ANKOLA |ಅಂಕೋಲೆಯ ಇತಿಹಾಸದಲ್ಲಿ ‘ಹಾಲಕ್ಕಿ ಕಪ್’ ಅತ್ಯಂತ ಯಶಸ್ವಿ ಪಂದ್ಯಾವಳಿಯಾಗಿ ಹೊರಹೊಮ್ಮಿದೆ – ಗೋಪಾಲಕೃಷ್ಣ ನಾಯಕ

Spread the love

ಅಂಕೋಲಾ: ಅಂಕೋಲೆಯಲ್ಲಿ ನೂರಾರು ಕ್ರೀಡಾಕೂಟ ಅಯೋಜನೆಯಾದರು ‘ಹಾಲಕ್ಕಿ ಕಪ್'(halakki cup) ತಾಲೂಕಿನ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಪಂದ್ಯಾವಳಿಯಾಗಿ ಹೊರಹೊಮ್ಮಿದೆ ಎಂದು ಕೆಪಿಸಿಸಿ (kpcc) ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಹೇಳಿದರು.

ಅವರು ತಾಲೂಕಿನ ಜೈ ಹಿಂದ್ ಮೈದಾನದಲ್ಲಿ ನಡೆದ ಹುಲಿದೇವರವಾಡ ಹಾಲಕ್ಕಿ ಗೆಳೆಯರ ಬಳಗ ಶೇಡಗೇರಿ ಇವರ ಆಶ್ರಯದಲ್ಲಿ ಹಾಲಕ್ಕಿ ಸಮಾಜದವರ 8 ನೇ ವರ್ಷದ ತಾಲೂಕಾ ಮಟ್ಟದ ಹಾಲಕ್ಕಿ ಕಪ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಕರಾಗಿ ಆಗಮಿಸಿ ಮಾತನಾಡಿ ಹಾಲಕ್ಕಿಗಳು ಮುಗ್ದರು ಹಾಗೂ ಶ್ರಮಜೀವಿಗಳು,ಇಂದಿನ ಪಂದ್ಯಾವಳಿಯಲ್ಲಿ ಜೈ ಹಿಂದ್ ಮೈದಾನದಲ್ಲಿ ಸಹಸ್ರಾರುವ ಮಂದಿ ಪಾಲ್ಗೊಳ್ಳುವ ಮೂಲಕ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ,ಮುಂದಿನ ದಿನಗಳಲ್ಲಿ ಹಾಲಕ್ಕಿ ಕಪ್ ಪ್ರಥಮ ಬಹುಮಾನವನ್ನು ನಾನು ನೀಡುತ್ತೇನೆ,ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟದ ಪಂದ್ಯಾವಳಿಯಾಗಿ ಹೊರಹೊಮ್ಮಲಿ ಇಂತಹ ಪಂದ್ಯಾವಳಿಯ ಆಯೋಜಕರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷೆ ಸುಜಾತಾ ಗಾಂವ್ಕರ್ ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ,ಹಾಲಕ್ಕಿ ಸಮಾಜದ ಯುವಕರು ದೈಹಿಕ ಸದೃಢರಾಗಿದ್ದು,ಕ್ರೀಡೆಯ ಜೊತೆಯಲ್ಲಿ ಸರಕಾರಿ ಉದ್ಯೋಗಕ್ಕೆ ಪ್ರಯತ್ನಿಸಬೇಕು ಎಂದರು.

ಚಿನ್ನದಗರಿ ಯುವಕ ಸಂಘದ ಅಧ್ಯಕ್ಷ ವಿಲಾಸ ನಾಯಕ ಮಾತನಾಡಿ ಇದೊಂದು ಹಾಲಕ್ಕಿಗಳ ಹಬ್ಬವಾಗಿ ಮಾರ್ಪಟ್ಟಿದೆ, ಹಾಲಕ್ಕಿಗಳ ಒಗ್ಗಟ್ಟು ಪ್ರದರ್ಶಿಸುವ ಈ ಪಂದ್ಯಾವಳಿ ತಾಲೂಕಿನಲ್ಲಿ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಾವಿಕೇರಿ ಗ್ರಾಪಂ ಮಾಜಿ ಅಧ್ಯಕ್ಷ ಪಾಂಡುರಂಗ ಗೌಡ,ಚೋಟು ಬೆಕ್ಸ್ ಮಾಲೀಕ ಜೀವನ್ ನಾಯಕ,ಅಗಸುರು ಗ್ರಾಪಂ ಉಪಾಧ್ಯಕ್ಷ ಯಶವಂತ ಗೌಡ ನಿವೃತ್ತ ಶಿಕ್ಷಕ ಸಾತು ಗೌಡ ಬಡಗೇರಿ ಉಪಸ್ಥಿತರಿದ್ದು ಮಾತನಾಡಿದರು.

ಪಂದ್ಯಾವಳಿಯಲ್ಲಿ 48 ತಂಡ ಬಾಗವಹಿಸಿದ್ದು, ಕರಿದೇವತಾ ಕ್ರಿಕೆಟರ್ಸ್ ಚಂದುಮಠ ಹಾಗೂ ಶ್ರೀ ದೇವಿಮಾತಾ ಹಡಿನೂರ ತಂಡ ಫೈನಲ್ ಪ್ರವೇಶಿಸಿತ್ತು, ರೋಚಕವಾಗಿ ನಡೆದ ಪಂದ್ಯಾಟದಲ್ಲಿ ಕೊನೆಯ ಹಂತದಲ್ಲಿ ಹಡಿನೂರ ತಂಡ ಜಯಶಾಲಿಯಾಗಿ ಹೊರಹೊಮ್ಮಿತು.

ಶೇಖರ್ ಗೌಡ ನಿರೂಪಿಸಿದರು,ಗಜು ಗೌಡ,ಗುರು ಗೌಡ ವಂದಿಸಿದರು ಸರ್ವರನ್ನು ಸ್ವಾಗತಿಸಿ ಬಹುಮಾನದ ಯಾದಿ ಓದಿದರು.

Leave a Reply

Your email address will not be published. Required fields are marked *