ಬಿಡಾಡಿ ದನಕರುಗಳಿಗೆ ರಿಪ್ಲೇಕ್ಟಿವ್ ಕಾಲರ್ ಅಳವಡಿಕೆ.

Spread the love

ಗೋಕರ್ಣ: ಬಿಡಾಡಿ ದನಕರುಗಳಿಂದ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಿಂದ ಸಾರ್ವಜನಿಕರ ಪ್ರಾಣಕ್ಕೆ ಕುಂದುಂಟಾಗುತ್ತಿರುವ ಬಗ್ಗೆ ಹಾಗೂ ದನುಕರುಗಳಿಗೂ ಪ್ರಾಣ ಹಾನಿ ಸಂಭವಿಸುತ್ತಿರುವದನ್ನು ಗಂಭೀರವಾಗಿ ಪರಿಗಣಿಸಿದ ಗೋಕರ್ಣ ಪೊಲೀಸರು ಠಾಣಾ ವ್ಯಾಪ್ತಿಯಲ್ಲಿಯ ಬೀಡಾಡಿ ದನ-ಕರುಗಳಿಗೆ ರಿಪ್ಲೆಕ್ಟಿವ್ ಕಾಲರ್ ಅಳವಡಿಸಿ ರಸ್ತೆ ಸುರಕ್ಷತಾ ಕ್ರಮವನ್ನು ಕೈಗೊಂಡಿದ್ದಾರೆ.

ಹೌದು.. ಭೂ ಕೈಲಾಸ ಎನ್ನಲಾಗುವ ಶ್ರೀ ಕ್ಷೇತ್ರ ಗೋಕರ್ಣ ಪ್ರವಾಸಿಗರ ‘ಹಾಟ್ ಸ್ಪಾಟ್’ ಅತ್ಮಲಿಂಗದ ದರ್ಶನ ಸೇರಿದಂತೆ ಕಡಲತೀರದ ಸೌಂದರ್ಯವನ್ನು ಅನುಭವಿಸಲು ದೇಶ ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.ಇಕ್ಕಟ್ಟಾದ ರಸ್ತೆಗಳು,ಕಿರು ತಿರುವುಗಳು ಹೀಗೆ ಅನೇಕಾರು ಅಡಚನೆಯುಳ್ಳ ಇಲ್ಲಿಯ ರಸ್ತೆಗಳಲ್ಲಿ  ಬಿಡಾಡಿ ದನಗಳ ಹಾವಳಿಯು ಹೆಚ್ಚಾಗಿದ್ದು,ರಸ್ತೆಯಲ್ಲಿ ಮಲಗಿರುವ  ದನಕರುಗಳು ದಾರಿಹೋಕರ ಪ್ರಾಣಕ್ಕೆ ಸಂಚಕಾರವನ್ನು ತರುತ್ತಿದ್ದು, ಅದರಂತೆಯೇ ಜಾನುವಾರುಗಳ ಪ್ರಾಣಕ್ಕೂ ಕುತ್ತು ಉಂಟಾಗುತ್ತಿದೆ. ಹಲವಾರು ಜನರ ಪ್ರಾಣಪಕ್ಷಿಯೂ ಹಾರಿಹೋದ ಉದಾಹರಣೆಯಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಗೋಕರ್ಣ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಸಿಪಿಐ ಶ್ರೀಧರ್ ಎಸ್ ಆರ್ ತನ್ನೆಲ್ಲ ಸಿಬ್ಬಂದಿಗಳೊಂದಿಗೆ ಬಿಡಾಡಿ ದನಕರುಗಳಿಗೆ ರಿಪ್ಲೇಕ್ಟಿವ್ ಕಾಲರ್ ಹಾಕುವ ಮೂಲಕ ಸಾಮಾಜಿಕ ಕಳಕಳಿ ತೋರಿದ್ದಾರೆ.

  ಹಾಗೆಯೇ ಅಕ್ರಮ ಜಾನುವಾರು ಸಾಗಾಟದ ನಿಯಂತ್ರಣಕ್ಕಾಗಿ ಗೋಕರ್ಣದ ಹಿತ್ಲಮಕ್ಕಿ ಬಳಿಯೂ ಚೆಕ್ ಪೋಸ್ಟ್ ತೆರೆಯಲಾಗಿದ್ದು, ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ರಾತ್ರಿ ಗಸ್ತು ಬಿಗಿಗೊಳಿಸಲಾಗಿದೆ.


     

ರಾತ್ರಿ ವೇಳೆ ರಸ್ತೆ ಮೇಲೆ, ರಸ್ತೆ ಪಕ್ಕದಲ್ಲಿ ಮಲಗುವ ದನ ಕರುಗಳು ಅಪಘಾತಕ್ಕೀಡಾಗಿ ಸಾವು- ನೋವಿಗೆ ಈಡಾಗುವ ಸಾಧ್ಯತೆ ಇದ್ದುದರಿಂದ ಹಾಗೂ ರಸ್ತೆ ಅಪಘಾತಗಳಾಗಿ ಸಾರ್ವಜನಿಕರಿಗೂ ಜೀವಾಪಾಯ ಗಾಯ ನೋವು ಆಗುವ ಸಾಧ್ಯತೆ ಇದ್ದುದರಿಂದ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ರಿಪ್ಲೇಕ್ಟಿವ್ ಕಾಲರ್ ಅಳವಡಿಸಿದ್ದೇವೆ.ವಾರಸುದಾರರು ತಮ್ಮ ದನ-ಕರುಗಳನ್ನು ರಾತ್ರಿ ವೇಳೆ ರಸ್ತೆಯ ಮೇಲೆ ಬಿಡದೇ ತಮ್ಮ ಮನೆಯಲ್ಲಿ ಕಟ್ಟಿಕೊಳ್ಳಲು ವಿನಂತಿಸುತ್ತೇವೆ.

ಶ್ರೀಧರ್ ಎಸ್ ಆರ್
ಸಿಪಿಐ ಗೋಕರ್ಣ

Leave a Reply

Your email address will not be published. Required fields are marked *