Spread the love

ಅಂಕೋಲಾ: ಪಟ್ಟಣದ ವಿಠ್ಠಲಘಾಟ್ ಬಳಿಯ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೋರ್ವ ನೇಣಿಗೆ ಶರಣಾದ ಘಟನೆ ನಡೆದಿದೆ.

ಹೌದು… ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರ ಅಂಚಿನಲ್ಲಿರುವ ವಿಠ್ಠಲಘಾಟ್ ಬಳಿಯ ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಗೇರು ಮರಕ್ಕೆ  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದ್ದು,ಕಳೆದ ಏಳೆಂಟು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಮೃತದೇಹ 40 ರಿಂದ 45 ವರ್ಷದ ಪುರಷನಾಗಿದ್ದು, ತಿಳಿ ಹಳದಿ ಬಣ್ಣದ ಟಿ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ, ಎಡಗೈಯ್ಯಿಗೆ ವಾಚ್  ಧರಿಸಿದ್ದಾನೆ ಎನ್ನಲಾಗಿದೆ.

ಅರಣ್ಯ ಪ್ರದೇಶದಲ್ಲಿ ದುರ್ವಾಸನೆ ಬರುತ್ತಿರುವ ಕುರಿತು ಸ್ಥಳೀಯರು ಬಿಟ್ ಪೊಲೀಸರಾದ ವಿಜಯ್ ಎನ್ನುವವರ ಬಳಿ ತಿಳಿಸಿದ್ದಾರೆ, ತಕ್ಷಣ ಅರಣ್ಯ ಪ್ರದೇಶಕ್ಕೆ ತೆರಳಿದಾಗ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು,ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *