Spread the love

ಕಾರವಾರ: ನಗರದ ಹರಿದೇವನಗರದಲ್ಲಿ ಆಯತಪ್ಪಿ ಚರಂಡಿಗೆ (ಕಾಲುವೆ) ಬಿದ್ದು ಸಿಲುಕಿಕೊಂಡಿದ್ದ ಎತ್ತೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸಕಾಲದಲ್ಲಿ ಕಾರ್ಯಾಚರಣೆ ನಡೆಸಿ, ಯಶಸ್ವಿಯಾಗಿ ರಕ್ಷಿಸಿದ ಘಟನೆ ನಡೆದಿದೆ.

ಚರಂಡಿಯಲ್ಲಿ ಅಡ್ಡಲಾಗಿ ಬಿದ್ದಿದ್ದ ಎತ್ತು, ಮೇಲಕ್ಕೆ ಬರಲಾಗದೆ ಒದ್ದಾಡುತ್ತಿತ್ತು. ಜಾನುವಾರಿನ ಅರಚಾಟ ಕೇಳಿದ ಸ್ಥಳೀಯರು ತಕ್ಷಣವೇ ಆತಂಕಗೊಂಡು, ಕಾರವಾರ ಅಗ್ನಿಶಾಮಕ ಇಲಾಖೆಗೆ ಮಾಹಿತಿ ಮುಟ್ಟಿಸಿದ್ದಾರೆ.

ಮಾಹಿತಿ ಲಭ್ಯವಾದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಪರಿಸ್ಥಿತಿಯನ್ನು ಅವಲೋಕಿಸಿ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡರು. ಕಾಲುವೆಯಲ್ಲಿ ಅಡ್ಡಲಾಗಿ ಸಿಲುಕಿಕೊಂಡಿದ್ದ ಎತ್ತಿಗೆ ಯಾವುದೇ ಹಾನಿಯಾಗದಂತೆ, ರಕ್ಷಣಾ ಬೆಲ್ಟ್‌ಗಳನ್ನು (Rescue belts) ಬಳಸಿ ಅತ್ಯಂತ ಜಾಗರೂಕತೆಯಿಂದ ಮೇಲಕ್ಕೆತ್ತಲಾಯಿತು. 

ಸುರಕ್ಷಿತವಾಗಿ ಹೊರತೆಗೆದ ಬಳಿಕ ಎತ್ತಿಗೆ ಸ್ಥಳದಲ್ಲೇ ಅಗತ್ಯವಿದ್ದ ಪ್ರಾಥಮಿಕ ಉಪಚಾರವನ್ನು ನೀಡಲಾಯಿತು. ಮೂಕಪ್ರಾಣಿಯ ಜೀವ ಉಳಿಸಲು ತ್ವರಿತವಾಗಿ ಸ್ಪಂದಿಸಿದ ಅಗ್ನಿಶಾಮಕ ಸಿಬ್ಬಂದಿಯ ಸಮಯೋಚಿತ ಕಾರ್ಯಕ್ಕೆ ಸ್ಥಳೀಯರು ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ಯಶಸ್ವಿ ಕಾರ್ಯಾಚರಣೆಯು ಠಾಣಾಧಿಕಾರಿ ಮಹಾಬಲೇಶ್ವರ ಗೌಡ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ಬಸವರಾಜ್ ಉಳ್ಳಾಗಡ್ಡಿ, ರವಿರಾಜ್, ಮಿಥುನ್ ಅಂಕೋಲೆಕರ್, ಕುಮಾರ್ ಕೆ.ಎನ್ ಅವರುಗಳು ಸಕ್ರಿಯವಾಗಿ ಭಾಗವಹಿಸಿ ಜಾನುವಾರಿನ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.

Leave a Reply

Your email address will not be published. Required fields are marked *