ಕುಮಟಾ : ಗೋಕರ್ಣಕ್ಕೆ ಪ್ರವಾಸಕ್ಕೆಂದು ಬಂದಿದ್ದ ನಾಲ್ವರು ಯುವಕರ ಮೇಲೆ ಹೆಜ್ಜೇನು ದಾಳಿಮಾಡಿ ಓರ್ವ ಸಾವನ್ನಪ್ಪಿರುವ ಘಟನೆ ಅಂಕೋಲಾ ತಾಲೂಕಿನ ಹೊಸಕಂಬಿ ಸೇತುವೆಯ ಮೇಲೆ ನಡೆದಿದೆ.

ಹೌದು… ಗೋಕರ್ಣ ಪ್ರವಾಸಕ್ಕೆಂದು ಹುಬ್ಬಳ್ಳಿಯಿಂದ ಬಂದಿದ್ದ ಪ್ರವಾಸಿಗರಾದ ಆದರ್ಶ ಅಜಿತ್ ಕಳಸುರ,ಗಗನದೀಪ ಜುಟ್ಟಲ,ಸೂರಜ್ ಅನುರೆ,ರಾಹುಲ್ ಹುದ್ದರ ಹೊಸಕಂಬಿ ಸೇತುವೆಯ ಮೇಲೆ ಫೋಟೋ ಕ್ಲಿಕ್ಕಿಸಿಕೊಳ್ಳಲು ನಿಂತಿದ್ದು, ಈ ಸಂದರ್ಭದಲ್ಲಿ ಯುವಕರ ಮೇಲೆ ಹೆಜ್ಜೇನು ನೊಣಗಳು ಏಕಾಏಕಿ ದಾಳಿ ನಡೆಸಿದ್ದರ ಪರಿಣಾಮ ಹುಳುಗಳಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾರೆ. ಹುಬ್ಬಳ್ಳಿಯ ಸಪ್ತಗಿರಿ ಪಾರ್ಕ್ ಮೂಲದ ಆದರ್ಶ ಅಜೀತ ಕಳಸೂರು (24) ಎಂಬಾತನಿಗೆ ಜೇನುಹುಳುಗಳು ಹೆಚ್ಚಿನದಾಗಿ ಕಚ್ಚಿದ್ದರಿಂದ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಆತನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ,ಹೆಚ್ಚಿನ ಚಿಕಿತ್ಸೆಗೆ ಗೋಕರ್ಣದ ಶಾಸ್ತ್ರಿ ಪಾಲಿಕ್ಲಿನಿಕ್ ಆಸ್ಪತ್ರೆಗೆ ಕರೆತಂದು ಪರೀಕ್ಷಿಸಿದಾಗ ಸಾವನ್ನಪ್ಪಿರುವ ಬಗ್ಗೆ ದೃಢಪಟ್ಟಿದೆ.

ಹಾಗೆಯೇ ಉಳಿದ ಮೂವರಿಗೂ ಜೇನು ಹುಳುಗಳು ದಾಳಿ ನಡೆಸಿದ್ದು ಕುಮಟಾ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಸ್ಥಳಕ್ಕೆ ಎಎಸ್ಐ ಮಹಾಬಲೇಶ್ವರ ಹಾಗೂ ಪೊಲೀಸ್ ಸಿಬ್ಬಂದಿ ಸಲಿಂ ಮೊಕಾಶಿ ಪರಿಶೀಲನೆ ನಡೆಸಿದ್ದಾರೆ.


Leave a Reply