ಬೆಳಗಾವಿ: ನಂದಗಡ ಗ್ರಾಮದ ಯಾತ್ರೆಯ ಪೂರ್ವ ಸಿದ್ಧತೆಯ ಕುರಿತು ನಂದಗಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ಖಾನಾಪುರ ಕ್ಷೇತ್ರದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ.ಅಂಜಲಿತಾಯಿ ನಿಂಬಾಳ್ಕರ್ ಅಧಿಕಾರಿಗಳಿಗೆ ಹಾಗೂ ಸಮಿತಿಯವರಿಗೆ ಮಾರ್ಗದರ್ಶನ ನೀಡಿದರು.

ಈ ಮೊದಲು ಗದಗಿಯ ಸ್ಥಳಕ್ಕೆ ಭೇಟಿ ನೀಡಿ ನಂತರ ನಂದಗಡ ಗ್ರಾಮ ಪಂಚಾಯಿತಿಗೆ ತೆರಳಿ ಯಾತ್ರೆ ಸಮಿತಿ ಅಧ್ಯಕ್ಷರು ಹಾಗೂ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಕಾಮಗಾರಿ ಪರಿಶೀಲಿಸಿದರು. ನಂತರ ರಸ್ತೆಯಲ್ಲಿ ಬರುವ ವಿದ್ಯುತ್ ಕಂಬದ ಬಗ್ಗೆ ಹೆಸ್ಕಾಂಗೆ ಸೂಚನೆ ನೀಡಿ, ಯಾತ್ರೆಗೆ ಸಿದ್ಧವಾಗಿದ್ದ ರಥವನ್ನು ಪರಿಶೀಲಿಸಿದರು, ನಂತರದಲ್ಲಿ ರಸ್ತೆ ವಿವಾದದ ಕುರಿತು ಅಂಜಲಿತಾಯಿ ಸೂಚನೆಗಳನ್ನು ನೀಡಿ, ದೇವಿಯ ದೇವಸ್ಥಾನಕ್ಕೆ ತೆರಳಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ ನಂದಗಡ ಯಾತ್ರೆಯ ವಿಷಯದಲ್ಲಿ ಯಾರೊಬ್ಬರೂ ರಾಜಕೀಯ ಮಾಡಬಾರದು, ಪ್ರತಿಯೊಬ್ಬರು ದೇವರ ದರ್ಶನ ಪಡೆದು ಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.


Leave a Reply