿನ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣದ ವಿರುದ್ಧ ನಡೆಯುತ್ತಿರುವ ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.ಮೀನುಗಾರರ ವಿಷಯದಲ್ಲಿ ಯಾರು ರಾಜಕೀಯ ಮಾಡದೆ ಎಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕಿದೆ ಹಾಗೆಯೇ ನಮ್ಮ ಹೋರಾಟ ಕಾನೂನಾತ್ಮಕವಾಗಿ ಹೋರಾಟವಾಗಬೇಕು,ಈ ಹೋರಾಟದಲ್ಲಿ ನಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ಕಾರವಾರ ಅಂಕೋಲಾ ಶಾಸಕ ಸತೀಶ ಸೈಲ್ ಹೇಳಿದರು.

ಅವರು ಪಟ್ಟಣದ ಕೋಟೆವಾಡದ ನಾಮಧಾರಿ ನೌಕರರ ಸಂಘದ ಸಭಾಭವನದಲ್ಲಿ ನಡೆದ ಕೇಣಿ ಬಂದರು ವಿರೋಧಿ ಸಮಿತಿ ಮತ್ತು ತಾಲೂಕಿನ ಜನತೆಯ ಸಮಾಲೋಚನೆ ಸಭೆಯಲ್ಲಿ ಮಾತನಾಡಿ ಅವರು ಕರಾವಳಿಯಲ್ಲಿ ಸರ್ಕಾರ ಹಲವು ಯೋಜನೆಗಳನ್ನು ತರುತ್ತಿದ್ದು ಸ್ಥಳೀಯರಿಗೆ ಬೇಡವಾದ ಯೋಜನೆಯ ಪರ ನಾನು ಯಾವತ್ತೂ ನಿಲ್ಲುವುದಿಲ್ಲ, ಕೇಂದ್ರ ಸರಕಾರದ ಯೋಜನೆಗಳನ್ನು ವಿರೋಧಿಸಿದರೆ ರಾಮ ವಿರೋಧಿಗಳು ಎನ್ನುತ್ತಾರೆ ಬಿಜೆಪಿಯವರು, ಎಲ್ಲಾ ಸಮುದಾಯ ಒಗ್ಗಟ್ಟಾಗಿ ಹೋರಾಟ ಕೈಗೊಳ್ಳುತ್ತಿರುವುದು ಸಂತಸ ನಿಮ್ಮೊಂದಿಗೆ ಕಾನೂನಾತ್ಮಕ ಹೋರಾಟದಲ್ಲಿ ನಾನು ಸದಾ ಇರುತ್ತೇನೆ ಎಂದರು.


Leave a Reply