ಪಕ್ಷಭೇದ ಮರೆತು ಯೋಧರಿಗೆ ಗೌರವ ಸಮರ್ಪಣೆ; ಸಚಿವ ಮಂಕಾಳು ವೈದ್ಯರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ!

Spread the love

ಅಂಕೋಲಾ:ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯ (CISF) ಸೈಕ್ಲೋಥಾನ್ ಜಾಥಾ ಹಮ್ಮಿಕೊಂಡಿದ್ದ ಯೋಧರಿಗೆ ಸ್ವಾಗತಿಸಲು ಮಾಜಿ ಶಾಸಕಿ ರೂಪಾಲಿ ನಾಯ್ಕ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಪಕ್ಷಭೇದ ಮರೆತು ಆಗಮಿಸಿದ ಉಸ್ತುವಾರಿ ಸಚಿವ ಮಂಕಾಳು ವೈದ್ಯರ ಕಾರ್ಯಕ್ಕೆ ಜಿಲ್ಲೆಯಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ.

ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯ (CISF) ಸೈಕ್ಲೋಥಾನ್ -2025 ರ್ಯಾಲಿಯು ಗೋವಾದಿಂದ ಉತ್ತರ ಕನ್ನಡ ಜಿಲ್ಲೆಗೆ ಅಗಮಿಸಿದ ಹಿನ್ನೆಲೆಯಲ್ಲಿ ಮಾಜಿ ಶಾಸಕಿ ರೂಪಾಲಿ ನಾಯ್ಕ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ತಾಲೂಕಿನ ಅವರ್ಸಾ ಕಾತ್ಯಾಯನಿ ದೇವಸ್ಥಾನದಲ್ಲಿ ಅದ್ದೂರಿ ಸ್ವಾಗತಕ್ಕೆ ತಯಾರಿ ಮಾಡಿದ್ದರು, ಅದರಂತೆಯೇ ರ್ಯಾಲಿಯಲ್ಲಿ ಪಾಲ್ಗೊಂಡ ಯೋಧರಿಗೆ ಆರತಿ ಬೆಳಗಿ ವಿಜಯತಿಲಕವಿಟ್ಟು ಶಾಸ್ತ್ರೋಕ್ತವಾಗಿ ಬರಮಾಡಿಕೊಂಡಿದ್ದರು.

ಮಾಜಾಳಿಯಲ್ಲಿ ನಡೆದ ಸ್ವಾಗತ ಕಾರ್ಯಕ್ರಮದಲ್ಲಿ ಉಪಸ್ಥಿತರಿರಬೇಕಾಗಿದ್ದ ಸಚಿವರು ಅಲ್ಲಿ ತೆರಳಲು ವಿಳಂಬವಾಗಿದ್ದರಿಂದ,ಅವರ್ಸಾ ಕಾತ್ಯಾಯನಿ ದೇಗುಲದಲ್ಲಿ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ನೆರವೇರುತಿದ್ದ ಕಾರ್ಯಕ್ರಮಕ್ಕೆ ತೆರಳಿ ಯೋಧರಿಗೆ ಪುಷ್ಪಾಗುಚ್ಛ ನೀಡಿ ಸೈಕ್ಲೋಥಾನ್ ಗೆ ಶುಭಾಶಯ ಕೋರಿದರು.

ನಂತರದಲ್ಲಿ ಸಿಐಎಸ್ಎಫ್ ಯೋಧರು ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರೊಂದಿಗೆ ಉಪಹಾರ ಸೇವಿಸಿ ಕುಶಲೋಪರಿ ನಡೆಸಿದರು.. ನಂತರದಲ್ಲಿ ಸಿಐಎಸ್ಎಫ್ ಅಧಿಕಾರಿಗಳು ಸಚಿವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಬಿಜೆಪಿ ಕಾರ್ಯಕರ್ತರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡ ಸಚಿವ!

ಸಚಿವರ ಆಗಮನದಿಂದ ಸಂತೋಷಗೊಂಡ ಮಾಜಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಬಿಜೆಪಿ ಕಾರ್ಯಕರ್ತರು ಸಚಿವರಿಗೆ ಉಪಹಾರ ನೀಡಿದರು,ಪಕ್ಷ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೋಧರಿಗೆ ಗೌರವ ಸೂಚಿಸಲು ಆಗಮಿಸಿದ ಸಚಿವರ ಕಾರ್ಯಕ್ಕೆ ಬಿಜೆಪಿಗರು ಹರ್ಷೋದ್ಗಾರವ್ಯಕ್ತಪಡಿಸಿದ್ದು,ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು.

ಉಪಹಾರಕ್ಕೆ ‘ಕ್ಯೂ’ ನಲ್ಲಿ ನಿಂತ ಸಿಂಪಲ್ ಸಚಿವ!

ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯ (CISF) ಸೈಕ್ಲೋಥಾನ್ ಗೆ ಆಗಮಿಸಿದ ಯೋಧರಿಗೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಉಪಹಾರದ ವ್ಯವಸ್ಥೆ ಕಲ್ಪಿಸಿದ್ದರು. ಇದೆ ವೇಳೆಯಲ್ಲಿ ಸ್ವಾಗತಕೋರಲು ಆಗಮಿಸಿದ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಯೋಧರ ಸಾಲಿನಲ್ಲಿಯೇ ನಿಂತು ಉಪಹಾರ ಸೇವಿಸಿದರು. ಓರ್ವ ಸಚಿವ ಇಷ್ಟೊಂದು ಸರಳವಾಗಿ ಕಾರ್ಯಕ್ರಮದಲ್ಲಿ ಬಾಗಿಯಾಗಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸಂದರ್ಭದಲ್ಲಿ ಅವರ್ಸಾ ಗ್ರಾಪಂ ಅಧ್ಯಕ್ಷೆ ಸವಿತಾ ಆಗೇರ,ಹಟ್ಟಿಕೆರಿ ಗ್ರಾಪಂ ಅಧ್ಯಕ್ಷೆ ನಿಶಾ ನಾಯ್ಕ ಪ್ರಮುಖರಾದ ಸಾಯಿಕಿರಣ ಶೆಟಿಯಾ,ಸಂಜಯ ನಾಯ್ಕ ಭಾವಿಕೇರಿ,ಜಗದೀಶ ನಾಯಕ ಮೊಘಟಾ,ಶ್ರೀಧರ್ ನಾಯ್ಕ,ಮಂಜುನಾಥ್ ಟಾಕೀಕರ್,ಆಶಾ ನಾಯ್ಕ,ರಾಘವೆಂದ್ರ ನಾಯ್ಕ,ನಿಲೇಶ್ ನಾಯ್ಕ,ಮಂಕಾಳು ಗೌಡ,ಸುಬಾಶ್ ನಾಯ್ಕ,ರಾಘವೇಂದ್ರ ನಾಯ್ಕ ಕನಸೆಗದ್ದೆ,ನಾಗರಾಜ ನಾಯ್ಕ ಸೇರಿದಂತೆ,ಊರ ನಾಗರಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *