Ankola|ಬೋಳೆ ಶಾಲೆಯಲ್ಲಿ ನೇತಾಜಿ ಜಯಂತಿ ಆಚರಣೆ.

Spread the love

ಅಂಕೋಲಾ : ತಾಲೂಕಿನ ವಂದಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಬೋಳೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮ ಜಯಂತಿಯ ಕಾರ್ಯಕ್ರಮವನ್ನು ಆಚರಿಸಲಾಯಿತು.

ನೇತಾಜಿಯವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿದ ಶಾಲಾ ಮುಖ್ಯಾಧ್ಯಾಪಕ ಹಾಗೂ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ನೌಕರರ ಸಂಘದ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿಯವರು ಮಾತನಾಡಿ, ಸಮ್ಮೋಹಕವಾದ ಶರೀರ ಮತ್ತು ಶಾರೀರವನ್ನು ಹೊಂದಿದ್ದ ಸುಭಾಷ್ ಚಂದ್ರರ ಸ್ವಾತಂತ್ರ್ಯ ಹೋರಾಟದಲ್ಲಿನ ತ್ಯಾಗ ಬಲಿದಾನದಲ್ಲಿ ಹುದುಗಿದ ದೇಶೀಯತೆಯ ಕೆಚ್ಚನ್ನು ಮತ್ತೊಬ್ಬರಲ್ಲಿ ಕಾಣಲು ಸಾಧ್ಯವೇ ಇಲ್ಲ,ಅವರನ್ನು ಆದರ್ಶವನ್ನಾಗಿ ಒಪ್ಪಿ ರಾಷ್ಟ್ರೀಯತೆಯ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು, ದೇಹಕ್ಕಿಂತ ದೇಶವೇ ದೊಡ್ಡದು ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದರು.ಕಾರ್ಯಕ್ರಮದಲ್ಲಿ ಶಿಕ್ಷಕಿ ಸವಿತಾ ರಮೇಶ ನಾಯ್ಕ, ಅಕ್ಷರ ದಾಸೋಹದ ಸಿಬ್ಬಂದಿ ಸುಮನಾ ನಾಯ್ಕ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *