ಕಾರವಾರ: ಪ್ರೀತಿಯ ನಾಟಕವಾಡಿ,ಪುಸಲಾಯಿಸಿ ಅಮ್ಮ ಕರೆಯುತ್ತಿದ್ದಾಳೆ ಎಂದು ಕರೆದು 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ,ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC -1 ಕಾರವಾರದ ನ್ಯಾಯಾಧೀಶರಾದ ಪ್ರತಿಭಾ ಬಂಡೂರಾವ್ ಕುಲಕರ್ಣಿ ಆರೋಪಿಗೆ 20 ವರ್ಷಗಳ ಕಠಿಣ ಕಾರಗ್ರಹ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಕೈಗೆತ್ತಿಕೊಂಡ ಅಂದಿನ ಸಿಪಿಐ ಸಂತೋಷ ಶೆಟ್ಟಿ ಆರೋಪಿಯನ್ನು ಹೆಡೆಮುರಿಕಟ್ಟಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನಂತರದಲ್ಲಿ ಸರಕಾರಿ ಅಭಿಯೋಜಕರಾದ ತನುಜಾ ಹೊಸಪಟ್ಟಣ ಪ್ರಕರಣವನ್ನು ಎಳೆ ಎಳೆಯಾಗಿ ನ್ಯಾಯಾಧೀಶರ ಮುಂದೆ ಸಾಧರಪಡಿಸಿ ಆರೋಪಿಗೆ 20 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ಕೊಡಿಸಲು ಪ್ರಮುಖ ಕಾರಣವಾಗಿದ್ದಾರೆ.

ಏನಿದು ಪ್ರಕರಣ?
ಅಂಕೋಲಾ ಠಾಣೆ ವ್ಯಾಪ್ತಿಯಲ್ಲಿ ಬರುವ ಅಗಸೂರು ತಾಲೂಕಿನ ಜನತಾ ಕಾಲೋನಿಯ ಅಜಿತ್ ಪೇಡ್ನೆಕರ್ ( 29) 17 ವರ್ಷದ ಅಪ್ರಾಪ್ತ ನೊಂದ ಬಾಲಕಿಯೊಂದಿಗೆ ಆತ್ಮೀಯರಾಗಿ ಇದ್ದುಕೊಂಡು ಪ್ರೀತಿಸುತ್ತೇನೆ ಮದುವೆಯಾಗುತ್ತೇನೆ ಅಂತ ಪುಸಲಾಯಿಸಿ
ಬಾಲಕಿಗೆ ತನ್ನ ತಾಯಿ ಕರೆಯುತ್ತಿರೋದಾಗಿ ಸುಳ್ಳು ಹೇಳಿ ತನ್ನ ಮನೆಗೆ ಕರೆಸಿಕೊಂಡು ಬಾಲಕಿಗೆ ಬಲತ್ಕಾರ ಮಾಡಿದ್ದಲ್ಲದೆ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದು ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕಲಂ 376,506 ಐಪಿಸಿ ಮತ್ತು 4,6 ಪೋಕ್ಸೋ ಕಾಯ್ದೆಯನ್ವಯ ಪ್ರಕರಣ ದಾಖಲಾಗಿತ್ತು.

ಆರೋಪಿ ಅಂಕೋಲಾ ತಾಲೂಕಿನ ಅಗಸೂರಿನ ಜನತಾ ಕಾಲೋನಿ ನಿವಾಸಿ ಅಜಿತ್ ಹರಿಹರ @ ಬಾಬು ಪೇಡ್ನೆಕರ್ (29) ಈ ಪ್ರಕರಣದಲ್ಲಿ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಒಳಪಡಿಸಿದ್ದು,ತನಿಖಾಧಿಕಾರಿಯಾಗಿ ಸಿಪಿಐ ಸಂತೋಷ್ ಶೆಟ್ಟಿ, ಕಾರವಾರ ಸೆಷೆನ್ಸ್ ನ್ಯಾಯಾಲಯದ ಸರಕಾರಿ ಅಭಿಯೋಜಕರು ತನುಜಾ ಹೊಸಪಟ್ಟಣ ಮತ್ತು ನ್ಯಾಯಾಲಯದಲ್ಲಿ ವಿಚಾರಣೆಗೆ ಜರುಗುವ ಕಾಲಕ್ಕೆ ಸರಕಾರಿ ಅಭಿಯೋಜಕರ ಮಾರ್ಗದರ್ಶನದoತೆ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿಯುವ ವಿಚಾರದ ಬಗ್ಗೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ ಅಂಕೋಲ ಠಾಣೆಯ ಎಎಸ್ಐ ಮಹಾಬಲೇಶ್ವರ ಗಡೆರ ಮತ್ತು ಈ ಪ್ರಕರಣದ ಮೇಲುಸ್ತುವಾರಿ ಅಧಿಕಾರಿಯಾದ ಸಿಪಿಐ ಚಂದ್ರಶೇಖರ ಮಠಪತಿ ಮತ್ತು ತನಿಖಾ ಸಹಾಯಕರಾದ ಗುರುರಾಜ ನಾಯ್ಕ ಪ್ರಕರಣದ ನೇತೃತ್ವ ವಹಿಸಿದ್ದರು.
ಶಿಕ್ಷೆಯ ಪ್ರಮಾಣ.
ಪೋಕ್ಸೋ ಕಾಯಿದೆ 2012 ರ ಶಿಕ್ಷಾರ್ಹ ಬಳಕೆ 6 ರ ಅಪರಾಧಕ್ಕಾಗಿ 20 ವರ್ಷಗಳ ಕಠಿಣ ಕಾರಾವಾಸಕ್ಕೆ ಒಳಗಾಗಲು ಮತ್ತು ರೂ 1 ಲಕ್ಷ ದಂಡವನ್ನು ಪಾವತಿಸಲು ಮತ್ತು ದಂಡವನ್ನು ಪಾವತಿಸದಿದ್ದಲ್ಲಿ ಅವರು ಒಂದು ವರ್ಷದವರೆಗೆ ಸರಳ ಜೈಲು ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC -1 ಕಾರವಾರದ ನ್ಯಾಯಾಧೀಶರಾದ ಶ್ರೀಮತಿ ಪ್ರತಿಭಾ ಬಂಡೂರಾವ್ ಕುಲಕರ್ಣಿ ಆದೇಶ ಮಾಡಿರುತ್ತಾರೆ.


Leave a Reply