ANKOLA ಧಾರ್ಮಿಕ ವಿಧಿ,ವಿಧಾನಗಳ ಮೂಲಕ ಶುಭಾರಂಭಗೊಂಡ ಜೈ ಶ್ರೀರಾಮ್ ಪತ್ತಿನ ಸಹಕಾರಿ ಸಂಘ.

Spread the love

ಅಂಕೋಲಾ: ಪಟ್ಟಣದ ಕಾರವಾರ ರಸ್ತೆಯಲ್ಲಿ ಜೈ ಶ್ರೀರಾಮ್ ಪತ್ತಿನ ಸಹಕಾರಿ ಸಂಘವು ತಾಲೂಕಿನ ಹಲವಾರು ಗಣ್ಯರ ಸಮ್ಮುಖದಲ್ಲಿ ಉದ್ವಿಕ್ತವಾಗಿ ಶುಭಾರಂಭಗೊಂಡಿತು.

ಶ್ರೀ ದೇವರ ಪೂಜೆ ಸತ್ಯನಾರಾಯಣ ಪೂಜೆ ಹಾಗೂ ಅದರ ಪ್ರಯುಕ್ತ ವೆಂಕಟರಮಣ ದೇವಸ್ಥಾನದಲ್ಲಿ ಮಹಾಅನ್ನಸಂತರ್ಪಣೆ ಕಾರ್ಯಕ್ರಮ ಸಾಂಗವಾಗಿ ನಡೆದವು,ನಂತರದಲ್ಲಿ ಸುಗಮ ಸಂಗೀತ,ಭಜನೆ ಹಾಗೂ ಭಕ್ತಿ ಗೀತೆಗಳೊಂದಿಗೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಶುಭ ಕಾರ್ಯಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು,ಈ ಸಂದರ್ಭದಲ್ಲಿ ಸಾವಿರಕ್ಕೂ ಅಧಿಕ ಭಕ್ತಾದಿಗಳು ಹಾಗೂ ವಸಂತ ನಾಯಕರ ಅಭಿಮಾನಿಗಳು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದು,ಶ್ರೀದೇವರ ಅನ್ನಪ್ರಸಾದವನ್ನು ಸ್ವೀಕರಿಸಿ ದನ್ಯರಾದರು.

ಈ ವೇಳೆಯಲ್ಲಿ ನಿವೃತ್ತ ಅಧ್ಯಾಪಕ ಕೆ ವಿ ನಾಯಕ,ಜಿ ಪಂ ಮಾಜಿ ಅಧ್ಯಕ್ಷ  ರಮಾನಂದ ನಾಯಕ,  ಹಿರಿಯ ಸಾಹಿತಿ ಶಾಂತರಾಮ್ ನಾಯಕ ಹಿಚಕಡ್, ಜೈ ಶ್ರೀ ರಾಮ್ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷೆ ಸುಗಂದಾ ನಾಯಕ, ಶ್ರೀರಾಮ್ ಪರಿಸರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ  ವಸಂತ ನಾಯಕ ಜಮಗೋಡ, ನಿವೃತ್ತ ಮುಖ್ಯಾದ್ಯಾಪಕ  ವಿ ಡಿ ನಾಯಕ, ಬ್ಯಾಂಕ್ ಆಫ್ ಬರೋಡದ ನಿವೃತ್ತ ಹಿರಿಯ ಅಧಿಕಾರಿ ಎನ್ ಕೆ ನಾಯಕ, ಹಿರಿಯ ನ್ಯಾಯವಾದಿ ಪ್ರದೀಪ ನಾಯಕ, ನಿವೃತ್ತ ಪ್ರಾಚಾರ್ಯ ಜಿಪಿನಾಯಕ್, ನಿವೃತ್ತ ಉಪನ್ಯಾಸಕ ಪ್ರಕಾಶ್ ನಾಯಕ್, ಹಿರಿಯರಾದ ಜಿಎಂ ನಾಯಕ್, ನಿತ್ಯಾನಂದ ಹಿತ್ತಲಮಕ್ಕಿ  ದೀಪವನ್ನು ಬೆಳಗಿಸುವುದರ ಮೂಲಕ ಸಹಕಾರಿ ಸಂಘವನ್ನು ಲೋಕಾರ್ಪಣೆಗೊಳಿಸಿದರು.

