ಬಂದರು ಸಮಸ್ಯೆಯನ್ನು ಮೀನುಗಾರರೊಂದಿಗೆ ಸೌಹಾರ್ದತೆಯಿಂದ ಬಗೆಹರಿಸಿ- ಮಾಸ್ತಪ್ಪ ನಾಯ್ಕ.

Spread the love

ಹೊನ್ನಾವರ:ಮೀನುಗಾರರು ಕರಾವಳಿ ಭಾಗದ ಸೈನಿಕರಿದ್ದಂತೆ ಅವರ ಮೇಲೆ ದೌರ್ಜನ್ಯ ನಡೆಸುವ ಬದಲಿಗೆ ಸಮಸ್ಯೆಯನ್ನು ಜನಪ್ರತಿನಿಧಿಗಳು ಅಧಿಕಾರಿಗಳು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಾಸಪ್ಪ ನಾಯ್ಕ ವಿಡಿಯೋ ಮೂಲಕ ವಿನಂತಿಸಿಕೊಂಡಿದ್ದಾರೆ.

    ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾ ಭಾಗದ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸುತ್ತೇನೆ. ಇಂದು ವಾಣಿಜ್ಯ ಬಂದರಿನ  ಬಗ್ಗೆ ವಿರೋಧಿಸುತ್ತಿದ್ದಾರೆ ಎಂದರೆ ಅವರಿಗೆ ಅದರಿಂದ ಸಮಸ್ಯೆ ಇದೆ ಅವರೆಲ್ಲರೂ ಮೀನು ಕೃಷಿಯನ್ನು ಅವಲಂಬಿಸಿಕೊಂಡಿದ್ದರು. ಅದರ ಹೊರತಾಗಿ ಅವರಿಗೆ ಜೀವನಕ್ಕೆ ಬೇರೆ ದಾರಿ ಇರಲಿಲ್ಲ ಈ ಕಾರಣದಿಂದಾಗಿ ಜನಪ್ರತಿನಿಧಿಗಳು ಅಧಿಕಾರಿಗಳು ಹಾಗೂ ಮೀನುಗಾರ ಮುಖಂಡರು ಒಂದಡೆ ಕುಳಿತು ಈಗ ಗುರುತಿಸುವ ಜಾಗದ ಪರ್ಯಾಯವಾಗಿ ಬೇರೆ ಜಾಗದಲ್ಲಿ ಬಂದರು ನಿರ್ಮಾಣದ ಬಗ್ಗೆ ಚರ್ಚೆ ಮಾಡಿ ತಿರ್ಮಾನಿಸುವ ಕಾರ್ಯವಾಗಬೇಕಿದೆ. ಸರ್ಕಾರದ ಯೋಜನೆಗಳು ಬರಬೇಕು ನಮ್ಮ ಹೊನ್ನಾವರದ ಭಾಗ ಅಭಿವೃದ್ಧಿ ಆಗಬೇಕು ಅದರ ಜೊತೆ ಮೀನುಗಾರು ಯಾವುದೇ ತೊಂದರೆ ಆಗಬಾರದು. ಇದರ ಬಗ್ಗೆ ಎಲ್ಲರೂ ಕುಳಿತು ಚರ್ಚೆ ಮಾಡಿ ಮೀನುಗಾರರು ರಕ್ಷಿಸಬೇಕು. ಮೀನುಗಾರು ಮೀನು ಹಿಡಿದು ಬಂದು ಸಂಸಾರವನ್ನು ನಡೆಸುತ್ತಿದ್ದಾರೆ.

ಅವರ ಕುಟುಂಬ ನಿರ್ವಹಣೆಗೆ ಸಮಸ್ಯೆ ಆಗದೆ ರೀತಿಯ ಅಭಿವೃದ್ದಿ ನಡೆಯಲಿ. ಇದರ ಬಗ್ಗೆ ಯಾರು ಕೂಡ ನಿಲಕ್ಷ ಮಾಡಬಾರದು ಮೀನುಗಾರರ ಬೆನ್ನೆಲುಬಾಗಿ ನಿಲ್ಲೋಣ ಎಂದು ಮನವಿ ಮಾಡಿ ವಿಡಿಯೋ ಹರಿಬಿಟ್ಟಿದ್ದಾರೆ.

Leave a Reply

Your email address will not be published. Required fields are marked *