ಅಹಮದಾಬಾದ್:ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಆಟಗಾರ ಫಿಲ್ ಸಾಲ್ಟ್ ಆರಂಭದಲ್ಲಿ ಅಬ್ಬರಿಸುವ ಸೂಚನೆಯನ್ನು ನೀಡಿದರು. ಆದರೆ ಈ ಅವಧಿಯಲ್ಲಿ ಪಂಜಾಬ್ ಬೌಲರ್‌ಗಳು ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾಡಿಕೊಂಡ ರಣ ತಂತ್ರದಂತೆ ಬೌಲ್ ಮಾಡಿದರು. ಈ ವೇಳೆ ಫಿಲ್ ಸಾಲ್ಟ್ 16 ರನ್ ಬಾರಿಸಿದ್ದಾಗ ಕೈಲ್ ಜೇಮಿಸನ್ ಅವರ ಎಸೆತದಲ್ಲಿ ಶ್ರೇಯಸ್ ಅಯ್ಯರ್‌ಗೆ ಕ್ಯಾಚ್ ನೀಡಿದರು.

ಮಯಾಂಕ್ ಅಗರ್‌ವಾಲ್ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ರಜತ್ ಪಾಟಿದಾರ್ ಸಹ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಇವರು ವಿರಾಟ್ ಕೊಹ್ಲಿ ಜೊತೆಗೂಡಿ 27 ಎಸೆತಗಳಲ್ಲಿ 40 ರನ್ ಬಾರಿಸಿದರು. ರಜತ್ ಪಾಟಿದಾರ್ 1 ಬೌಂಡರಿ, 2 ಸಿಕ್ಸರ್ ಸಹಾಯದಿಂದ 26 ರನ್ ಸಿಡಿಸಿದರು. ಮಹತ್ವದ ಪಂದ್ಯದ ಮಹತ್ವ ಅರಿತು ಬ್ಯಾಟ್ ಮಾಡಿದ ವಿರಾಟ್ ಕೊಹ್ಲಿ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡಿದರು. ಆದರೆ ಇವರಿಗೆ ಪಂಜಾಬ್ ಲೂಸ್ ಬೌಲ್‌ಗಳನ್ನು ಎಸೆಯದೆ ಕಾಟ ನೀಡಿತು. ಅಲ್ಲದೆ ಸುಲಭವಾಗಿ ರನ್ ಬಾರಿಸಲು ಅವಕಾಶ ನೀಡಲೇ ಇಲ್ಲ. ವಿರಾಟ್ 35 ರನ್ ಬಾರಿಸಿದ್ದಾಗ ಅಜ್ಮತುಲ್ಲಾ ಓಮರ್ಜಾಯಿ ಎಸೆತದಲ್ಲಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.

ಟೂರ್ನಿಯಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ಲಿಯಾಮ್ ಲಿವಿಂಗ್‌ಸ್ಟೋನ್ ಮಹತ್ವದ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದರು. ಇವರು 2 ಸಿಕ್ಸರ್ ಸಹಾಯದಿಂದ 25 ರನ್ ಸಿಡಿಸಿ ಔಟ್ ಆದರು. ಇನ್ನು ವಿಕೆಟ್ ಕೀಪರ್ ಜಿತೇಶ್ ಶರ್ಮಾ ಸಹ ರನ್ ವೇಗಕ್ಕೆ ಚುರುಕು ಮುಟಿಸುವ ಕೆಲಸವನ್ನು ಮಾಡಿದರು. ಇವರು 10 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 24 ರನ್ ಬಾರಿಸಿ ಕರ್ನಾಟಕದ ವಿಜಯಕುಮಾರ್ ವೈಶಾಕ್‌ಗೆ ವಿಕೆಟ್ ಒಪ್ಪಿಸಿದರು. ಕೆಳ ಕ್ರಮಾಂಕದಲ್ಲಿ ರೊಮಾರಿಯೋ ಶೆಫರ್ಡ್ 17 ರನ್‌ಗೆ ಆಟ ಮುಗಿಸಿದರು.


Leave a Reply