ಶಿರೂರು ಗುಡ್ಡ ಕುಸಿತದಲ್ಲಿ ಹಾನಿಗೊಳಗಾದ ಕುಟುಂಬಕ್ಕೆ ಪುನರ್ವಸತಿ ಹಕ್ಕು ಪತ್ರ ನೀಡಿದ ಸತೀಶ್ ಸೈಲ್

Spread the love

ಅಂಕೋಲಾ: ಶಿರೂರು ಗುಡ್ಡ ಕುಸಿತದಲ್ಲಿ ಹಾನಿಯಾಗಿದ್ದ ಉಳುವರೆ ಗ್ರಾಮದ 8 ಕುಟುಂಬಗಳಿಗೆ ಶಾಸಕ ಸತೀಶ್ ಸೈಲ್ ಪುನರ್ವಸತಿ ಹಕ್ಕು ಪತ್ರವನ್ನು ನೀಡಿದರು.

ರಾಷ್ಟ್ರೀಯ ಹೆದ್ದಾರಿ 66 ರ ಶಿರೂರು ಬಳಿ ಭೀಕರ ಗುಡ್ಡ ಕುಸಿತದಿಂದ 11 ಮಂದಿ ಪ್ರಾಣಕಳೆದುಕೊಂಡಿದ್ದರು ಅದರಂತೆಯೇ ಉಳುವರೆ ಗ್ರಾಮದ ಗಂಗಾವಳಿ ನದಿ ತಟದಲ್ಲಿರುವ ಪ್ರದೇಶಗಳಿಗೆ ನೀರು ನುಗ್ಗಿದ್ದು,ನೀರಿನ ರಭಸಕ್ಕೆ ಕೆಲವು ಮನೆಗಳು ಸಂಪೂರ್ಣ ಕೊಚ್ಚಿ ಹೋಗಿದ್ದು ಅಲ್ಲಿಯ 8 ಕುಟುಂಬಗಳಿಗೆ ಉಳುವರೆ ಗ್ರಾಮದ ಪ್ಲಾಟ್ ನಂಬರ್ 20ರಲ್ಲಿ ಜಮೀನು ಮಂಜುರು ಮಾಡಿ ಪಟ್ಟ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಿರೂರು ಗುಡ್ಡ ಕುಸಿತ ಜಿಲ್ಲೆಯ ಅತ್ಯಂತ ಕರಾಳ ದುರ್ಘಟನೆಯಾಗಿದ್ದು,ಅಲ್ಲಿ ನೋಂದವರಿಗೆ ನಮ್ಮ ಸರಕಾರ ಕೈಜೋಡಿಸಿದೆ ಅದರಂತೆಯೇ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಲ್ಲಿ ಹಾನಿಗೊಳಗಾದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಿದೆ,ಗಂಗಾವಳಿ ನದಿ ತೀರದಲ್ಲಿದ್ದ ಎಂಟು ಕುಟುಂಬಗಳು ಸಂಪೂರ್ಣವಾಗಿ ಮನೆ ಕಳೆದುಕೊಂಡು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪ್ರಥಮವಾಗಿ ಮನೆ ಕಳೆದುಕೊಂಡ ಎಂಟು ಕುಟುಂಬದವರು ಆಸ್ಪತ್ರೆಗೆ ದಾಖಲಾಗಿದ್ದರು. ಆ ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಿ ಅವರಿಗೆ ಸಹಕಾರವನ್ನು ನೀಡಿದ್ದೆವು. ನಂತರದಲ್ಲಿ ಉಳವರೆ ಗ್ರಾಮಕ್ಕೆ ತೆರಳಿ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ, ಸಹಾಯಕ ಆಯುಕ್ತೆ ಕಲ್ಯಾಣಿ ಕಾಂಬಳೆ, ಮತ್ತು ಇತರ ನಾಗರಿಕರ ಸಹಕಾರದಲ್ಲಿ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ನೀಡಿದ್ದೆವು.

