ಉತ್ತರ ಪ್ರದೇಶ: ಸನಾತನ ಧರ್ಮೀಯರ ಅಧ್ಯಾತ್ಮ ಲೋಕದ ನಂಬಿಕೆ, ಶ್ರೇಷ್ಠ ಪರಂಪರೆ ಮತ್ತು ಸಂಸ್ಕೃತಿಯ ಅಪೂರ್ವ ಸಂಗಮವಾದ 144 ವರ್ಷಗಳ ನಂತರ ನಡೆಯುತ್ತಿರುವ ಪ್ರಯಾಗ್ ರಾಜ್ನ (Prayagraj) ಕುಂಭಮೇಳದಲ್ಲಿ (mahakumbh) ಅಂಕೋಲಾ ಕಾರವಾರ ಕ್ಷೇತ್ರದ ಮಾಜಿ ಶಾಸಕಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಕುಟುಂಬ ಸಮೇತ ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ.

ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಅವರು ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಕೂಟವಾದ ಕುಂಭಮೇಳಕ್ಕೆ ಕೋಟ್ಯಾಂತರ ಭಕ್ತರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ (Cm Yogi adhityanath) ನೇತೃತ್ವದ ರಾಜ್ಯ ಸರಕಾರ ಮತ್ತು ನರೇಂದ್ರ ಮೋದೀಜಿಯವರ (PM Narendra modi) ನೇತೃತ್ವದ ಕೇಂದ್ರ ಸರ್ಕಾರ ಸಕಲ ಸಿದ್ಧತೆಗಳನ್ನು ಒದಗಿಸಿಕೊಟ್ಟು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವುದು ಶ್ಲಾಘನೀಯ. ಸನಾತನಿಗಳು ಗರ್ವ ಪಡುವ ಮಹಾಕುಂಬ ಪರ್ವಕ್ಕೆ ಭಕ್ತರ ಅನುಕೂಲಕ್ಕಾಗಿ ಮಾಡಿದ ವ್ಯವಸ್ಥೆ ನಿಬ್ಬೆರಗಾಗಿಸುವಂತಹದ್ದು ಎಂದಿದ್ದಾರೆ.

ಅವರೊಂದಿಗೆ ಪುತ್ರ ಪರ್ಬತ್, ಸೊಸೆ ರೇಖಾ ಮತ್ತು ಮೊಮ್ಮಗ ರಿಹಾನ್ನೊಂದಿಗೆ ಪುಣ್ಯ ಸ್ನಾನ ಮಾಡಿದ್ದಾರೆ.


Leave a Reply