ಬೆಂಗಳೂರು: ದೇಶಾದ್ಯಂತ ಏಡ್ಸ್,ಕ್ಯಾನ್ಸರ್,ಕಿಡ್ನಿ ವೈಫಲ್ಯ ಪ್ರಮಾಣದಲ್ಲಿ ಹೆಚ್ಚಳ ಹಿನ್ನೆಲೆ ತೆರೆದ ಹಸಿರು ಬಟಾಣಿ, ಟ್ಯಾಟೂ ಹಾಗೂ ಪ್ಲಾಸ್ಟಿಕ್ ಪೊಟ್ಟಣದ ಇಡ್ಲಿಯಿಂದ ಹಲವಾರು ರೋಗಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಬ್ಯಾನ್ ಮಾಡಲು ಸರಕಾರ ಆಲೋಚನೆ ನಡೆಸುತ್ತಿದೆ ಎನ್ನಲಾಗಿದೆ.

ಹೌದು…ಏಡ್ಸ್,ಕ್ಯಾನ್ಸರ್, ಕಿಡ್ನಿ ವೈಫಲ್ಯದಲ್ಲಿ ಗಣನೀಯ ಹೆಚ್ಚಳ ಹಿನ್ನೆಲೆಯಲ್ಲಿ ಸರಕಾರ ಮಹತ್ವದ ಕ್ರಮ ಕೈಗೊಳ್ಳಲು ತುದಿಗಾಲಿನಲ್ಲಿ ನಿಂತಿದೆ. ರಾಸಾಯನಿಕ ಇಂಕ್ ಅನ್ನು ಚರ್ಮದ ಮೇಲೆ ಬಳಸುವುದರಿಂದ ಅನೇಕಾರು ಕ್ಯಾನ್ಸರ್ ಕಾರಕ ರೋಗಗಳಿಗೆ ತುತ್ತಾಗುವ ಹಾಗೂ ಏಡ್ಸ್(HIV) ಸೋಂಕಿಗೆ ತುತ್ತಾಗಬಹುದು ಅದೇ ರೀತಿಯಲ್ಲಿ ತೆರೆದ ಹಸಿರು ಬಟಾಣಿಗೆ ಬಣ್ಣ ಲೇಪನ ಮಾಡುತ್ತಿರುವುದು ಹಾಗೆಯೇ ಪ್ಲಾಸ್ಟಿಕ ಪದರಗಳಲ್ಲಿ ಇಡ್ಲಿ ಬೇಯಿಸುತ್ತಿರುವುದು ಕ್ಯಾನ್ಸರ್ ಕಾರಕವಾಗಿದೆ ಎನ್ನುವುದನ್ನು ಆಹಾರ ಸುರಕ್ಷತೆ ಹಾಗೂ ಆರೋಗ್ಯ ಇಲಾಖೆ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದು, ಇವುಗಳನ್ನು ಬ್ಯಾನ್ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಈ ಕುರಿತು ಮಹತ್ವದ ನಿರ್ಣಯ ಕೈಗೊಳ್ಳಲಿರುವ ಕೇಂದ್ರ ಹಾಗೂ ರಾಜ್ಯ ಸರಕಾರ ಟ್ಯಾಟೂ ಪ್ರಿಯರಿಗೆ ಶಾಕ್ ನೀಡಲಿದ್ದಾರೆ ಎನ್ನಲಾಗಿದೆ.


Leave a Reply