ಮುಖ್ಯ ಕಚೇರಿಯ ಶುಭಾರಂಭ.
ಜಿಪಂ ಮಾಜಿ ಅಧ್ಯಕ್ಷ ರಾಮಾನಂದ ನಾಯಕ, ಹಿರಿಯ ಸಾಹಿತಿ ಶಾಂತಾರಾಮ ನಾಯಕ, ಹಿರಿಯರಾದ ಎನ್ ಕೆ ನಾಯಕ, ವಿ ಡಿ ನಾಯಕ ಜೈ ಶ್ರೀರಾಮ ಪತ್ತಿನ ಸಹಕಾರಿ ಸಂಘದ ಮುಖ್ಯ ಕಚೇರಿಯನ್ನು ಶುಭಾರಂಭಗೊಳಿಸಿದರು.
ಅಧ್ಯಕ್ಷರ ಕೊಠಡಿಯನ್ನು ನಿವೃತ್ತ ಮುಖ್ಯಾದ್ಯಪಕ ವಿ ಡಿ ನಾಯಕ ಮತ್ತು ಗಣ್ಯರು ಉದ್ಘಾಟನೆಗೊಳಿಸಿದರು.
ನಿರ್ದೇಶಕರ ಕೊಠಡಿಯನ್ನು  ಪುಟ್ಟ ಕಂದಮ್ಮಗಳಾದ ವಾಸವ, ನಿಶಲ್ ತಮ್ಮ ಪುಟ್ಟ ಕೈಗಳಿಂದ ಉದ್ಘಾಟನೆಗೊಳಿಸಿದರು.ಜೈ ಶ್ರೀ ರಾಮ್ ಪತ್ತಿನ ಸಹಕಾರಿಯ ಅಧ್ಯಕ್ಷರಾದ ಸುಗಂದಾ ನಾಯಕ ಮತ್ತು ವಸಂತ ನಾಯಕ ದಂಪತಿಗಳು ಸಕಲ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು.

ಭಕ್ತಿಪರವಶರಾಗಿಸಿದ ಗೀತ ಗಾಯನ,ಭಜನೆ.

ಜೈ ಶ್ರೀ ರಾಮ್ ಪತ್ತಿನ ಸಹಕಾರಿಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ದೊಡ್ಡದೇವರೆಂದೆ ಹೆಸರಾಗಿರುವ ಶ್ರೀ ವೆಂಕಟರಮಣ ದೇಗುಲದ ಆವರಣದಲ್ಲಿ ಭಕ್ತಿ ಗೀತೆ ಮತ್ತು ಭಜನಾ ಕಾರ್ಯಕ್ರಮ ನೆರೆದವರು ಭಕ್ತಿಬಾವ ಪರವಶರಾಗುವಂತೆ ಕಲಾಭಾರತಿ  ತಂಡದವರು ನೆರವೇರಿಸಿಕೊಟ್ಟಿದ್ದರು. ನಂತರದಲ್ಲಿ ವೆಂಕಟರಮಣ ದೇವರ ಮಹಾಪೂಜೆ ಮತ್ತು ಮಹಾಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆದು ಸಹಸ್ರಾರು ಜನರು ಉದ್ಘಾಟನಾ ಸಮಾರಂಭದಲ್ಲಿಯೂ ಪಾಲ್ಗೊಂಡು ಶ್ರೀದೇವರ ಅನ್ನಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ವೆಂಕಟರಮಣ ನಾಯಕ ಸಗಡಗೇರಿ,ಗೋಪು ನಾಯಕ ಹಿಚಕಡ್, ದೇವರಾಯ  ನಾಯಕ, ದೇವಿದಾಸ  ನಾಯಕ ಕಣಗಿಲ , ರಾಮಚಂದ್ರ ಬೋಳೆ, ಗಣಪತಿ ವಂದಿಗೆ, ದಾಸ ನಾಯಕ  ಬೋಳೆ, ವೆಂಟು ಮಾಸ್ಟರ್ ಶೀಳ್ಯ, ರಾಧಾಕೃಷ್ಣ ನಾಯಕ ವಿಕಾಸ ನಾಯಕ, ಸಂಜೀವ್ ನಾಯಕ, ಹೊನ್ನಮ್ಮ ನಾಯಕ, ರಾಜಮ್ಮ ನಾಯಕ, ಮಂಜುನಾಥ ನಾಯಕ, ಗೋವಿಂದ್ ಮಾಸ್ಟರ್, ದಯಾನಂದ ನಾಯಕ, ಪಾಂಡುರಂಗ ನಾಯಕ ರಾಮನಾಥ ಕಣಗಿಲ್, ವಸಂತ್ ನಾಯಕ್ ಸೂರ್ವೆ, ಹರಿ   ನಾಯಕ, ಗಣಪತಿ ನಾಯಕ ಬಾಸಗೋಡ, ಮುಕುಂದ ನಾಯಕ, ಮಂಜು ಬಾವಿಕೇರಿ ಗೋಪಾಲ್ ನಾಯಕ, ಗಣಪತಿ ನಾಯಕ್ ಸೂರ್ವೆ, ರಾಮ ನಾಯಕ್ ಹುಲಿದೇವರವಾಡ, ಅರವಿಂದ್ ನಾಯಕ್ ರಾಜೇಶ್ ಮಾಸ್ಟರ್ ಸೂರ್ವೆ, ಪ್ರಮೋದ್ ನಾಯಕ್ ಗೀತಾ ನಾಯಕ್ ಮಂಜೇಶ್ವರ ನಾಯಕ್ ರಾಮದಾಸ್ ನಾಯಕ್ ಆರ್ ವಿ ನಾಯಕ, ಸದಾನಂದ ನಾಯ್ಕ ವಿನೋದ ಬಾಸ್ಕೋಡ್ ಮಂಗಲಾ ನಾಯಕ, ಹೊನ್ನಪ್ಪ ನಾಯಕ, ಲಕ್ಷ್ಮಿದಾಸ್ ನಾಯಕ್ ರವಿಶಂಕರ್ ನಾಯಕ ಡಾಕ್ಟರ್ ವೆಂಕಟೇಶ್ ಆರ್‌ಜಿ ನಾಯಕ್ ಪುಷ್ಪಲತಾ ನಾಯಕ, ಮಂಜುನಾಥ್ ಪಾಟೀಲ್, ಸುಗಂಧ ನಾಯಕರವರ ಮಕ್ಕಳಾದ ಪೃಥ್ವಿ,ಪ್ರಕೃತಿ, ಪರಿಸರ, ಅಳಿಯಂದಿರಾದ ಪರೀಕ್ಷಿತ,ಅನುಪ  ಸೊಸೆ ಕೃತಿಕಾ ಮೊಮ್ಮಕ್ಕಳಾದ ವಾಸವ,ನಿಶಲ್, ಸೇರಿದಂತೆ ಸಹಸ್ರಾರು ಅಭಿಮಾನಿಗಳು ಹಿತೈಷಿಗಳು ಗ್ರಾಹಕರು ಮತ್ತು ಶ್ರೀರಾಮ್ ಪರಿಸರ ಕ್ರೆಡಿಟ್ ಸೌಹಾರ್ದ ಸಹಕಾರಿಯ ಸಿಬ್ಬಂದಿಗಳು ಜೈ ಶ್ರೀ ರಾಮ್ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಗ್ರಾಹಕರ ಸೇವೆಯನ್ನು ಬಯಸಿ ಜೈ ಶ್ರೀರಾಮ್ ಪತ್ತಿನ ಸಹಕಾರಿ ಸಂಘ ಶುಭಾರಂಭಗೊಂಡಿದೆ. ನಮ್ಮ ಅಂತಂತ್ರಣಕ್ಕೆ  ನನ್ನೆಲ್ಲಾ ಹಿರಿಕಿರಿಯ ಗಣ್ಯರು ಆಗಮಿಸಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಅತೀವ ಸಂತಸ ತಂದಿದೆ. ನಿಮ್ಮೆಲ್ಲರ ಸಹಕಾರ ನಮ್ಮೊಂದಿಗೆ ಹೀಗೆ ಇರಲಿ. ಈ ಕಾರ್ಯಕ್ರಮ  ಒಂದು ಕುಟುಂಬದ ಕಾರ್ಯಕ್ರಮದಂತಾಗಿದ್ದು, ನಿಮ್ಮ ಉಪಸ್ಥಿತಿಗೆ ನಾನು ಆಭಾರಿಯಾಗಿದ್ದೇನೆ.
ಸುಗಂದಾ ವಿ ನಾಯಕ ಅಧ್ಯಕ್ಷರು ಜೈ ಶ್ರೀರಾಮ್ ಪತ್ತಿನ ಸಹಕಾರಿ  ನಿ ಅಂಕೋಲಾ.

