ಅಂಕೋಲಾ : ವಿವೇಕಾನಂದರ ತತ್ವವಾದರ್ಷಗಳನ್ನು ಬದುಕಿನಲ್ಲಿ ಮೈಗೂಡಿಸಿಕೊಳ್ಳುವುದು ಶ್ರೇಯಸ್ಕರ ಎಂದು ಮುಖ್ಯಾಧ್ಯಾಪಕ ಜಗದೀಶ ನಾಯಕ ಹೊಸ್ಕೇರಿಯವರು ನುಡಿದರು.
ಅವರು ತಾಲೂಕಿನ ಬೋಳೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕ ಜಯಂತಿಯ ಪ್ರಯುಕ್ತ ಆಯೋಜಿಸಿದ ವಿವೇಕ ವಂದನ ಕಾರ್ಯಕ್ರಮದಲ್ಲಿ ವಿವೇಕಾನಂದರ ಜೀವನ ಮತ್ತು ಆದರ್ಶಗಳ ಕುರಿತಂತೆ ಮಾತನಾಡುತ್ತಾ, ಏಕಪದವು ಲೋಕಕ್ಕೆ ಹಿತವೆಂದು ಹೇಳಿದರು.
ವಿವೇಕಾನಂದರ ಭಾವಚಿತ್ರಕ್ಕೆ ಮಾಲಾರ್ಪಣೆಗೈದ ವಂದಿಗೆ ಗ್ರಾಮ ಪಂಚಾಯತದ ನಿಕಟಪೂರ್ವ ಅಧ್ಯಕ್ಷೆ ಪುಷ್ಪ ನಾಯ್ಕ ಶುಭವನ್ನು ಕೋರಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಸವಿತಾ ಆನಂದು ನಾಯ್ಕ ಹಾಗೂ ಅಕ್ಷರ ದಾಸೋಹದ ಸಿಬ್ಬಂದಿ ಸುಮನಾ ನಾಯ್ಕ ಮೊದಲಾದವರಿದ್ದರು.


Leave a Reply