ರಾಮನಗುಳಿಯಲ್ಲಿ ಕೋಟಿ ಲೂಟಿ ಮಾಡಿದ್ದ ತಲ್ಲತ್ ಗ್ಯಾಂಗಿನ ಇಬ್ಬರು ವಶಕ್ಕೆ.

Spread the love

ಕಾರವಾರ:ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ  ರಾಮನಗುಳಿ ಬಳಿ ಹುಬ್ಬಳ್ಳಿ ಕಡೆಯಿಂದ ಮಂಗಳೂರಿಗೆ ತೆರಳುತ್ತಿದ ಕಾರನ್ನು ಅಡ್ಡಗಟ್ಟಿ ಒಂದೂವರೆ ಕೋಟಿ ರೂಪಾಯಿ ದೋಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಂಕೋಲಾ ಪೊಲೀಸರು ಮಂಗಳೂರಿನ ತಲ್ಲತ್‌ ಗ್ಯಾಂಗಿನ ಇಬ್ಬರು ಸದಸ್ಯರನ್ನು ಬಂಧನ ಮಾಡಿದ್ದಾರೆ ಎನ್ನಲಾಗಿದೆ.

ಮಂಗಳೂರಿನ ಜ್ಯುವೆಲ್ಲರಿ ಮಾಲೀಕ ರಾಜೇಶ ಪವಾರ್‌ ಎಂಬುವವರಿಗೆ ಸೇರಿದ್ದ ಕಾರು ಜ.28 ರಂದು ಅಂಕೋಲ ರಾಮನಗುಳಿ ಹೆದ್ದಾರಿ ಬದಿ ದೊರಕಿದ್ದು, ಅದರಲ್ಲಿ 1.14 ಕೋಟಿ ನಗದು ಪತ್ತೆಯಾಗಿತ್ತು. ರಾಜೇಶ್‌ ಪವಾರ್‌ ಮತ್ತು ಕಾರಿನ ಚಾಲಕರು ಘಟನೆ ನಡೆದ ಕೆಲವು ದಿನಗಳ ಬಳಿಕ ಅಂಕೋಲಾ ಠಾಣೆಗೆ ತೆರಳಿ ದರೋಡೆ ಕುರಿತು ಪ್ರಕರಣ ದಾಖಲಿಸಿದ್ದರು.

ಜನವರಿ 28 ರಂದು ರಾಷ್ಟ್ರೀಯ ಹೆದ್ದಾರಿ 63 ರ ನಿರ್ಜನ ಪ್ರದೇಶದಲ್ಲಿ  ಅನುಮಾನಾಸ್ಪದವಾಗಿ ಕಾರೊಂದು ಬೋನಟ್ ಹಾಗೂ ಡಿಕ್ಕಿ ತೆರೆದು, ಕಾರಿನ ಸೀಟ್, ಕಿಟಕಿ ಗಾಜುಗಳನ್ನು ಒಡೆದ ಸ್ಥಿತಿಯಲ್ಲಿ ಕಂಡುಬಂದಿದ್ದು, ಈ ಕಾರು ಜ.27 ರ ಬೆಳಿಗ್ಗೆಯಿಂದಲೇ ನಿಂತಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಕಾರನ್ನು ಠಾಣೆಗೆ ತಂದು ಪರಿಶೀಲಿಸಿದಾಗ ಕಾರಿನಲ್ಲಿ ಸೀಟಿನ ಒಳಗೆ ಕಂತೆ ಕಂತೆ ಹಣ ಕಂಡುಬಂದಿದೆ.ಇದು  ಕಳ್ಳತನದ ಕಾರೋ?  ಕಾರಿನಲ್ಲಿರುವ ಹಣ ಯಾವ ಮೂಲದ್ದು? ದರೋಡೆ ಮಾಡಿ ಬಂದಿರಬಹುದೇ ಎಂಬ ಪ್ರಶ್ನೆ ಕಾದಿತ್ತು ಈ ಜಾಡು ಹಿಡಿದು ಪೊಲೀಸರಿಗೆ ದರೋಡೆಯಾದ ಬಗ್ಗೆ ಮಾಹಿತಿ ದೊರಕಿದ್ದು,ಎಸ್ಪಿ ಎಂ ನಾರಾಯಣ್ ಪ್ರತ್ಯೇಕ ತಂಡ ರಚಿಸಿ ದರೊಡೆಕೋರರ ಪತ್ತೆಗೆ ಮುಂದಾಗಿದ್ದರು,ಈ ಕಾರ್ಯಾಚರಣೆಯಲ್ಲಿ ತಲ್ಲತ್ ಗ್ಯಾಂಗಿನ ಇಬ್ಬರು ಸದಸ್ಯರನ್ನು  ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ದರೋಡೆ ಕುರಿತು ತನಿಖೆ ಕೈಗೆತ್ತಿಕೊಂಡ ಪೊಲೀಸರು ಚಾಲಕರಿಬ್ಬರನ್ನು ಬಂಧನ ಮಾಡಿ ತನಿಖೆ ಮಾಡಿದಾಗ ಕೆಲವೊಂದು ಮಹತ್ವದ ಮಾಹಿತಿ ಹೊರಬಂದಿದೆ. ಮಂಗಳೂರು ಹೊರವಲಯದ ಅಡ್ಯಾರ್‌, ಬಜಾಲ್‌ನಲ್ಲಿ ಸಕ್ರಿಯವಾಗಿರುವ ತಲ್ಲತ್‌ ಗ್ಯಾಂಗ್‌ನ ಸದಸ್ಯರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *