Ankola | ಹುಂಡೈ ಕ್ರೆಟಾದಲ್ಲಿ ಕೋಟಿ ಕೋಟಿ ಹಣ ಪತ್ತೆ.

Spread the love

ಅಂಕೋಲಾ:ಅನುಮಾನಾಸ್ಪದವಾಗಿ ಬಿಟ್ಟು ಹೋದ ಕಾರಿನಲ್ಲಿ 1 ಕೋಟಿ ಹದಿನಾಲ್ಕು ಲಕ್ಷ ನಗದು ಪತ್ತೆಯಾದ ಘಟನೆ ಅಂಕೋಲಾ ತಾಲೂಕಿನ ರಾಮನಗುಳಿ ಬಳಿ ನಡೆದಿದೆ.

ಹೌದು…ರಾಷ್ಟ್ರೀಯ ಹೆದ್ದಾರಿ 63 ರ ರಾಮನಗುಳಿಯ ಬಳಿ ನಿರ್ಜನ ಪ್ರದೇಶದಲ್ಲಿ KA 51 MB 9634 ಎಂಬ ಹುಂಡೈ ಕಂಪನಿಯ ಕ್ರೆಟಾ ಕಾರೊಂದು ಅನುಮಾನಾಸ್ಪದವಾಗಿ ಕಂಡುಬಂದಿದ್ದು ಕಾರಿನಲ್ಲಿ ಒಂದು ಕೋಟಿಗಿಂತ ಹೆಚ್ಚು ನಗದು ಹಣ ದೊರೆತಿದ್ದು ಅದನ್ನು ಅಂಕೋಲಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಏನಿದು ಪ್ರಕರಣ?

ನಿನ್ನೆಯಿಂದ ರಾಷ್ಟ್ರೀಯ ಹೆದ್ದಾರಿ 63 ರ ನಿರ್ಜನ ಪ್ರದೇಶದಲ್ಲಿ  ಅನುಮಾನಾಸ್ಪದವಾಗಿ ಕಾರೊಂದು ಬೋನಟ್ ಹಾಗೂ ಡಿಕ್ಕಿ ತೆರೆದ ರೀತಿಯಲ್ಲಿ ಹಾಗೂ ಕಾರಿನ ಸೀಟ್, ಕಿಟಕಿ ಗಾಜುಗಳನ್ನು ಒಡೆದ ಸ್ಥಿತಿಯಲ್ಲಿ ಕಂಡುಬಂದಿದ್ದು, ಈ ಕಾರು ಜ.27 ರ ಬೆಳಿಗ್ಗೆಯಿಂದಲೇ ನಿಂತಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಕಾರನ್ನು ಠಾಣೆಗೆ ತಂದು ಪರಿಶೀಲಿಸಿದಾಗ ಕಾರಿನಲ್ಲಿ ಸೀಟಿನ ಒಳಗೆ ಹಣ ಕಂಡುಬಂದಿದೆ.ಇದು  ಕಳ್ಳತನದ ಕಾರೋ?  ಕಾರಿನಲ್ಲಿರುವ ಹಣ ಯಾವ ಮೂಲದ್ದು? ದರೋಡೆ ಮಾಡಿ ಬಂದಿರಬಹುದೇ ಅಥವಾ  ಈ ಹಣಕ್ಕೆ ರಾಜಕೀಯ ನಂಟು ಏನಾದರೂ ಇತ್ತೇ? ಎನ್ನುವುದು ತನಿಖೆಯಿಂದ ಹೊರಬರಬೇಕಿದೆ.

ಮೂರ್ನಾಲ್ಕು ನಂಬರ್ ಪ್ಲೇಟುಗಳು.

ಕಾರಿನಲ್ಲಿ ಮೂರ್ನಾಲ್ಕು  ಬೇರೆ ಬೇರೆ ನೋಂದಣಿಯ ನಂಬರ್ ಪ್ಲೇಟುಗಳು ದೊರೆತಿದ್ದು,ಇದು ಬಾಗಶಃ ಕಳ್ಳತನಕ್ಕೆ ಉಪಗೋಗಿಸುವ ವಾಹನವಾಗಿರಬಹುದು ಎನ್ನುವ ಸಂಶಯ ಎದುರಾಗಿದೆ. ತನಿಖೆ ಹಂತದಲ್ಲಿದ್ದು ಕಾರಿನ ಮಾಲಕರ ಬಗ್ಗೆ ತಿಳಿದುಬಾರಬೇಕಿದೆ.

ಕಾರಿನ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಂಕೋಲಾ‌ ಪೋಲಿಸ್ ಠಾಣೆಯ ಸಿಪಿಐ ಚಂದ್ರಶೇಖರ್ ಮಠಪತಿ, ಪಿಎಸ್ಐ ಉದ್ದಪ್ಪ ಧರೇಪ್ಪನವರ್, ಪಿಎಸ್ ಐ ಸುನೀಲ್ ಹಾಗೂ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ‌ ನಡೆಸಿ ತನಿಖೆ ಮುಂದುವರೆಸಿದ್ದಾರೆ. ಪಂಚನಾಮೆ ನಡೆಸಿ ಕಾರನ್ನು ವಶಕ್ಕೆ ಪಡೆದುಕೊಂಡಿದ್ದು, ಕಾರಿನಲ್ಲಿದ್ದ ಹಣದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

Leave a Reply

Your email address will not be published. Required fields are marked *