ಬೆಂಗಳೂರು: ರಾಜ್ಯದ ಹೆಡ್ ಕಾನ್‌ಸ್ಟೆಬಲ್‌ಗಳು, ಕಾನ್‌ಸ್ಟೆಬಲ್‌ಗಳು ಧರಿಸುತ್ತಿರುವ ಸ್ಲೋಚ್ ಹ್ಯಾಟ್ (ಟೋಪಿ) ಅನ್ನು ಬದಲಾವಣೆ ಮಾಡಲು ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದೆ.
ಈ ಸಂಬಂಧ ಏಪ್ರಿಲ್ 4ರಂದು ಸಭೆ ನಡೆಸಿ, ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಸೂಚಿಸಿದ್ದಾರೆ.

ಕರ್ನಾಟಕ ಪೊಲೀಸರ ತಲೆ ಮೇಲೆ ಕಾಣುವ ಬ್ರಿಟಿಷರ ಕಾಲದ ವೃತ್ತಾಕಾರದ ದೊಡ್ಡ ಟೋಪಿ ಮಾಯವಾಗಿ ಆ ಜಾಗದಲ್ಲಿ ಇನ್ನು ಮುಂದೆ ಅಂದವಾಗಿ ಕಾಣುವ ಸ್ಮಾರ್ಟ್ ಟೋಪಿ ಅಲಂಕರಿಸುವ ಕಾಲ ಸನ್ನಿಹಿತವಾಗಿದೆ. ಈಗಿರುವ ಸ್ಲೋಚ್ (ವೃತ್ತಾಕಾರ) ಟೋಪಿಯನ್ನು ಬದಲಾಯಿಸಿ ಪೀಕ್ (ಎತ್ತರದ) ಟೋಪಿ ವಿತರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹೆಜ್ಜೆಯಿಟ್ಟಿದ್ದು, ಇದು ಜಾರಿಯಾದರೆ ಪೊಲೀಸರ ಬಹುವರ್ಷಗಳ ಬೇಡಿಕೆ ಈಡೇರಲಿದೆ.
ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಅಲ್ಲಿನ ಪೊಲೀಸ್ ಹೆಡ್ ಕಾನ್ಸ್ಟೆಬಲ್ ಹಾಗೂ ಕಾನ್ಸ್ಟೆಬಲ್ಗಳಿಗೆ ಪೀಕ್ ಕ್ಯಾಪ್ಗಳನ್ನು ಕೊಡಲಾಗಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಪೀಕ್ ಟೋಪಿಗಳನ್ನು ಕೊಡುವ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಡಿಜಿ-ಐಜಿಪಿ ಡಾ.ಅಲೋಕ್ ಮೋಹನ್ ಆದೇಶಿಸಿದ್ದಾರೆ. ಹೀಗಾಗಿ ಪೀಕ್ ಟೋಪಿ ವಿತರಣೆ ಕುರಿತು ರ್ಚಚಿಸಲು ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್ಸಾರ್ಪಿ) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಏ.4ಕ್ಕೆ ಕಿಟ್ ನಿರ್ದಿಷ್ಟತಾ ಸಮಿತಿ ಸಭೆಯನ್ನು ಕರೆಯಲಾಗಿದೆ.

ಬೆಂಗಳೂರಿನ ನೃಪತುಂಗ ರಸ್ತೆಯ ಲ್ಲಿರುವ ಡಿಜಿಪಿ ಪ್ರಧಾನ ಕಚೇರಿಯಲ್ಲಿ ಏ.4ರಂದು 4 ಗಂಟೆಗೆ ಸಭೆ ನಡೆಯಲಿದೆ. ಕೆಎಸ್ಸಾರ್ಪಿ ಎಡಿಜಿಪಿ ಅಧ್ಯಕ್ಷತೆ ವಹಿಸಲಿದ್ದು, ಪ್ರಧಾನ ಕಚೇರಿ ಐಜಿಪಿ, ಬೆಂಗಳೂರು ಉತ್ತರ ವಿಭಾಗ, ಆಗ್ನೇಯ ವಿಭಾಗ ಹಾಗೂ ಸಿಎಆರ್ ಡಿಸಿಪಿಗಳು ಇರಲಿದ್ದಾರೆ. ಜತೆಗೆ ಬೆಂಗಳೂರು ನಗರ ಜಿಲ್ಲೆ ಎಸ್ಪಿ, ಕೆಎಸ್ಸಾರ್ಪಿ ಕಮಾಂಡೆಂಟ್ ಸೇರಿ ಇನ್ನಿತರ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಕೇಂದ್ರ ಸರ್ಕಾರ ಒನ್ ನೇಶನ್ ಒನ್ ಯುನಿಫಾಮ್ರ್ ಕಲ್ಪನೆ ಹೊಂದಿದೆ. ಬ್ರಿಟಿಷರು ಮಾಡಿ ಹೋದ ಐಪಿಸಿ, ಸಿಆರ್ಪಿಸಿ ಸೆಕ್ಷನ್ಗಳು ಬದಲಾಗಿವೆ. ಆದರೆ, ಅವರು ಬಿಟ್ಟು ಹೋದ ಸಮವಸ್ತ್ರಗಳು ಕೆಲ ರಾಜ್ಯಗಳಲ್ಲಿ ಹಾಗೆಯೇ ಉಳಿದಿವೆ. ಬೇರೆ ರಾಜ್ಯಗಳಂತೆ ನಮ್ಮಲ್ಲೂ ಈಗ ಪೀಕ್ ಟೋಪಿ ಪದ್ಧತಿ ಜಾರಿಗೊಳಿಸುವ ಭರವಸೆ ಮೂಡಿದೆ.
| ಹೆಡ್ ಕಾನ್ಸ್ಟೆಬಲ್ ಉತ್ತರ ಕನ್ನಡ


Leave a Reply