Ankola|ಅಮೃತ ಮಹೋತ್ಸವ ಸಮಿತಿಯಿಂದ ವಾಸರಕುದ್ರಿಗೆ ಶಾಲೆಗೆ ಧ್ವನಿವರ್ಧಕ ಕೊಡುಗೆ

Spread the love

ಅಂಕೋಲಾ : ತಾಲೂಕಿನ ವಾಸರಕುದ್ರಿಗೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಲಾ ಅಮೃತ ಮಹೋತ್ಸವ ಸಮಿತಿಯವರು ಕಲಿಕೋಪಕರಣವಾಗಿ ಧ್ವನಿವರ್ಧಕ ಕೊಡುಗೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಾಸರಕುದ್ರಿಗೆ ಗ್ರಾಮ ಪಂಚಾಯತ ಅಧ್ಯಕ್ಷ ಪ್ರದೀಪ ನಾಯಕ ಊರ ಶಾಲೆಗೆ ಧ್ವನಿವರ್ಧಕ ಕೊಡುಗೆ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಹಾಗೂ ಶಾಲಾ ಅಮೃತ ಮಹೋತ್ಸವ ಆಚರಣೆಯ ನಂತರವೂ ಅಮೃತ ಮಹೋತ್ಸವ ಸಮಿತಿಯವರು ಪ್ರತೀ ವರ್ಷ ಶಾಲೆಗೆ ಹಲವು ರೀತಿಯ ಸಹಾಯ ಮಾಡುತ್ರಿರುವುದನ್ನು ಸ್ಮರಿಸಿ, ಶಾಲೆಗೆ ಒಂದು ಸ್ಮಾರ್ಟ್ ಕ್ಲಾಸ್ ರೂಮ ಅವಶ್ಯಕತೆಯಿದ್ದು, ಆದಷ್ಟು ಬೇಗ ಅದು ಎಲ್ಲರ ನೆರವಿನೊಂದಿಗೆ ಈಡೇರುವಂತಾಗಲಿ. ತಾವು ಸಹ ಸಹಾಯ ನೀಡುವುದಾಗಿ ಭರವಸೆ ನೀಡಿದರು.

ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಆರ್. ಎಸ್. ನಾಯಕ ಕೊಟ್ಟ ದ್ವನಿವರ್ಧಕವನ್ನು ಸದು ಉಪಯೋಗಿಸಿಕೊಳ್ಳುವಂತೆ ತಿಳಿಸಿ ತಾನು ಸಹ ಸ್ಮಾರ್ಟ್ ಕ್ಲಾಸ್ ಗೆ ನೆರವು ನೀಡುತ್ತೇನೆಂದರು. ಅಮೃತ ಮಹೋತ್ಸವ ಸಮಿತಿಯ ಸದಸ್ಯರಾದ ಕಾಂತ್ ಮಾಸ್ಟರ್ ಮಾತನಾಡುತ್ತಾ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜಾಗೃತ ನೆಲವೆಂದು ಗುರುತಿಸಲ್ಪಟ್ಟ ವಾಸರಕುದ್ರಿಗೆ ಎಂಬ ಗ್ರಾಮ ಹಲವಾರು ಗಮನ ಸೆಳೆಯುವ ಸಾಧನೆ ಮಾಡಿದೆ. ಮುಂದಿನ ದಿನಗಳಲ್ಲಿಯೂ ಶೈಕ್ಷಣಿಕವಾಗಿ ನಾಡಿನಲ್ಲಿ ಗುರುತಿಸಿಕೊಳ್ಳಲಿ ಎಂದು ಹೇಳಿ ಶಾಲಾ ಮಕ್ಕಳ ಕಲಿಕೆಯ ವಿಚಾರದಲ್ಲಿ ನಮ್ಮ ಅಮೃತ ಮಹೋತ್ಸವ ಸಮಿತಿ ಯಾವತ್ತೂ ಸಹಕಾರ ನೀಡುತ್ತದೆ ಎಂದರು.

ವೇದಿಕೆಯಲ್ಲಿ ಸಮಿತಿಯ ಪ್ರಮುಖರಾದ ನೀಲಕಂಠ ನಾಯಕ, ದಿನಕರ ನಾಯಕ ಮುಂತಾದವರಿದ್ದರು.
ಮುಖ್ಯಾಧ್ಯಾಪಕ ಅರುಣ ನಾಯ್ಕ್ ಸ್ವಾಗತಿಸಿ ಅಮೃತ ಮಹೋತ್ಸವ ಸಮಿತಿಯವರು ಶಾಲೆಗೆ ಅವಶ್ಯವಿದ್ದ ಧ್ವನಿವರ್ಧಕವನ್ನು ಕೊಡುಗೆಯಾಗಿ ನೀಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು. ಶಿಕ್ಷಕ ವಿನಾಯಕ ಹೆಗಡೆ ನಿರೂಪಿಸಿದರು. ಗಣಪತಿ ಗೌಡ ನಿರೂಪಣೆ ವಂದಿಸಿದರು.
ಮನೋಹರ ನಾಯಕ ಸೋಮಶೇಖರ್ ನಾಯಕ ಶಾಲಾ ಶಿಕ್ಷಕಿ ದೇವಿ ಗೌಡ ಮುಂತಾದವರಿದ್ದರು.

Leave a Reply

Your email address will not be published. Required fields are marked *