SIDDAPURA | ಸಿದ್ದಾಪುರ ಪೊಲೀಸರ ಕಾರ್ಯಾಚರಣೆ; ಅಡಿಕೆ ಕದ್ದವ ಅರೆಸ್ಟ್ !

Spread the love

ಸಿದ್ದಾಪುರ: ಅಡಿಕೆ ಬೆಲೆ ಹೆಚ್ಚುತ್ತಿದ್ದಂತೆ ಉತ್ತರ ಕನ್ನಡದ ಹಲವಡೆ, ಅಡಿಕೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಇದೀಗ ಅಡಿಗೆ ಕದ್ದಿದ್ದ ಓರ್ವನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ ಘಟನೆ ಸಿದ್ದಾಪುರ ತಾಲೂಕಿನ ಕೋಲಶಿರ್ಶಿಯಲ್ಲಿ ನಡೆದಿದೆ.

ಆರೋಪಿಯನ್ನು ಸಿದ್ದಾಪುರದ ಕೋಲಶಿರ್ಶಿಯ ಗುಡ್ಡಕೇರಿ ಮೂಲದ ಕಾಶಿನಾಥ ಕೃಷ್ಣ ನಾಯ್ಕ ಎಂದು ಗುರುತಿಸಲಾಗಿದ್ದು, ಬಂಧಿತನಿಂದ 25,000/-ರೂ. ಮೌಲ್ಯದ 8 ಅಡಿಕೆ ಚೀಲವನ್ನು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಹೌದು….ಸಿದ್ದಾಪುರ ತಾಲೂಕಿನ ಕೋಲಶಿರ್ಶಿಯ ಮಾರುತಿನಗರದ ನಿವಾಸಿ ನಾಗರಾಜ ಶಿವಪ್ಪ ಗೌಡರ ಎಂಬಾತ ತಮ್ಮ ತೋಟದಲ್ಲಿ  ಬೆಳೆದ ಅಡಿಕೆಯನ್ನು ಒಣಗಿಸಿ  ಒಟ್ಟು ಆರು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಮನೆಯ ಮುಂದಿನ ಅಂಗಳದಲ್ಲಿ ಇಟ್ಟಿದ್ದರು ಎನ್ನಲಾಗಿದೆ. ಫೆಬ್ರುವರಿ 5 ರ ತಡರಾತ್ರಿ  ಮೂರು ಚೀಲಗಳಲ್ಲಿ ತುಂಬಿಟ್ಟಿದ್ದ 45 ಕೆ.ಜಿ ಒಣಗಿದ ಸಿಪ್ಪೆಗೋಟಿನ 10000 ಮೌಲ್ಯದ ಅಡಿಕೆಯನ್ನು  ಕಳ್ಳತನವಾಗಿದ್ದು  ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಸಿದ್ದಾಪುರ ಪೊಲೀಸರು ಗುನ್ನಾ ನಂ: 22/2024 ಕಲಂ: 303(2) ಭಾರತೀಯ ನ್ಯಾಯ ಸಂಹಿತೆ-2023 ನೇದರಂತೆ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಈ ಕಾರ್ಯಾಚರಣೆ ಸಿದ್ದಾಪುರ ಸಿಪಿಐ ಜೆ.ಬಿ. ಸೀತಾರಾಮ ಮಾರ್ಗದರ್ಶನದಲ್ಲಿ ಪಿಎಸೈ ಅನೀಲ ಬಿ.ಎಂ, ಗೀತಾ ಶಿರ್ಶಿಕರ  ನೇತೃತ್ವದಲ್ಲಿ ಸಿಬ್ಬಂದಿಗಳಾದ ರಮೇಶ ಕೂಡಲ್, ರಾಜು ಎಂ, ಶ್ರೀಶೈಲ್ ಉಪ್ಪಾರಟ್ಟಿ, ಮಣಿಕಂಠ ಎಂ,ಆರ್ ಉಪಸ್ಥಿತರಿದ್ದರು. ಕಳ್ಳತನ ಪ್ರಕರಣವನ್ನು ಭೇದಿಸಿದ ಸಿದ್ದಾಪುರ ಪೊಲೀಸರಿಗೆ ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *