ಮುರ್ಡೇಶ್ವರ ತಲುಪಿದ CISF ಸೈಕ್ಲೋಥಾನ್ 2025; ಹೂಮಳೆ ಸುರಿಸಿ ಯೋಧರಿಗೆ ಸಚಿವರ ಪುತ್ರಿಯಿಂದ ಅದ್ದೂರಿ ಸ್ವಾಗತ!

Spread the love

ಭಟ್ಕಳ: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಯೋಧರು ಸೈಕ್ಲೋಥಾನ್ 2025 ಎನ್ನುವ ಹೆಸರಿನಲ್ಲಿ ಗುಜರಾತ್ ನಿಂದ ಕನ್ಯಾಕುಮಾರಿಯವರೆಗೆ ಸಿಐಎಸ್ಎಫ್ ಸಿಬ್ಬಂದಿ ರ್‍ಯಾಲಿ ನಡೆಸುತ್ತಿದ್ದು, ಮಂಗಳವಾರದಂದು ಸಂಜೆ ಪಂಚ ಕ್ಷೇತ್ರದಲ್ಲಿ ಒಂದಾದ ಮುರುಡೇಶ್ವರಕ್ಕೆ ಬಂದು ತಲುಪಿದ್ದು, ರಾಜ್ಯ ಮೀನುಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಪುತ್ರಿ ಬೀನಾ ವೈದ್ಯ ಅವರು CISF ಯೋಧರನ್ನು ಆದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಂಡರು.

ಹೌದು…ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಯೋಧರು ಸದ್ಯ ದೇಶದ ಕರಾವಳಿ ಉದ್ದಕ್ಕೂ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಇಳಿದಿದ್ದಾರೆ. ಸೈಕ್ಲೋಥಾನ್ 2025 ಎನ್ನುವ ಹೆಸರಿನಲ್ಲಿ ಗುಜರಾತ್ ನಿಂದ ಕನ್ಯಾಕುಮಾರಿಯವರೆಗೆ ಸಿಐಎಸ್ಎಫ್ ಸಿಬ್ಬಂದಿ ರ್‍ಯಾಲಿ ಕೈಗೊಂಡಿದ್ದು ಸೋಮವಾರದಂದು ಗೋವಾ ಮೂಲಕ ಕರ್ನಾಟಕ ಗಡಿಭಾಗ ಪ್ರವೇಶಿಸಿದ್ದರು,ಮಂಗಳವಾರ ಬೆಳಿಗ್ಗೆ ಕಾರವಾರಕ್ಕೆ ಆಗಮಿಸಿತ್ತು ನಂತರ ಅಂಕೋಲಾ ತಾಲೂಕಿನ ಅವರ್ಸಾದಲ್ಲಿ ಸಚಿವ ಮಂಕಾಳು ವೈದ್ಯ CISF ಯೋಧರಿಗೆ ಸ್ವಾಗತಿಸಿ,ಶುಭಾಶಯ ಕೋರಿದ್ದರು.

ನಂತರದಲ್ಲಿ ಮಂಗಳವಾರ ಸಂಜೆ ಮುರುಡೇಶ್ವರಕ್ಕೆ ಬಂದು ತಲುಪುತ್ತಿದ್ದಂತೆ
ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಮಗಳು ದಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕಿ ಬೀನಾ ವೈದ್ಯ ಯೋಧರನ್ನು ಅದ್ದೂರಿಯಾಗಿ ಬರಮಾಡಿಕೊಂಡರು.

ಯೋಧರನ್ನು ಮುರುಡೇಶ್ವರದ ನಾಕಾ ಬಳಿಯ ಕರಾವಳಿ ಒಡೆತನದ ಪ್ರಾರ್ಥನಾ ಹೋಟೆಲ ಬಳಿ ಹೂ ಮಳೆ ಸುರಿಯುವ ಮೂಲಕ ಅವರನ್ನು ಚಂಡೆ ವಾದ್ಯದ ಮೂಲಕ ಬರಮಾಡಿಕೊಂಡರು.‌ ನಂತರ ಸಿ.ಐ.ಎಸ್.ಎಫ್ ಯೋಧರೊಂದಿಗೆ ಹೆಜ್ಜೆ ಹಾಕಿದ ಸಚಿವರ ಪುತ್ರಿ ಬೀನಾ ವೈದ್ಯ ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರ ಪುತ್ರಿ ಬೀನಾ ವೈದ್ಯ ‘ ಸಿ.ಐ.ಎಸ್.ಎಫ್. ಯೋಧರ ಸೈಕ್ಲೋಥಾನ್ 2025 ಇಂದು ಬೆಳಿಗ್ಗೆ ಹೊನ್ನಾವರದಲ್ಲಿ ಸ್ವಾಗತಿಸಿ, ಸಂಜೆ ನಮ್ಮ ಮುರುಡೇಶ್ವರಕ್ಕೆ ಆಗಮಿಸಿದ್ದು ನಮ್ಮ ಹೋಟೆಲನಲ್ಲಿ ತಂಗಲಿದ್ದಾರೆ. ಈ ಹಿನ್ನೆಲೆ ಅವರನ್ನು ಸ್ವಾಗತಿಸುವ ಪುಣ್ಯ ಕೆಲಸ ನಮಗೆ ಸಿಕ್ಕಿದೆ. ಅವರು ಇಷ್ಟು ದಿವಸ ನಮ್ಮನ್ನು ಕಾಯುತ್ತಿದ್ದ ಈಗ ಇವರನ್ನು ಸತ್ಕರಿಸುವ ಕಾರ್ಯ ನಮಗೆ ಲಭಿಸಿರುವುದಕ್ಕೆ ನಮಗೆ ಸಂತಸವಾಗಿದೆ. ಇನ್ನು ಅವರ ಮುಂದಿನ ರ್ಯಾಲಿಗೆ ನಮ್ಮ ಸರಕಾರದಿಂದ, ಸಚಿವರಿಂದ ಸಹಕಾರ ನೀಡಲಿದ್ದೇವೆ ಎಂದರು.

