ಅಂಕೋಲಾ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳು ಮಹಿಳೆಯರಿಗೆ ಸ್ವಾವಲಂಬನೆಯ ಜೊತೆಗೆ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ ಎಂದು ಕಾರವಾರ ಅಂಕೋಲಾ ಶಾಸಕ ಸತೀಶ್ ಸೈಲ್ ಹೇಳಿದರು.

ಅವರು ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತ್ರೈ ಮಾಸಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಯೋಜನೆಗಳ ಬಗ್ಗೆ ಯಾರು ಎಷ್ಟೇ ಟೀಕೆಗಳನ್ನು ಮಾದುತ್ತಿದ್ದಾರೆ ಆದರೆ ಅವರಿಗೆ ಫಲಾನುಭವಿ ಮಹಿಳೆಯರೇ ಉತ್ತರ ನೀಡುತ್ತಿದ್ದಾರೆ.ಮುಂದಿನ ದಿನಗಳಲ್ಲಿ ನಮ್ಮ ಸರಕಾರ ಮತ್ತಷ್ಟು ಯೋಜನೆಗಳನ್ನು ಹಮ್ಮಿಕೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಶಕ್ತಿ ಬಾಗ್ಯ,ಗೃಹಜ್ಯೋತಿ,ಗೃಹಲಕ್ಷ್ಮೀ ಯೋಜನೆಗಳ ಫಲಾನುಭವಿ ಮಹಿಳೆಯರು ತಮ್ಮ ಜೀವನಕ್ಕೆ ಐದು ಗ್ಯಾರಂಟಿಗಳು ಹೇಗೆ ಫಲಪ್ರದವಾಗಿದೆ ಎಂದು ಅನಿಸಿಕೆಯನ್ನು ಸಭೆಯಲ್ಲಿ ಸಾಧರಪಡಿಸಿದರು.ಅನಿಸಿಕೆ ವ್ಯಕ್ತಪಡಿಸಿದ ವಿದ್ಯಾ ಗುನಗಾ ಹಾಗೂ ಅನಂದಿ ಹರಿಕಂತ್ರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಸತೀಶ್ ಸೈಲ್,ತಾಪಂ ಆಡಳಿತ ಅಧಿಕಾರಿ ನಾಗೇಶ ರಾಯ್ಕರ್,ತಾಪಂ ಕಾರ್ಯನಿರ್ವಹಣಾಧಿಕಾರಿ ಸುನೀಲ್ ಎಂ,ತಹಶೀಲ್ದಾರ್ ಅನಂತ್ ಶಂಕರ್,ಗ್ಯಾರಂಟಿ ಪ್ರಾಧಿಕಾರಾದ ತಾಲೂಕಾಧ್ಯಕ್ಷ ಪಾಂಡುರಂಗ ಗೌಡ,ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ಪುರುಷೋತ್ತಮ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ವೇಳೆಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಗಾಂವ್ಕರ್, ತಾಪಂ ಮಾಜಿ ಸದಸ್ಯರಾದ ಶಾಂತಿ ಆಗೇರ,ಮಂಜುಳಾ ವೆರ್ಣೇಕರ್ ಮುಂತಾದವರು ಉಪಸ್ಥಿತರಿದ್ದರು.


Leave a Reply