ಗ್ರಾಮದೇವಿ ಶಾಂತಾದುರ್ಗೆ ದೇಗುಲಕ್ಕೆ ತಾಮ್ರ ಮೇಲ್ಛಾವಣಿ ಹೊದಿಕೆ ಹಿನ್ನೆಲೆ ಸಂಪನ್ಮೂಲ ಕ್ರೂಡಿಕರಣಕ್ಕೆ ಭಕ್ತರಲ್ಲಿ ಮನವಿ!

Spread the love

ಅಂಕೋಲಾ: ಭೂಮ್ತಾಯಿ, ಶಕ್ತಿ ದೇವತೆ, ಗ್ರಾಮದೇವತೆ,ಅಮ್ಮನವರು ಎಂದೆಲ್ಲ ಕರೆಯಿಸಿಕೊಳ್ಳುವ ಅಂಕೋಲೆಯೊಡತಿ ಶ್ರೀಶಾಂತಾದುರ್ಗಾ ದೇವಿಯ ಸಂಸ್ಥಾನವು ಜೀರ್ಣಾವ್ಯವಸ್ಥೆಗೆ ತಲುಪಿದ್ದು, ಹಳೆಯ ಹಂಚಿನ ಮೇಲ್ಛಾವಣಿಯನ್ನು ತೆರವುಗೊಳಿಸಿ ಸಂಪೂರ್ಣ ತಾಮ್ರದ ಮೇಲ್ಛಾವಣಿ ಅಳವಡಿಸಲು ಆಡಳಿತ ಮಂಡಳಿ ನಿರ್ಧರಿಸಿದ್ದು, ಭಕ್ತರಿಂದ ಸಂಪನ್ಮೂಲ ಕ್ರೂಡಿಕರಣಕ್ಕೆ ಮನವಿ ಪತ್ರವನ್ನು ತಯಾರಿಸಿದ್ದು,ಅದನ್ನು ದೇವಾಲಯದ ಆವರಣದಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ನ್ಯಾಯವಾದಿ ಸುಭಾಷ ನಾರ್ವೇಕರ್ ಮಾತನಾಡಿ ಶ್ರೀಶಾಂತಾದುರ್ಗಾ ದೇವಿಯ ಗೋಪುರವನ್ನು 1928 ರಲ್ಲಿ ನಿರ್ಮಾಣ ಮಾಡಲಾಗಿದ್ದು, ಹಂಚಿನ  ಮೇಲ್ಛಾವಣಿ ಒಳಭಾಗದ ಕಟ್ಟಿಗೆ ಶಿಖರ ಜಿರ್ಣಾವಸ್ಥೆಗೆ ತಲುಪುತ್ತ ಬಂದ ಕಾರಣ ಹಂಚಿನ ಮೇಲ್ಛಾವಣಿ ತೆಗೆದು ಸಂಪೂರ್ಣ ತಾಮ್ರದ ಮೇಲ್ಛಾವಣಿ ಹೊದಿಸಲು ಸಾರ್ವಜನಿಕ ಸಭೆಯಲ್ಲಿ ಒಮ್ಮತದ ನಿರ್ದಾರ ಕೈಗೊಂಡು ಆಡಳಿತ ಮಂಡಳಿ ನಿರ್ಧರಿಸಿದ್ದು ಪ್ರಸಾದ ಮೂಲಕ ಶಾಂತಾದುರ್ಗೆಯನ್ನು ಕೇಳಿಕೊಂಡಾಗ ದೇವಿಯಿಂದ ಪ್ರಸಾದ ರೂಪದಲ್ಲಿ ಅಪ್ಪಣೆ ನೀಡಿದ್ದಾಳೆ.
ದೇವಾಲಯದ ಜೀರ್ಣೋದ್ಧಾರದ ಉದ್ದೇಶದಿಂದ ಸಮಿತಿಯೊಂದನ್ನು ರಚಿಸಿ ಕ್ರಿಯಾ ಯೋಜನೆ ಮತ್ತು ನೀಲ ನಕ್ಷೆ ತಯಾರಿಸಲಾಗಿದ್ದು ಈಗಿರುವ ಗೋಪುರದ ಛಾವಣಿ, ರಂಗಮಂಟಪ, ಯಜ್ಞಮಂಟಪ,ಪ್ರದಕ್ಷಿಣೆ ಪಥದ ಮೇಲಿರುವ ಛಾವಣಿ ಸೇರಿದಂತೆ ಸಂಪೂರ್ಣ ದೇವಾಲಯದ ಹಳೆಯ ಶಿಖರವನ್ನು ತೆಗೆದು, ಹೊಸದಾಗಿ ಕಟ್ಟಿಗೆಯಿಂದ ಶಿಖರವನ್ನು ನಿರ್ಮಾಣ ಮಾಡಿ ಸಂಪೂರ್ಣ ದೇವಾಲಯದ ಮೇಲ್ಛಾವಣಿಗೆ ತಾಮ್ರದ ಹೊದಿಕೆ ಹಾಕಲಾಗುವುದು ಈಗಾಗಲೇ ಈ ಮಹತ್ಕಾರ್ಯದತಯಾರಿ ನಡೆದಿದೆ ಎಂದರು.