ಸೈಕ್ಲೋಥಾನ್ 2025 ರ ಕಾಂಟಿನೆಂಟ್
ಕಮಾಂಡರ್ ವಿಬೂಸಿಂಗ್ ಪ್ರತಿಹಾರ
ಮಾತನಾಡಿ ‘ಸೈಕ್ಲೋಥಾನ್ 2025 ನ್ನು ಮಾರ್ಚ್ 7 ರಂದು ಗುಜರಾತಿನಲ್ಲಿ ಆರಂಭಿಸಿದ್ದು ಇದರ ಉದ್ದೇಶ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ರಾಷ್ಟ್ರೀಯ ಭದ್ರತೆ ಬಗ್ಗೆ ಜಾಗೃತಿ ಮೂಡಿಸುವುದು, ಕಳ್ಳಸಾಗಣೆ, ವಿಶೇಷವಾಗಿ ಮಾದಕವಸ್ತುಗಳು, ಶಸ್ತ್ರಾಸ್ತ್ರಗಳ ಮತ್ತು ಸ್ಫೋಟಕಗಳ ಅಪಾಯದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಸ್ಥಳೀಯ ಸಮುದಾಯಗಳು ಮತ್ತು ಭದ್ರತಾ ಸಂಸ್ಥೆಗಳು, ಸಿಐಎಸ್‌ಎಫ್ ನಡುವೆ ಉತ್ತಮ ಸಂಬಂಧ ಮೂಡಿಸಲು ಈ ರ್‍ಯಾಲಿ ಹಮ್ಮಿಕೊಂಡಿದ್ದೇವೆ. ಕರ್ನಾಟಕಕ್ಕೆ ಆಗಮಿಸಿದ ವೇಳೆ ಇಲ್ಲಿನ ಜನರಿಂದ ಉತ್ತಮವಾಗಿ ಸ್ಪಂದನೆ ಮತ್ತು ಪ್ರೀತಿ ಸಿಕ್ಕಿದೆ.  ಕಾರವಾರದಿಂದ ಅಂಕೋಲಾ, ಹೊನ್ನಾವರ, ಮುರುಡೇಶ್ವರಕ್ಕೆ ಆಗಮಿಸಿದ ವೇಳೆ ಸಚಿವ ಮಂಕಾಳ ವೈದ್ಯ ಹಾಗೂ ಅವರ ಪುತ್ರಿ ಬೀನಾ ವೈದ್ಯ ಅವರು ನಮಗೆ ಉತ್ತಮ ಸಹಕಾರ ನೀಡಿದ್ದು ನಮಗೆ ಸಂತೋಷವಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾವಳ್ಳಿ ಪಂಚಾಯತ ಅಧ್ಯಕ್ಷೆ ನಯನಾ ನಾಯ್ಕ, ಪ್ರಾರ್ಥನಾ ಹೋಟೆಲ್ ಮಾಲೀಕ ಈಶ್ವರ ನಾಯ್ಕ, ಅವರ ಪತ್ನಿ ನಿರ್ಮಲ ನಾಯ್ಕ,CISF ಡೆಪುಟಿ ಕಮಾಂಡೆಂಟ್ ರಾಜೇಂದ್ರ ಪ್ರಸಾದ್ ಪಾಟಕ್, ಅಸಿಸ್ಟೆಂಟ್ ಕಮಾಂಡೆಂಟ್ ದುರ್ಗೇಶ ಕಲಾಲ್, ಗ್ರೂಪ್ ಕಮಾಂಡೆಂಟ್ ಅನುಪ್ ಸಿನ್ಹಾ ಸೇರಿದಂತೆ 125 ಕ್ಕೂ ಹೆಚ್ಚು ಸೈಕ್ಲಿಂಗ್ CISF ಕಮಾಂಡೆಂಟ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *