ಅಂಕೋಲಾ: ಕಳೆದ ನಾಲ್ಕು ದಶಕಗಳಿಂದ ಕಲಾ ಕ್ಷೇತ್ರದಲ್ಲಿ ಅವಿರತ ಸೇವೆಯನ್ನು ಸಲ್ಲಿಸಿ,13 ನಾಟಕ ಕೃತಿಗಳನ್ನು ರಚಿಸಿ,ನಿರ್ದೇಶಿಸಿ,ಯಶಸ್ವಿಯಾಗಿ ಪ್ರದರ್ಶಿಸಿದ ಸಾಹಿತಿ ಕೃಷ್ಣ ಜಿ ನಾಯ್ಕ ಅವರಿಗೆ ರಾಜ್ಯಮಟ್ಟದ ಕನ್ನಡ ಕವಿರತ್ನ ಪ್ರಶಸ್ತಿ ಲಭಿಸಿದೆ.

ಹೌದು… ತನ್ನದೇಯಾದ ವಿಭಿನ್ನ ಶೈಲಿಯಲ್ಲಿ ಹತ್ತು ಹಲವಾರು ಕಥೆಗಳನ್ನು ರಚಿಸಿ, ತಳಮಟ್ಟದ ನಾಟಕ ಅಸಕ್ತರನ್ನು ಗುರುತಿಸಿ, ಅನೇಕ ಎಲೆಮರೆಯ ಕಲಾವಿದರನ್ನು ಹುಡುಕಿ ಅವರಿಗೆ ಅವರ ಸಾಮಾರ್ಥ್ಯಕ್ಕೆ ತಕ್ಕಂತೆ ಪಾತ್ರ ನೀಡಿ,ತಾಲೂಕಿನಾದ್ಯಂತ ನಾಟಕ ರಂಗದಲ್ಲಿ ಭಿನ್ನ,ವಿಭಿನ್ನವಾಗಿ ಸೇವೆ ಸಲ್ಲಿಸಿ,ಯಶಸ್ವಿ ನಾಟಕಗಳ ನಿರ್ದೇಶಕರಾಗಿ ಅಪಾರ ಜನ ಮೆಚ್ಚುಗೆಯನ್ನು ಗಳಿಸಿರುವ ಅಂಕೋಲಾ ತಾಲೂಕಿನ ಬೊಬ್ರುವಾಡದ ಕೃಷ್ಣ ಜಿ ನಾಯ್ಕ ಅವರಿಗೆ ರಂಗಮಿತ್ರ ನಾಟ್ಯ ಸಂಘ (ರಿ) ಕಲುಬುರ್ಗಿ ಹಾಗೂ ಕರ್ನಾಟಕ ರಾಜ್ಯ ನಾಟಕ ಬರಹಗಾರ ಕವಿಗಳ ಸಂಘ (ರಿ) ಬೆಂಗಳೂರು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕವಿ ಸಂಗಮ- 2026 ನಾಟಕೋತ್ಸವದಲ್ಲಿ ಪ ಪೂ ಪಂಪಯ್ಯ ಮಹಾ ಸ್ವಾಮಿಗಳು ಮಹಾತ್ಮಪೀಠ ಗದ್ದುಗೆ ಮಠ ಅಳ್ಳಳ್ಳಿ ಇವರ ಹೆಸರಿನಲ್ಲಿ ಕೊಡಮಾಡುವ ಕನ್ನಡ ಕವಿ ರತ್ನ ಪ್ರಶಸ್ತಿ ದೊರೆತಿರುವುದು ಅವರ ಶಿಷ್ಯವೃಂದ ಹಾಗೂ ನಾಟಕಾಭಿಮಾನಿಗಳಿಗೆ ಸಂತಸ ತಂದಿದೆ.