ಜೀರ್ಣೋದ್ಧಾರ ಕಾರ್ಯಕ್ಕೆ ಸುಮಾರು 2.50 ಕೋಟಿ ಖರ್ಚು ತಗಲುವ ನಿರೀಕ್ಷೆ ಇದ್ದು ದೇವಿಯ ಭಕ್ತರು ಧನ ಸಹಾಯ ನೀಡುವ ಮೂಲಕ ಸಹಕರಿಸಬೇಕು ಎಂದ ಅವರು ಧಾನಿಗಳ ಅನುಕೂಲಕ್ಕಾಗಿ  ದೇವಾಲಯದ ಆವರಣದಲ್ಲಿ ನಿಧಿ ಸಂಗ್ರಹಣಾ ಸೇವಾ ಕೌಂಟರ್ ತೆರೆಯಲಾಗಿದೆ ಅಲ್ಲಿ ಹಣವನ್ನು ನೀಡಬಹುದಾಗಿದೆ, ಭಕ್ತರು ನೀಡುವ ಕಾಣಿಕೆ ಸ್ವೀಕರಿಸಲು ಬ್ಯಾಂಕ್ ಖಾತೆ ತೆರೆಯಲಾಗಿದ್ದು ಶಿರಸಿ ಅರ್ಬನ್ ಸಹಕಾರಿ ಬ್ಯಾಂಕಿನಲ್ಲಿ ತೆರೆಯಲಾಗಿರುವ ಗ್ರಾಮದೇವಿ ಶ್ರೀಶಾಂತಾದುರ್ಗಾ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಸಮಿತಿ ಖಾತೆ ಸಂಖ್ಯೆ 012100100008647 IFSC code
IDIBOCBKASU ಗೆ ಸಂದಾಯ ಮಾಡಬಹುದು ಇಲ್ಲವೇ 7975659455
ಆನ್ ಲೈನ್ ಹಣ ಪಾವತಿಸಿ ತಮ್ಮ ದೇಣಿಗೆ ನೀಡಬಹುದಾಗಿದೆ ಎಂದರು.

ದೇವಾಲಯದ ಟ್ರಸ್ಟಿ ಎನ್.ಬಿ.ಮಹಾಲೆ ಮಾತನಾಡಿ ಶ್ರೀಶಾಂತಾದುರ್ಗಾ ದೇವಿಯ ಭಕ್ತರು ದೇಶ ವಿದೇಶಗಳಲ್ಲಿ ನೆಲೆಸಿದ್ದು ಗ್ರಾಮ ದೇವಿಯ ಮಂದಿರದ ಜೀರ್ಣೋದ್ಧಾರ ಕಾರ್ಯಕ್ಕೆ ಸಹಾಯ ಸಹಕಾರ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ದೇವಾಲಯದ ಮೊಕ್ತೆಸರ ಅಶೋಕ ಮಹಾಲೆ, ಪ್ರಮುಖರುಗಳಾದ ಶಿವಾನಂದ ನಾಯ್ಕ, ನಾಗೇಶ ನಾಯ್ಕ ಆಚಾ, ಸಂಜಯ ಅರುಂದೇಕರ್, ರಾಜು ನಾಯ್ಕ, ಸುರೇಶ ವೆರ್ಣೇಕರ್, ವಿಜಯಕುಮಾರ್ ನಾಯ್ಕ, ಸುನೀಲ ವೆರ್ಣೇಕರ್ ಸೇರಿದಂತೆ ಜೀರ್ಣೋದ್ಧಾರ ಸಮಿತಿ ಸದಸ್ಯರು, ಸ್ವಯಂ ಸೇವಕರು ಉಪಸ್ಥಿತರಿದ್ದರು.
ನ್ಯಾಯವಾದಿ ಆಕಾಶ ನಾರ್ವೇಕರ್ ಸ್ವಾಗತಿಸಿದರು, ಸುರೇಶ ವೆರ್ಣೇಕರ್ ವಂದಿಸಿದರು.

Leave a Reply

Your email address will not be published. Required fields are marked *