Year: 2025

ಸಭಾಭವನವನ್ನು ಸ್ವಂತ ಖರ್ಚಿನಿಂದ ನಿರ್ಮಿಸಿಕೊಟ್ಟ ರೂಪಾಲಿ ನಾಯ್ಕ! ಲೋಕಾಪರ್ಪಣೆ!

ಅಂಕೋಲಾ : ತಮ್ಮ ಸ್ವಂತ ಖರ್ಚಿನಿಂದಲೇ ನೂತನವಾಗಿ ನಿರ್ಮಿಸಿರುವ ಶ್ರೀ ಕೃಷ್ಣ ಸಭಾಭವನವನ್ನು ಸೋಮವಾರ ಮಾಜಿ ಶಾಸಕಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಸಂತೋಷ ನಾಯ್ಕ ತಮ್ಮ ಅಮೃತಹಸ್ತದಿಂದಲೇ ಲೋಕಾರ್ಪಣೆಗೊಳಿಸಿದರು. ಹೌದು..ತೆಂಕಣಕೇರಿಯ‌ ಶ್ರೀ ಕೃಷ್ಣ ಮಿತ್ರ ಮಂಡಳಿಗೆ ನೂತನವಾಗಿ ನಿರ್ಮಾಣಗೊಂಡ ಸಭಾಭವನವನ್ನು…

ವಿಧಾತ್ರಿ ಅಕಾಡೆಮಿಯಿಂದ ಡಿ.14 ಕ್ಕೆ ಮಥನ ಮಂಜರಿ ಕಾರ್ಯಕ್ರಮ

ಅಂಕೋಲಾ:ವಿಧಾತ್ರಿ ಅಕಾಡೆಮಿ ಮಂಗಳೂರು ಸಂಸ್ಥೆಯಿಂದ ಡಿಸೆಂಬರ್ 14 ರಂದು ಸಂಜೆ 4 ಗಂಟೆಗೆ ಅಂಕೋಲೆಯ ಐತಿಹಾಸಿಕ,ಪ್ರಾಕೃತಿಕ, ಭೌಗೋಳಿಕ ವಿಶೇಷತೆ ಹೊಂದಿರುವ ವಿಡಿಯೋ ಅನಾವರಣ, ಅಂಕೋಲೆಯ ಅಂತರ್ಯದ ಅನಾವರಣ ‘ಅರಳು’ ಕಾರ್ಯಕ್ರಮ ಮತ್ತು ಖ್ಯಾತ ವಾಗ್ಮಿಗಳ ಮಥನ ಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು…

ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯ-ಗೋಪಾಲಕೃಷ್ಣ ನಾಯಕ

ಅಂಕೋಲಾ: ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಕಲಾವಿದರು ಎಲೆ ಮರೆಯ ಕಾಯಿಯಂತಿದ್ದು, ಇವರಿಗೆ ಪ್ರೋತ್ಸಾಹ ಸಿಕ್ಕರೆ ಮಾತ್ರ ಉನ್ನತ ಸಾಧನೆ ಸಾಧ್ಯವಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಸ್ಪಂದನಾ ಪೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಹೇಳಿದರು. ಅವರು ಶ್ರೀ ಮಹಾಗಣಪತಿ…

ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ  ಕೇಣಿ ಪ್ರೌಢಶಾಲೆ ಆಯ್ಕೆ! ಅಭಿನಂದನೆ!

ಅಂಕೋಲಾ : ಪಟ್ಟಣದ ಜೈಹಿಂದ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ತಾಲೂಕಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವೈಯಕ್ತಿಕ ವಿಭಾಗದಲ್ಲಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಮಯೂರ ವಿನೋದ ನಾಯ್ಕ ಪ್ರಥಮ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ವಿಜ್ಞಾನ ಶಿಕ್ಷಕರಾದ…

ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಸಕ್ರಿಯವಾಗಿ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ-ಸಾಯಿ ಗಾಂವ್ಕರ್

ಅಂಕೋಲಾ: ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಪಕ್ಷದ ಎಲ್ಲಾ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ಬಾಗವಹಿಸಬೇಕೆಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸಾಯಿ ಗಾಂವ್ಕರ್ ಹೇಳಿದರು. ಅವರು ಪಟ್ಟಣದ ನಾಡವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಕಾರಿಣಿ ಸಭೆಯಲ್ಲಿ ಅದ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿ…

ಮನೆಯ ಮುಂದೆ ನಿಲ್ಲಿಸಿದ್ದ ಬೈಕಿನಿಂದ ಪೆಟ್ರೋಲ್ ಕಳ್ಳತನ; ಸಿಸಿಟಿವಿಯಲ್ಲಿ ದೃಶ್ಯ ಸೆರೆ!