ಇಂದು ಅದ್ಭುತವಾಗಿ ಶುಭಾರಂಭಗೊಂಡ ಜೈ ಶ್ರೀರಾಮ್ ಪತ್ತಿನ ಸಹಕಾರಿಯ ಉದ್ಘಾಟನಾ ಸಮಾರಂಭದಲ್ಲಿ ನಮ್ಮ ಜೊತೆಯಲ್ಲಿದ್ದು, ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ, ಅನ್ನಸಂಪರ್ಪಣೆಯಲ್ಲಿಯೂ ಮತ್ತು ಶ್ರೀ ವೆಂಕಟರಮಣ ದೇಗುಲದ ಪೂಜಾ ಕೈ0ಕರ್ಯ ಗಳಲ್ಲಿ ನಿಮ್ಮ ಉಪಸ್ಥಿತಿ ಕಾರ್ಯಕ್ರಮದ ಗೌರವ ಮತ್ತಷ್ಟು ಹೆಚ್ಚಿಸಿದೆ. ಸದಾ ಇದೇ ರೀತಿಯಲ್ಲಿ  ಸಹಕಾರ ಬಯಸಿ ನಮ್ಮ,ನಿಮ್ಮ ಸಂಬಂಧಗಳು ಶಾಶ್ವತವಾಗಿರಲಿ. ಸರ್ವರಿಗೂ ಶ್ರೀದೇವರು ಒಳಿತನ್ನು ಮಾಡಲಿ.
ವಸಂತ ನಾಯಕ. ಜಮಗೋಡ

Leave a Reply

Your email address will not be published. Required fields are marked *