ಕಾರವಾರ:ಇಂಡೋ-ಪಾಕ್ ಯುದ್ಧ ಪ್ರಾರಂಭವಾಗುತ್ತಿದ್ದಂತೆ ಮೂರು ಬಗೆಯ ಸೈನ್ಯಗಳು ತಮ್ಮ ಸಾಮರ್ಥ್ಯವನ್ನು ತೋರಿಸಿದ್ದು,ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಪತರುಗುಟ್ಟುವಂತೆ ಮಾಡಿದೆ,ಪಾಕ್ ರಾಜಧಾನಿ ಇಸ್ಲಾಮಾಬಾದ್ ಸೇರಿದಂತೆ ಪ್ರಮುಖ ನಗರಗಳಾದ ಲಾಹೋರ್, ಕರಾಚಿ,ಪೇಶಾವರ ಸೇರಿದಂತೆ ಹಲವು ಕಡೆಗಳಲ್ಲಿ ವೈಮಾನಿಕ ದಾಳಿ ನಡೆಸಿದ ಭಾರತ ಅಪಾರ ಹಾನಿಯುಂಟುಮಾಡಿದೆ.

ಅದರಂತೆಯೇ ಭಾರತೀಯ ನೌಕಾಪಡೆಯ ಐ ಎನ್ ಎಸ್ ವಿಕ್ರಾಂತ ಕರಾಚಿ ಬಂದರಿನ 16 ಕಡೆಗಳಲ್ಲಿ ದಾಳಿ ಮಾಡುವ ಮೂಲಕ ಕರಾಚಿ ಬಂದರನ್ನು ಸಂಪೂರ್ಣ ಹಾನಿಗೊಳಿಸಿದೆ ಎಂದು ವರದಿಯಾಗಿದೆ.

ಪಾಕಿಸ್ತಾನದ ಕರಾಚಿ ಗುರಿಯಾಗಿಸಿಕೊಂಡು ದಾಳಿ ಮಾಡಿದ ಐ ಎನ್ ಎಸ್ ವಿಕ್ರಾಂತ ತನ್ನ ಸಾಮರ್ಥ್ಯವನ್ನು ತೋರ್ಪಡಿಸಿದೆ. ಇದೀಗ ಕರಾಚಿಯಲ್ಲಿ ಭಾರತೀಯ ಸೇನೆಯ ಐಎನ್‌ಎಸ್ ವಿಕ್ರಾಂತ್ ಯುದ್ಧ ವಾಹಕ ನೌಕೆಯು ಮೂಲಕ ದಾಳಿ ನಡೆಸಿದ್ದು, ಮತ್ತಷ್ಟು ದಾಳಿ ನಡೆಸಲಾಗುವುದು ಎಂದು ಸೇನಾ ಮೂಲಗಳಿಂದ ತಿಳಿದುಬಂದಿದೆ.


Leave a Reply