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಗುಡಿಗಾರಗಲ್ಲಿಯಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಬೈಕಿನಿಂದ ಇಬ್ಬರು ಕಳ್ಳರು ಪೆಟ್ರೋಲ್ ಕದಿಯಲು ಯತ್ನಿಸಿದ್ದು, ಈ ಕೃತ್ಯವು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು,ಈ ಘಟನೆಯಿಂದಾಗಿ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಗುಡಿಗಾರಗಲ್ಲಿಯ ನಿವಾಸಿ…

ಜೋಗ್ ಫಾಲ್ಸ್ ಪ್ರವಾಸದ ವೇಳೆ ದುರಂತ: ಶಾಲಾ ಬಸ್ ಪಲ್ಟಿ! ಹುಟ್ಟುಹಬ್ಬದ ದಿನವೇ ದುರಂತ ಅಂತ್ಯಕಂಡ ವಿದ್ಯಾರ್ಥಿ!

ಹೊನ್ನಾವರ:ಮೈಸೂರಿನ ಶಾಲಾ ವಿದ್ಯಾರ್ಥಿಗಳನ್ನು ಹೊತ್ತ ಪ್ರವಾಸಿ ಬಸ್ಸೊಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಗೇರುಸೊಪ್ಪ ಬಳಿಯ ಸೂಳೆ ಮುರ್ಕಿ ಕ್ರಾಸ್ ಬಳಿ ಭೀಕರವಾಗಿ ಪಲ್ಟಿಯಾಗಿದ್ದು, ಈ ದುರಂತದಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, 24 ಮಂದಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ.…

ಅಮಾನತ್ತು ವರ್ಗಾವಣೆಯನ್ನು ಸಮರ್ಥಿಸಿಕೊಂಡ ಪೌರಾಡಳಿತ ಇಲಾಖೆ? ಮುಖ್ಯಾಧಿಕಾರಿ ಎಚ್ ಅಕ್ಷತಾ ವರ್ಗಾವಣೆ!

ಕಾರವಾರ: ಅಧಿಕಾರ ದುರ್ಬಳಕೆ ಹಾಗೂ ಕರ್ತವ್ಯಲೋಪದಡಿ ಅಮಾನತ್ತು ಗೊಂಡಿದ್ದ ಅಂಕೋಲಾ ಪುರಸಭೆ ಮುಖ್ಯಾಧಿಕಾರಿ ಎಚ್ ಅಕ್ಷತಾ ಹಾಗೂ ಕಿರಿಯ ಅಭಿಯಂತರರ ಅಮಾನತ್ತು ಆದೇಶಕಿದ್ದ ತಡೆಯಾಜ್ಞೆಯನ್ನು ಧಾರವಾಡದ ಉಚ್ಚನ್ಯಾಯಾಲಯ ತಿರಸ್ಕರಿಸಿ,ನಿಯಮಾನುಸಾರ ಕ್ರಮ ಕೈಗೊಳ್ಳಿ ಎಂದು ಪೌರಾಡಳಿತ ಇಲಾಖೆಗೆ ಸೂಚಿಸಿದ್ದು, ಇಲಾಖೆ ತನ್ನ ಆದೇಶವನ್ನು…

ಮುಸ್ಲಿಂ ಯುವಕನ ಸಾವು! ನೂರಾರು ಹಿಂದುಗಳ ಕಣ್ಣೀರು!

ಅಂಕೋಲಾ: ಬಾವೈಕ್ಯತೆ ಎನ್ನುವುದು ತೋರಿಕೆ ಅಲ್ಲ ಅದು ಬಾವನೆ ಎನ್ನುವುದಕ್ಕೆ ಸಾಕ್ಷಿಯಾಗಿ ಅಪಘಾತದಲ್ಲಿ ಸಾವನ್ನಪ್ಪಿದ ಮುಸ್ಲಿಂ ಯುವಕನಿಗೋಸ್ಕರ ನೂರಾರು ಹಿಂದೂಗಳು ಕಣ್ಣೀರಿಡುತ್ತಿರುವ ಮತ್ತು ಕ್ರೂರ ವಿಧಿಗೆ ಶಾಪಹಾಕುತ್ತಿದ್ದ ಹೃದಯವಿದ್ರಾವಕ ದೃಶ್ಯ ಅಂಕೋಲಾ ತಾಲೂಕಿನ ಬೊಬ್ರುವಾಡ ಗ್ರಾಮದಲ್ಲಿ ಕಂಡುಬಂದಿದೆ. ಹೌದು… ಕಳೆದ ಮೂರ್ನಾಲ್ಕು…

ಹೆದ್ದಾರಿ ಬದಿಯ ಕಂದಕಕ್ಕೆ ಉರುಳಿದ ಕೆ ಎಸ್ ಆರ್ ಟಿ ಸಿ ಬಸ್:ಹಲವರಿಗೆ ಗಂಭೀರ ಗಾಯ.

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 52 ರ ರಾಮನಗುಳಿಯ ವಜ್ರಳ್ಳಿ ಬಳಿ ಕೆ ಎಸ್ ಆರ್ ಟಿ ಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಕಂದಕಕ್ಕೆ ಉರುಳಿ ಬಿದ್ದಿದ್ದು, ಬಸ್ಸಿನಲ್ಲಿದ್ದ 14 ಜನರಿಗೆ ಗಾಯಗಳಾಗಿದ್ದು,ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.…