ಅಂಕೋಲಾ: ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘ (ರಿ)ಅಂಕೋಲಾ ವತಿಯಿಂದ ತಾಲೂಕಿನ ಜೈಹಿಂದ್ ಮೈದಾನದಲ್ಲಿ ಏಪ್ರಿಲ್ 05 ಶನಿವಾರ ಹಾಗೂ 06 ಭಾನುವಾರ ನಾಮಧಾರಿ ಸಾಮಾಜದ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿ ‘ನಾಮಧಾರಿ ಕಪ್ -2025’ ನಡೆಯಲಿದೆ ಎಂದು ಕರ್ನಾಟಕ ಆರ್ಯ,ಈಡಿಗ, ನಾಮಧಾರಿ ಸಂಘದ ತಾಲೂಕಾಧ್ಯಕ್ಷ ಮಹಾಬಲೇಶ್ವರ ಪಿ ನಾಯ್ಕ ಹೇಳಿದರು.

ಅವರು ತಾಲೂಕಿನ ಹೋಟೆಲ್ ಒಂದರಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ನಾಮಧಾರಿ ಸಮಾಜ ಬಾಂಧವರಿಗಾಗಿ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿ ಅಯೋಜಿಸಲಾಗಿದ್ದು,ಅಂಕೋಲಾ,ಕಾರವಾರ ಕ್ಷೇತ್ರದ ಶಾಸಕ ಸತೀಶ್ ಸೈಲ್ ಉದ್ಗಾಟಿಸಲಿದ್ದು,ಕ್ರೀಡಾಂಗಣವನ್ನು ಪುರಸಭೆ ಅಧ್ಯಕ್ಷ ಸೂರಜ್ ಎಂ ನಾಯ್ಕ ಉದ್ಗಾಟಿಸಲಿದ್ದು,ಪಂದ್ಯಾವಳಿಗೆ ಎಲ್ಲರ ಸಹಕಾರ ಕೋರಿದರು.

ಹಾಗೆಯೇ ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಎಲ್ ನಾಯ್ಕ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು,ಮುಖ್ಯ ಅತಿಥಿಗಳಾಗಿ ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ,ಭಟ್ಕಳ ಕ್ಷೇತ್ರದ ಮಾಜಿ ಶಾಸಕ ಸುನೀಲ್ ಬಿ ನಾಯ್ಕ ಆಗಮಿಸಲಿದ್ದು,ಬಹುಮಾನ ವಿತರಕರಾಗಿ ಯಲ್ಲಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನರ್ಮದಾ ಆರ್ ನಾಯ್ಕ ಆಗಮಿಸಲಿದ್ದಾರೆ.ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎನ್ನಲಾಗಿದೆ. ಕಾರ್ಯಕ್ರಮದಲ್ಲಿ ಜಿಲ್ಲೆಯ ಸಮಾಜ ಬಾಂಧವರು ಉಪಸ್ಥಿತರಿದ್ದು ಕಾರ್ಯಕ್ರಮದ ಮೆರಗನ್ನು ಇನ್ನಷ್ಟು ಹೆಚ್ಚಿಸಬೇಕು ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘದ ಪ್ರದಾನ ಕಾರ್ಯದರ್ಶಿ ಉಪೇಂದ್ರ ನಾಯ್ಕ,ಉಪಾಧ್ಯಕ್ಷರಾದ ಮಂಜುನಾಥ್ ಡಿ ನಾಯ್ಕ,ರವಿ ಆರ್ ನಾಯ್ಕ ಸದಸ್ಯರಾದ ಮೂರ್ಕುಂಡಿ ಪಿ ನಾಯ್ಕ,ಸತೀಶ್ ಎಂ ನಾಯ್ಕ(ವಿಠ್ಠಲ್),ಏಕನಾಥ ಎಸ್ ನಾಯ್ಕ,ಸಂಜಯ ನಾಯ್ಕ ಕಾಕರಮಠ,ಕೃಷ್ಣ ನಾಯ್ಕ ಅಗಸೂರು,ನಾಗರಾಜ್ ಎಚ್ ನಾಯ್ಕ,ಮಂಜುನಾಥ್ ವಿ ನಾಯ್ಕ,ಕುಮಾರ್ ಜಿ ನಾಯ್ಕ,ಗಣೇಶ ಆರ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.


Leave a Reply