ಬೆಂಗಳೂರು : ಎಸ್.ಜಿ.ಎಸ್. ಇಂಟರ್ ನ್ಯಾಶನಲ್ ಯೋಗ ಫೌಂಡೇಶನ್ ಕಾಲೇಜು ಮತ್ತು ಸಂಶೋಧನಾ ಕೇಂದ್ರ ಬೆಂಗಳೂರು ವತಿಯಿಂದ ಅಂಕೋಲೆಯ ಯೋಗ ಶಿಕ್ಷಕಿ ಸ್ಮಿತಾ ನರಸಿಂಹ ರಾಯಚೂರು ಇವರಿಗೆ
ಯೋಗ ಕಲಾ ಚೇತನ ಪ್ರಶಸ್ತಿ-2025 ಪ್ರಶಸ್ತಿ ನೀಡಿ ಗೌರವಿಸಿದೆ.

ಯೋಗ ಕ್ಷೇತ್ರದಲ್ಲಿನ ಸಾಧನೆಗಳು ಮತ್ತು ಸೇವೆಗಳನ್ನು ಗುರುತಿಸಿ, ಸಂಸ್ಥೆಯು 2025 ನೇ ವರ್ಷಕ್ಕೆ ಯೋಗ ಕಲಾ ಚೇತನ ಪ್ರಶಸ್ತಿಯನ್ನು ಜನವರಿ 19 ರಂದು ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಗಿದೆ.
ಚಿತ್ರದುರ್ಗದ ಬಂಜಾರಾ ಗುರುಪೀಠದ ಸರ್ದಾರ ಸೇವಾಲಾಲ್ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.


Leave a Reply