ಅಂಕೋಲಾ:ತಾಲೂಕಿನ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾದ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ಖಾತೆಗೆ ಸೈಬರ್ ಕಳ್ಳರು ಕನ್ನ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೌದು… ಕೆಲದಿನಗಳ ಹಿಂದೆಯಷ್ಟೇ ಅಂಕೋಲಾ ಅರ್ಬನ್ ಬ್ಯಾಂಕಿನ ಚುನಾವಣೆ ನಡೆದಿದ್ದು,ಸ್ಥಳೀಯ ಸಂಸ್ಥೆಗಳ ಚುನಾವಣೆಗಿಂತಲೂ ಅರ್ಬನ್ ಬ್ಯಾಂಕ್ ರಣಕಣದ ತೀರ್ಪು ತೀವೃ ಕುತೂಹಲ ಕೆರಳಿಸಿತ್ತು,ರಂಗೇರಿದ ಚುನಾವಣಾ ಆಖಾಡದಲ್ಲಿ ಅಂತಿಮವಾಗಿ ರಾಜೇಂದ್ರ ಶೆಟ್ಟಿ ಅಧ್ಯಕ್ಷರಾಗಿ,ಉಪಾಧ್ಯಕ್ಷರಾಗಿ ಉಮೇಶ್ ನಾಯ್ಕ ಆಯ್ಕೆಯಾಗಿದ್ದರು. ನೂತನ ಆಡಳಿತ ಮಂಡಳಿ ರಚಿಸಿ ಸಂತಸದಲ್ಲಿದ್ದ ಅರ್ಬನ್ ಬ್ಯಾಂಕಿಗೆ ಶಾಕ್ ಒಂದು ಎದುರಾಗಿತ್ತು, RTGS ಮೂಲಕ ವ್ಯವಹಾರವಾಗಬೇಕಿದ್ದ ಹಣ ನಾಪತ್ತೆಯಾಗಿದೆ. ಶಾಖೆಯ ಅಕೌಂಟ್ ಹ್ಯಾಕ್ ಮಾಡುವ ಮೂಲಕ 33,42,845 ಲಕ್ಷ ಹಣವನ್ನು ಸೈಬರ್ ಕಳ್ಳರು ತಮ್ಮ ಖಾತೆಗೆ ಜಮಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಸೈಬರ್ ಕ್ರೈಂ ವಿಭಾಗದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಬ್ಯಾಂಕಿನ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ರವೀಂದ್ರ ಪಾಂಡುರಂಗ ವೈದ್ಯ ಪ್ರಕರಣ ದಾಖಲಿಸಿದ್ದಾರೆ. ಜನವರಿ 24 ರಿಂದ 27 ರ ನಡುವೆ ಈ ಘಟನೆ ನಡೆದಿರುವ ಬಗ್ಗೆ ತಿಳಿದು ಬಂದಿದ್ದು ತನಿಖೆಯಿಂದ ಮತ್ತಷ್ಟು ತಿಳಿಯಬೇಕಿದೆ.

ಏನಿದು ಪ್ರಕರಣ?
ಅಂಕೋಲಾ ಕೇಂದ್ರ ಕಚೇರಿಯಲ್ಲಿ ಖಾತೆದಾರರಾದ ಮೀನಾಕ್ಷಿ ಕೃಷ್ಣಗೌಡ ರಿಂದ ವ್ಯವಸಾಯ ಸೇವಾ ಸಹಕಾರಿ ಸಂಘ ಕ್ಕೆ RTGS ಮಾಡಿದ ಐದು ಲಕ್ಷ ರೂಪಾಯಿ, ಖಾಸಗಿ ಗ್ಯಾಸ್ ಸೆಂಟರ್ ನಿಂದ ಗ್ಯಾಸ್ ಸೆಂಟರ್ ಗೆ RTGS ಮಾಡಿದ 5,46,000 ಲಕ್ಷ ರೂಪಾಯಿ, ಜೊತೆಗೆ ಇವರದೇ ಮತ್ತೊಂದು ಖಾತೆಗೆ RTGS ಮಾಡಿದ 6,60,000 ಲಕ್ಷ ರೂಪಾಯಿ , ಸವಿತಾ ವೆಂಕಟರಮಣ ನಾಯ್ಕ ರಿಂದ TAFE ACCESS LTD ಗೆ RTGS ಮಾಡಿದ 16,36,895 ಲಕ್ಷ ರೂಪಾಯಿ ಸೇರಿ ಒಟ್ಟು 33,42,895 ಲಕ್ಷ ರೂಪಾಯಿ ಹಣವು RTGS ಮಾಡಿದ ಖಾತೆಗೆ ಜಮಾ ಗೊಳ್ಳದೆ ಇರುವುದನ್ನು ಖಾತರಿ ಪಡಿಸಿಕೊಂಡ ಬ್ಯಾಂಕಿನ ಆಡಳಿತ ಮಂಡಳಿ ಪೊಲೀಸರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.


Leave a Reply