ಅಂಕೋಲಾ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರ ಹಟ್ಟಿಕೇರಿ ಬಳಿ ಕಾರಿನಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರನ್ನು ಅಂಕೋಲಾ ಪೊಲೀಸರು ಬಂದಿಸಿದ ಘಟನೆ ನಡೆದಿದೆ.

ಕಾರು ಅಡ್ಡಗಟ್ಟಿದ ಅಂಕೋಲಾ ಪೊಲೀಸರಿಗೆ ಕಾದಿತ್ತು ಶಾಕ್?
ಖಚಿತ ಮಾಹಿತಿಯ ಮೇರೆಗೆ ಕಾರವಾರದ ಕಡೆಯಿಂದ ಬರುತ್ತಿದ್ದ ಕಾರನ್ನು ಅಡ್ಡಗಟ್ಟಿ ತಪಾಸಣೆ ನಡೆಸಿದ ಪೊಲೀಸರಿಗೆ ಶಾಕ್ ಒಂದು ಎದುರಾಗಿತ್ತು. ₹80,000 ರೂಪಾಯಿ ಮೌಲ್ಯದ ಗೋವಾ ಮದ್ಯ ದೊರೆತಿದ್ದು, ಆರೋಪಿಗಳ ಬಾಯಿಂದ ಪೊಲೀಸಪ್ಪನ ಹೆಸರೊಂದು ಹೊರಬಿದ್ದಿದೆ, ಕಳೆದ ಕೆಲ ತಿಂಗಳುಗಳ ಹಿಂದೆಯಷ್ಟೇ ಗೋವಾ ಅಕ್ರಮ ಸಾರಾಯಿ ಸಾಗಾಟ ಪ್ರಕರಣದಲ್ಲಿ ಅಂದಿನ ಮಲ್ಲಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಸಂತೋಷ್ ಲಮಾಣಿ ಎನ್ನುವ ಪೊಲೀಸಪ್ಪನ ಮೇಲೆ ಪ್ರಕರಣ ದಾಖಲಾಗಿತ್ತು, ಆತನನ್ನು ಕೂಡಲೇ ಅಮಾನತ್ತು ಮಾಡಿ ಎಸ್ಪಿ ಆದೇಶ ಹೊರಡಿಸಿದ್ದರು, ಈ ಪ್ರಕರಣದಲ್ಲಿಯೂ ಬಂಧಿತ ಆರೋಪಿಗಳು ಆ ಪೊಲೀಸಪ್ಪನ ಹೆಸರನ್ನೇ “ಸಂತೋಷದಿಂದ” ಹೇಳಿದ್ದಾರೆ ಎನ್ನಲಾಗಿದೆ. ಗೋವಾ ಸಾರಾಯಿ ಸಾಗಾಟಕ್ಕೆ ಸಂಬಂಧಿಸಿದಂತೆ ಸಹಕರಿಸಿದ್ದ ಬಗ್ಗೆ ಆಕಾಶ ಹಾಗೂ ಸಂತೋಷ್ ಎನ್ನುವವರ ಮೇಲು ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ 9480396747 ಮೊಬೈಲ್ ನಂಬರಿನ ಸಂತೋಷ್ ಯಾರೆಂಬುದು ತಿಳಿದು ಬರಬೇಕಿದೆ.

ಹೌದು….ಅಂಕೋಲಾ ಠಾಣಾ ವ್ಯಾಪ್ತಿಯ ಎನ್.ಹೆಚ್-66, ಬೇಲೆಕೇರಿ ಕ್ರಾಸ್ ಹತ್ತಿರ ಮಾರುತಿ ಸುಜುಕಿ ಸ್ವಿಪ್ಟ ಕಾರ್ ನಂ: ಕೆಎ42, ಎಂ-2190 ನಂಬರಿನ ಕಾರಿನಲ್ಲಿ 80000 ಸಾವಿರ ಮೌಲ್ಯದ ಗೋವಾ ಅಕ್ರಮ ಮದ್ಯ ಸಹಿತ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಾಂಡವಪುರ ಮೂಲದ ದೀವಾಕರ ಆರ್ ಈರಯ್ಯ (33) ಮತ್ತು ಮಾದೇವ ಕೆ. ಕೃಷ್ಣಪ್ಪ (40) ಎನ್ನುವವರನ್ನು ಬಂಧಿಸಲಾಗಿದೆ.

ಹಾಗೆಯೇ ಆಪಾದಿತರಾದ ಆಕಾಶ ಹಾಗೂ ಸಂತೋಷ ಇವರ ಸಹಾಯದಿಂದ 80,905/- ರೂ. ಮೌಲ್ಯದ ಸಾರಾಯಿ ಬಾಟಲಿಗಳನ್ನು ಯಾವುದೇ ಪಾಸ್ ಯಾ ಪರವಾನಿಗೆ ಇಲ್ಲದೇ ಸಾಗಾಟ ಮಾಡುವಾಗ, ಆರೋಪಿತರನ್ನು ಹಾಗೂ ಸಾರಾಯಿ ಬಾಟಲಿಗಳ ಸಹಿತ ಸ್ವಿಫ್ಟ್ ಕಾರನ್ನು ವಶಕ್ಕೆ ಪಡೆದು, ಆರೋಪಿತರ ಮೇಲೆ ಅಂಕೋಲಾ ಪೊಲೀಸ್ ಠಾಣಾ ಗುನ್ನಾ ನಂ: 25/2025 ಕಲಂ: 32,34,38(ಎ) ಕರ್ನಾಟಕ ಅಬಕಾರಿ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.


Leave a Reply