ಅಂಕೋಲಾ: ಹಗಲು ರಾತ್ರಿ ಎನ್ನದೆ ನಿದ್ದೆಗೆಟ್ಟು ಜನರ ಸೇವೆ ಮಾಡುತ್ತಿರುವ ಆಟೋ ರಿಕ್ಷಾದವರ ಕಾರ್ಯ ಶ್ಲಾಘನೀಯ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಹೇಳಿದರು.

ಅವರು ಅಂಕೋಲಾ ತಾಲೂಕಾ ಆಟೋರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ (ರಿ) ಹಾಗೂ ಮಹಾ ಗಣಪತಿ ರಿಕ್ಷಾ ಚಾಲಕರು ಹಾಗೂ ಮಾಲಕರ ಸಂಘದ ವತಿಯಿಂದ ನಡೆದ ತಾಲೂಕಾ ಮಾಟ್ಟದ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಯಾವುದಾದರೂ ತುರ್ತು ಸಂದರ್ಭದಲ್ಲಿ ನಮಗೆ ಆಂಬ್ಯುಲೆನ್ಸ್ ಕ್ಕಿಂತಲೂ ಮೊದಲು ನೆನಪಾಗುವುದು ಆಟೋದವರು ಅಂತಹ ಆಟೋ ರಿಕ್ಷಾದವರಿಗೆ ಸನ್ಮಾನಿಸಿ ಗೌರವಿಸುತ್ತಿರುವುದು ಕಾರ್ಯಕ್ರಮದ ಹಿರಿಮೆಯನ್ನು ಹೆಚ್ಚಿಸಿದೆ, ನಮ್ಮ ಸರಕಾರ ಆಟೋ ರಿಕ್ಷಾದವರಿಗೆ ಹಲವು ಯೋಜನೆಗಳನ್ನು ತರಲಿದೆ ಅದನ್ನು ನಮ್ಮ ಪ್ರತಿಯೊಬ್ಬ ಆಟೋ ಚಾಲಕರಿಗೆ ತಲುಪಿಸುವ ಕಾರ್ಯವಾಗಬೇಕು ಹಾಗೆಯೇ ನಿಮ್ಮ ಯಾವುದೇ ಸಮಸ್ಯೆಗಳಿಗೆ ನಾನು ಸದಾ ಸ್ಪಂದಿಸಲು ಸಿದ್ಧನಿದ್ದೇನೆ ಎಂದರು.

ಹಾಲಕ್ಕಿ ಒಕ್ಕಲಿಗ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಗೌಡ ಮಾತನಾಡಿ ಪ್ರಾಮಾಣಿಕವಾಗಿ ಜನರ ಸೇವೆ ಮಾಡುವ ಆಟೋ ರಿಕ್ಷಾ ಚಾಲಕರು ನಿಜವಾದ ವಾರಿಯರ್ಸ್ ಎಂದರು.

ವೇದಿಕೆಯಲ್ಲಿ ನ್ಯಾಯವಾದಿ ಸಂಘದ ಅಧ್ಯಕ್ಷರಾದ ದೀಕ್ಷಿತ ನಾಯಕ, ನಾಮಧಾರಿ ಸಮಾಜದ ಪ್ರಮುಖರಾದ ದಾಮೋದರ ನಾಯ್ಕ,ಶಿಕ್ಷಕರಾದ ಬಾಲಚಂದ್ರ ನಾಯಕ, ಆಟೋ ಚಾಲಕರಾದ ಮಹೇಶ್ ನಾಯ್ಕ, ಗಂಗಾಧರ ಗಾಂವ್ಕರ್ ಮುಂತಾದವರು ವೇದಿಕೆಯಲ್ಲಿದ್ದು ಮಾತನಾಡಿದರು.

ಆಟೋರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘದ ಅಧ್ಯಕ್ಷ ಗಜಾನನ ನಾಯ್ಕ ಸರ್ವರನ್ನು ಸ್ವಾಗತಿಸಿದರು, ಶಿಕ್ಷಕರಾದ ಕೃಷ್ಣಾ ಜಿ ನಾಯ್ಕ ನಿರೂಪಿಸಿದರು.ಈ ಸಂದರ್ಭದಲ್ಲಿ ಆಟೋ ಚಾಲಕರು ಹಾಗೂ ಮಾಲಕರು ಉಪಸ್ಥಿತರಿದ್ದರು.
ಕ್ರಿಕೆಟ್ ಪಂದ್ಯಾವಳಿಯಲ್ಲಿ 17 ತಂಡಗಳು ಬಾಗವಹಿಸಿದ್ದವು ಮೈಕಾ ತಂಡ ಹಾಗೂ ಪ್ರೆಂಡ್ಸ್ ಇಲವೆನ್ ತಂಡ ಫೈನಲ್ ತಲುಪಿದ್ದು, ಮೈಕಾ ತಂಡ ಜಯಶಾಲಿಯಾಗಿ ಹೊರಹೊಮ್ಮಿತು. ಈ ಸಂದರ್ಭದಲ್ಲಿ ತಮ್ಮ ಜೀವನಪೂರ್ತಿ ಆಟೋ ಓಡಿಸಿ ಸೇವೆಸಲ್ಲಿಸಿದ ಆಟೋ ಚಾಲಕರಿಗೆ ಸನ್ಮಾನಿಸಿ ಗೌರವಿಸಲಾಯಿತು.


Leave a Reply