ಆದರೆ ನಿವೇಶನವನ್ನು ಕೊಡುವುದು ಸ್ವಲ್ಪ ಗೊಂದಲವಾಗಿತ್ತು. ಈಗ ಈ ಎಂಟು ಮನೆಗಳಿಗೂ ನಿವೇಷನವನ್ನು ನೀಡಿದ ಆತ್ಮ ತೃಪ್ತಿ ನನ್ನಲ್ಲಿದೆ.ಈ ನಿವೇಶನವನ್ನು ಸರಿಯಾಗಿಟ್ಟುಕೊಂಡು ಈ ಪ್ರದೇಶದಲ್ಲಿ ನದಿ ತೀರದಲ್ಲಿ ಇದ್ದವರು ವಾಸಿಸಬೇಕು. ಮತ್ತೆ ನಾವು ಆ ಸ್ಥಳಗಳಿಗೆ ತೆರಳಿದರೆ ಅನಾಹುತ ಖಚಿತ ಎನ್ನುವ ವಿಚಾರವನ್ನು ಗಂಗಾವಳಿ ನದಿ ತಟ್ಟದ ನಾಗರಿಕರು ತಿಳಿಸಿರುವುದರಿಂದ ಮೇಲ್ಭಾಗದಲ್ಲಿ ನಿವೇಶನವನ್ನು ನೀಡಿದ್ದೇವೆ.ಅದರಂತೆಯೇ ಇಂದು ಉಳುವರೆ ಗ್ರಾಮದ 8 ಕುಟುಂಬಗಳಿಗೆ ಪಟ್ಟ ನೀಡಿದ್ದೇನೆ, ಶಿರೂರು ಗುಡ್ಡ ಕುಸಿತದಲ್ಲಿ ಮಾದ್ಯಮದವರ ಕೊಡುಗೆ ಅಪಾರ ಎಂದರು.

ಈ ಸಂದರ್ಭದಲ್ಲಿ ಬೊಮ್ಮ ಅನಂತ ಗೌಡ, ಮಂಜುನಾಥ್ ಹನುಮಂತ ಗೌಡ,ಗಣಪತಿ ಬೊಮ್ಮ ಗೌಡ,ದಾದಾ ತುಳಸಪ್ಪ ಗೌಡ, ಪಾಂಡುರಂಗ ಈಶ್ವರ್ ಅಂಬಿಗ,ನೀಲಾ ಮುದ್ದು ಗೌಡ ,ಗೋವಿಂದ ಕೃಷ್ಣ ಗೌಡ,ಮೋಹನ್ ನಾರಾಯಣ ಅಂಬಿಗ ಎನ್ನುವವರಿಗೆ ಪಟ್ಟ ನೀಡಲಾಯಿತು.

ಈ ಸಂದರ್ಭದಲ್ಲಿ ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ,ತಹಶೀಲ್ದಾರ್ ನಿಶ್ಚಲ್ ನರೊನಾ,ಉಪ ತಹಶೀಲ್ದಾರ್ ಗಿರೀಶ್ ಜಾಂಬಾವಳಿಕರ್,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ,ಮಾಜಿ ಶಾಸಕ ಕೆ ಎಚ್ ಗೌಡ, ಜಿಪಂ ಮಾಜಿ ಸದಸ್ಯ ವಿನೋದ ನಾಯಕ,ಡಿಸಿಸಿ ಪ್ರದಾನ ಕಾರ್ಯದರ್ಶಿ ಮಂಜೇಶ್ವರ ನಾಯಕ,
ತಾಪಂ ಸ್ಥಾಯಿ ಮಾಜಿ ಅಧ್ಯಕ್ಷ ಮಂಜುನಾಥ್ ನಾಯ್ಕ,ಪ್ರಮುಖರಾದ ಉಪೇಂದ್ರ ನಾಯ್ಕ,ರಾಜೇಶ ನಾಯ್ಕ,ಜಗದೀಶ ಗೌಡ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *