ಹೊನ್ನಾವರ: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಇರ್ವರು ಮೃತಪಟ್ಟ ಘಟನೆ ತಾಲೂಕಿನ ಉಪ್ಪೊಣಿಯಲ್ಲಿ ಸಂಭವಿಸಿದೆ.

ಅಪಘಾತದಲ್ಲಿ ಕಾರಿನಲ್ಲಿದ್ದ ಇರ್ವರು ಮೃತಪಟ್ಟಿದ್ದು, ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನೆರೆ ಜಿಲ್ಲೆಗೆ ಕರೆದೊಯ್ಯಲಾಗಿದೆ. ಹತ್ತಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯವಾದ ಘಟನೆ ಸಂಭವಿಸಿದೆ.
ಶಿರಸಿ ರಸ್ತೆ ಬಂದ್ ಆದ ಪರಿಣಾಮ ಹೊನ್ನಾವರದಿಂದ ಮಾವಿನಗುಂಡಿ ಮಾರ್ಗವಾಗಿ ಶಿರಸಿ ಹುಬ್ಬಳ್ಳಿ ತೆರಳುತ್ತಿದ್ದ ಕೆಎಸ್.ಆರ್.ಟಿಸಿ ಬಸ್ ಹಾಗೂ ಬೆಂಗಳೂರಿನಿಂದ ಮುರುಡೇಶ್ವರಕ್ಕೆ ತೆರಳುತಿದ್ದ ಬೆಂಗಳೂರು ಮೂಲದ ಸ್ಕಾರ್ಪಿಯೋ ವಾಹನದ ನಡುವೆ ಡಿಕ್ಕಿಯಾದ ಪರಿಣಾಮ ಸ್ಕಾರ್ಫಿಯೋ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು ಗಾಯಗೊಂಡವರನ್ನು ಅಂಬುಲೆನ್ಸ ಪೊಲೀಸ್ ವಾಹನದ ಮೂಲಕ ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಥಳಕ್ಕೆ ತಕ್ಷಣ ಧಾವಿಸಿದ ಹೊನ್ನಾವರ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು,ಈ ಕುರಿತು ಹೊನ್ನಾವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Leave a Reply