Banglore| ನುಡಿಜೇನು ಸಂದೀಪ್ ಸಾಗರ್ ಸೇರಿದಂತೆ ಉತ್ತರ ಕನ್ನಡದ ಇಬ್ಬರು ಪತ್ರಕರ್ತರಿಗೆ ಮಾಧ್ಯಮ ಅಕಾಡೆಮಿ ಗೌರವ.

Spread the love

ಬೆಂಗಳೂರು: ನುಡಿಜೇನು ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕ ಸಂದೀಪ್ ಸಾಗರ್ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಪತ್ರಕರ್ತರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹೌದು…. ಕಳೆದೆರಡು ದಶಕಗಳಿಂದ ಸಕ್ರಿಯ ಪತ್ರಿಕೋಧ್ಯಮದಲ್ಲಿ ಹಲವಾರು ಸಮಾಜಮುಖಿ ವರದಿಗಳನ್ನು ಬಿತ್ತರಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮನೆಮಾತಾಗಿರುವ ಸಂದೀಪ್ ಸಾಗರ್ ಅವರಿಗೆ
ರಾಜ್ಯ ಸರ್ಕಾರದ ಮಾಧ್ಯಮ ಅಕಾಡೆಮಿ‌ 2024ನೇ ಸಾಲಿನ ವಾರ್ಷಿಕ  ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸಂದೀಪ್ ಸಾಗರ್ ಟಿವಿ9 ಜಿಲ್ಲಾ ವರದಿಗಾರರಾಗಿ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿ, ಟಿವಿ9 ಸಂದೀಪ್ ಸಾಗರ್ ಎಂದು ಮನೆಮಾತಾಗಿದ್ದರು ತದನಂತರದಲ್ಲಿ `ನ್ಯೂಸ್ ಫಸ್ಟ್’ ವಾಹಿನಿಯ ಜಿಲ್ಲಾ ವರದಿಗಾರರಾಗಿದ್ದಾರೆ. ರಾಜಕೀಯ ವಿಶ್ಲೇಷಣೆ ಜೊತೆ ಜಿಲ್ಲೆಯ ಆಗು-ಹೋಗುಗಳ ಬಗ್ಗೆ ವರದಿ ಬಿತ್ತರಿಸಿ ಅವರು ಜನರ ಮನಗೆದ್ದಿದ್ದಾರೆ. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ದಿನಪತ್ರಿಕೆಗಳ ಸಾಲಿನಲ್ಲಿರುವ ನುಡಿಜೇನು ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿರುವ ಇವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ದೊರೆತಿರುವುದು ಉತ್ತರ ಕನ್ನಡ ಜಿಲ್ಲೆಗೆ ಹೆಮ್ಮೆಯಾಗಿದೆ.

ಅದರಂತೆಯೇ ಉತ್ತರ ಕನ್ನಡ ಜಿಲ್ಲೆಯ ಇನ್ನೋರ್ವ ಪತ್ರಕರ್ತೆ ಶಿರಸಿ ತಾಲೂಕಿನ `ಪ್ರಜಾವಾಣಿ’ ವರದಿಗಾರ್ತಿ ಸಂಧ್ಯಾ ಹೆಗಡೆಯವರಿಗೆಯೂ ಮಾಧ್ಯಮ ಅಕಾಡೆಮಿ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ.

ರಾಜ್ಯ ಸರ್ಕಾರದ ಮಾಧ್ಯಮ ಅಕಾಡೆಮಿ‌ 2024ನೇ ಸಾಲಿನ ವಾರ್ಷಿಕ  ಪ್ರಶಸ್ತಿಯನ್ನ ವಾರ್ತಾ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿ ಕೆ. ಪ್ರಭಾಕರ್, ರಾಜ್ಯ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನ್ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

Leave a Reply

Your email address will not be published. Required fields are marked *