ಅಂಕೋಲಾ: ಶಿಸ್ತುಬದ್ಧ ಶಿಕ್ಷಣ ಹಾಗೂ ಉತ್ತಮ ಕಲಿಕೆಗೆ ತಾಲೂಕಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಪೂರ್ಣಪ್ರಜ್ಞಾ ಗ್ಲೋಬಲ್ ಸ್ಕೂಲ್ ಅಪ್ ಎಕ್ಸಲೆನ್ಸ್ ಒತ್ತು ನೀಡಿ ವಿದ್ಯಾರ್ಥಿಗಳ ಪ್ರಗತಿಗೆ ಕಾರಣವಾಗಿದೆ ಎಂದು ಪುರಸಭೆ ಅಧ್ಯಕ್ಷ ಸೂರಜ್ ಎಂ ನಾಯ್ಕ ಹರ್ಷವ್ಯಕ್ತಪಡಿಸಿದರು.

ಅವರು ಪೂರ್ಣಪ್ರಜ್ಞಾ ಗ್ಲೋಬಲ್ ಸ್ಕೂಲ್ ಅಪ್ ಎಕ್ಸಲೆನ್ಸ್ ಶಾಲೆಯ ವಾರ್ಷಿಕ ಕ್ರೀಡಾಕೂಟ ‘ಆಂಗಿಕ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಲೆಯ ಬಗ್ಗೆ ಮೆಚ್ಚುಗೆಯ ಮಾತನಾಡಿ ಶಾಲೆ ಪ್ರಾರಂಭವಾಗಿ ಕೇವಲ ಮೂರು ವರ್ಷ ಆದರೂ ಕೂಡ ಇಲ್ಲಿ ನೀಡುತ್ತಿರುವ ಶಿಸ್ತುಬದ್ಧ ಶಿಕ್ಷಣ ಹಾಗೂ ಸೌಲಭ್ಯಗಳಿಂದ ತಾಲೂಕಿನೆಲ್ಲೆಡೆ ಮನೆ ಮಾತಾಗಿದೆ, ಈಗಿನ ದಿನಗಳಲ್ಲಿ ಕಡಿಮೆಯಾಗುತ್ತ ಹೋಗಿರುವ ಶಿಸ್ತು, ಸಂಯಮ ಮತ್ತು ಸಂಸ್ಕಾರವನ್ನು ಇಲ್ಲಿನ ವಿದ್ಯಾರ್ಥಿಗಳು ಪಾಲನೆ ಮಾಡುವುದನ್ನು ನೋಡಿದರೆ ಇಲ್ಲಿನ ಶಿಕ್ಷಕಿಯರ ಮತ್ತು ಶಾಲೆಯ ಆಡಳಿತಾಧಿಕಾರಿ ಕೀರ್ತಿ ಪ್ರಶಾಂತ್ ನಾಯಕರ ಪ್ರಯತ್ನ ಎದ್ದು ಕಾಣುತ್ತದೆ, ಇದೇ ಗುಣಗಳನ್ನು ಮಕ್ಕಳು ಮುಂದುವರಿಸಿಕೊಂಡು ಹೋಗುವಂತಾಗಲಿ ತನ್ಮೂಲಕವಾಗಿ ಮುಂದಿನ ದಿನಗಳಲ್ಲಿ ಉನ್ನತ ಮಟ್ಟಕ್ಕೆ ಇಲ್ಲಿಯ ವಿದ್ಯಾರ್ಥಿಗಳು ಮತ್ತು ಈ ಶಾಲೆ ಬೆಳೆಯಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪತ್ರಕರ್ತ ಅಕ್ಷಯಕುಮಾರ್ ನಾಯ್ಕ ಮಾತನಾಡಿ ಚಿಕ್ಕ ಮಕ್ಕಳೊಂದಿಗೆ ಬೇರೆಯುವುದರಿಂದ ಅನೇಕಾರು ರೋಗಗಳನ್ನು ಕಡಿಮೆಮಾಡಿಕೊಳ್ಳಬಹುದು ಹಾಗೆಯೇ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗಾಗಿ ಒಂದಿಷ್ಟು ಸಮಯವನ್ನು ಮೀಸಲಿಡಲೇಬೇಕು, ಶಾಲೆಯಲ್ಲಿ ಕೇವಲ ಏಳೆಂಟು ಗಂಟೆ ಶಿಕ್ಷಣವನ್ನು ಪಡೆಯುವ ಮಗುವು ಬಹುತೇಕ ಸಮಯವನ್ನು ಮನೆಯಲ್ಲಿಯೇ ಕಳೆಯುವುದರಿಂದ ಮಗುವನ್ನು ಸಂಸ್ಕಾರದಿಂದ ಬೆಳೆಸುವುದರಲ್ಲಿ ಪಾಲಕರ ಪಾತ್ರ ಬಹಳ ಮಹತ್ವದ್ದು ಎಂದು ಹೇಳಿದರು.

ಟ್ರಸ್ಟಿನ ಕಾರ್ಯಾಧ್ಯಕ್ಷ ಪ್ರಶಾಂತ್ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲೆಯ ಆಡಳಿತಧಿಕಾರಿ ಮತ್ತು ಸಂಸ್ಥೆಯ ಟ್ರಸ್ಟಿ ಕೀರ್ತಿ ಪ್ರಶಾಂತ ನಾಯಕ ವೇದಿಕೆಯಲ್ಲಿದ್ದರು. ಶಿಕ್ಷಕಿ ಕುಮಾರಿ ರಶ್ಮಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದ್ದರು, ಶಿಕ್ಷಕಿ ತೇಜಸ್ವಿನಿ ಪಡ್ತಿ ವಂದಿಸಿದರು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು.


Leave a Reply