ಅಂಕೋಲಾ: ಗ್ರೀನ್ ಫೀಲ್ಡ್ ಬಂದರು ಕಾಮಗಾರಿಯಿಂದ ಮೀನುಗಾರರಿಗೆ ಸಂಕಷ್ಟ ಎದುರಾಗಲಿದ್ದು, ಮೀನುಗಾರರ ಕುಟುಂಬಗಳು ಇದನ್ನು ವಿರೋಧಿಸಿ ಬೀದಿಗಿಳಿದಿದೆ,ದೊಡ್ಡ ಮಟ್ಟದ ಹೋರಾಟ ನಡೆಸುತ್ತಿದ್ದೆ, ಆದರೆ ನಮ್ಮ ಸಮುದಾಯದವರೆ ಆದ ಸಚಿವ ಮಂಕಾಳು ವೈದ್ಯ ಮಾತ್ರ ತುಟಿಕ್,ಪಿಟಿಕ್ ಅನ್ನುತ್ತಿಲ್ಲ ಕಂಡರು ಕಾಣದಂತೆ ಸುಮ್ಮನಿದ್ದಾರೆ ಎಂದು ಸಚಿವ ಮಂಕಾಳು ವೈದ್ಯರ ವಿರುದ್ಧ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೆಕರ್ ಕಿಡಿ ಕಾರಿದ್ದಾರೆ.

ಅವರು ಪಟ್ಟಣದ ಕೋಟೆವಾಡದ ನಾಮಧಾರಿ ನೌಕರರ ಸಂಘದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕೇಣಿ ಬಂದರು ವಿರೋಧಿ ಸಮಿತಿ ಮತ್ತು ತಾಲೂಕಿನ ಜನತೆಯ ಸಮಾಲೋಚನೆ ಸಭೆಯಲ್ಲಿ ಮಾತನಾಡಿ ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ವೈದ್ಯ ಮೀನುಗಾರ ಸಮುದಾಯದಲ್ಲಿ ಹುಟ್ಟಿ ಮೀನುಗಾರರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದಿರುವುದು ನಾಚಿಕೆಗೇಡಿನ ಸಂಗತಿ, ಮೀನುಗಾರರು ಇಷ್ಟೊಂದು ಸಮಸ್ಯೆ ಅನುಭವಿಸುತ್ತಿದ್ದಾರೆ ಆದರೆ ಅವರು ಏನು ಗೊತ್ತಿಲ್ಲದವರ ಹಾಗೆ ಇದ್ದಾರೆ,ಹೋರಾಟ ಇಷ್ಟೊಂದು ತೀವೃ ಗತಿಯಲ್ಲಿ ಸಾಗಿದರು ಯಾವುದೇ ರೀತಿಯ ಗಮನ ನೀಡದಿರುವುದು ಬೇಸರದ ಸಂಗತಿ ಮೀನುಗಾರರು ಕಣ್ಣೀರು ಹಾಕುತ್ತಿದ್ದರೂ ಸಚಿವರ ಮೌನ ಯಾಕೆ ಎಂದು ತಿಳಿಯುತ್ತಿಲ್ಲ ಎಂದು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಂದಿನ ಸಭೆಯಲ್ಲಿ ಶಾಸಕ ಸತೀಶ್ ಸೈಲ್ ಬಂದರು ವಿರೋಧಿಸಲು ಮೀನುಗಾರರ ಪರವಾಗಿ ನಿಲ್ಲುತ್ತೇನೆ ಹಾಗೆಯೇ ಕಾನೂನಾತ್ಮಕ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುತ್ತೇನೆ ಎಂದಿದ್ದಾರೆ. ಬಂದರು ವಿರೋಧ ಹೋರಾಟ ಸಮಿತಿ ಶಾಸಕರ ಗೌರವಾಧ್ಯಕ್ಷತೆಯಲ್ಲಿ ನಡೆಯಲಿದೆ,ಹೋರಾಟದ ಖರ್ಚು ವೆಚ್ಚಗಳನ್ನು ಸಹ ಭರಿಸುತ್ತೇನೆ ಎಂಬ ಮಾತು ಕೊಟ್ಟಿದ್ದಾರೆ,ಮೀನುಗಾರರ ವಿರುದ್ಧ ಯಾರೇ ಬಂದರು,ಯಾವುದೇ ಸರ್ಕಾರ ಬಂದರು ನಾನಂತೂ ಮೀನುಗಾರರ ಪರವಾಗಿ ಇರುತ್ತೇನೆ ಎಂದರು.


Leave a Reply