ಅಂಕೋಲಾ: ವಸೂಲಿಯಾದ ಸಾಲದ ಹಣವನ್ನು ಕಳೆದುಕೊಂಡಿದ್ದರಿಂದ ಮೈಕ್ರೋ ಫೈನಾನ್ಸ್ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೋರ್ವ ಕೈ,ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು,ಸುದ್ದಿ ತಿಳಿದ ಸಹೋದ್ಯೋಗಿಗಳು ಅಸ್ವಸ್ಥನಾಗಿದ್ದ ಆತನನ್ನು ತಕ್ಷಣ ತಾಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ.

ತಾಲೂಕಿನ ಭಾರತ್ ಮೈಕ್ರೋ ಫೈನಾನ್ಸ್ ನಲ್ಲಿ ಫೀಲ್ಡ್ ಕಲೆಕ್ಷನ್ ಸಿಬ್ಬಂದಿಯಾಗಿರುವ ಹಾನಗಲ್ ಮೂಲದ ಗುರುರಾಜ್ ಸೋಮಲಿಂಗ್ ಬಂಡಿವಡ್ಡರ್ (24) ಎಂಬಾತನೆ ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದಾನೆ.

ಹೌದು……. ಭಾರತ್ ಮೈಕ್ರೋ ಫೈನಾನ್ಸ್ ನಲ್ಲಿ ಫೀಲ್ಡ್ ಕಲೆಕ್ಷನ್ ಸಿಬ್ಬಂದಿಯಾಗಿರುವ ಹಾನಗಲ್ ಮೂಲದ ಗುರುರಾಜ್ ಸೋಮಲಿಂಗ್ ಬಂಡಿವಡ್ಡರ್ ಅಂಕೋಲಾ ತಾಲೂಕಿನ ಸುಂಕಸಾಳ ಗ್ರಾಪಂ ಸುತ್ತಮುತ್ತಲಿನ ಪ್ರದೇಶದಲ್ಲಿ ಮೈಕ್ರೋ ಫೈನಾನ್ಸ್ ನೀಡಲ್ಪಟ್ಟಿದ್ದ ಸಾಲವನ್ನು ವಸೂಲಿ ಮಾದಿತಿದ್ದ ಎನ್ನಲಾಗಿದೆ.
ಆದರೆ ಶುಕ್ರವಾರ ಸಾಲ ವಸೂಲಿ ಮಾಡಿ ವಾಪಸ್ಸು ಮರುಳುತ್ತಿರುವ ಸಂದರ್ಭದಲ್ಲಿ ವಸೂಲಿಯಾದ 40 ಸಾವಿರ ಹಣ ಕಳೆದುಕೊಂಡಿರುವುದರಿಂದ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಗುರುರಾಜ ಗೆಳೆಯರಲ್ಲಿ ಹೇಳಿಕೊಂಡಿದ್ದಾನೆ.

ಮಾಹಿತಿ ತಿಳಿದ ತಕ್ಷಣ ಆಸ್ಪತ್ರೆಗೆ ತೆರಳಿದ ಸಿಪಿಐ ಚಂದ್ರಶೇಖರ್ ಮಠಪತಿ ಆರೋಗ್ಯ ವಿಚಾರಿಸಿ ಪ್ರಕರಣ ದಾಖಲಿಸಿಕೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.


Leave a Reply