ಅಂಕೋಲಾ: ಇದು ಕರ್ನಾಟಕ ಇಲ್ಲಿ ಎಲ್ಲಾ ವ್ಯವಹಾರ ಕನ್ನಡದಲ್ಲೇ ಆಗಬೇಕು ಎಂದು ಗರಂ ಆದ ಸೈಲ್ ಪ್ರಗತಿ ವರದಿ ಪುಸ್ತಕವನ್ನು ಹರಿದು ಹಾಕಿದ್ದಾರೆ.

ಹೌದು… ತಾಪಂ ಸಭಾಂಗಣದಲ್ಲಿ ನಡೆದ ತ್ರೈ ಮಾಸಿಕ ಸಭೆಯಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಪುಸ್ತಕವನ್ನು ಪರಿಶೀಲನೆ ನಡೆಸುತ್ತಿದ್ದ ವೇಳೆಯಲ್ಲಿ ಪುರಸಭೆ ಪ್ರಗತಿ ವರದಿಯ ಪುಸ್ತಕ ವೀಕ್ಷಿಸುತ್ತಿದ್ದ ವೇಳೆಯಲ್ಲಿ ವರದಿ ಪೂರ್ಣ ಆಂಗ್ಲ ಬಾಷೆಯಲ್ಲಿದ್ದರಿಂದ ಅದರಿಂದ ಕೋಪಗೊಂಡ ಸೈಲ್ ಇದು ಕರ್ನಾಟಕ ಇಲ್ಲಿ ಎಲ್ಲಾ ಕಡತಗಳು ಹಾಗೂ ವರದಿಗಳು ಕನ್ನದಲ್ಲೇ ಇರಬೇಕು ಎಂದು ಪುಸ್ತಕವನ್ನು ಹರಿದು ಹಾಕಿ ಮುಖ್ಯಾಧಿಕಾರಿಯ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಹಾಗೆಯೇ ವರದಿಯನ್ನು ಕನ್ನಡದಲ್ಲಿ ಬರೆದು ತನ್ನಿ ಎಂದು ಗುಡುಗಿದರು.


Leave a Reply