ಅಂಕೋಲಾ:ತಾಲೂಕಿನ ಬಂಡಿಬಜಾರ್ ನಲ್ಲಿರುವ ಪುರಾತನ ಪ್ರಸಿದ್ಧಿ ಅಡುಕಟ್ಟೆಯ ಮೇಲಿದ್ದ ಬೃಹತ್ ಆಲದ ಮರವೊಂದು ಯಾವುದೇ ಅಪಾಯಕ್ಕೆ ಎಡೆಮಾಡಿಕೊಡದೆ ಧರೆಗುರುಳಿದೆ.

ಹೌದು…ತಾಲೂಕಿನ ಗ್ರಾಮದೇವಿ ಶಾಂತಾದುರ್ಗೆ ಬಂಡಿಹಬ್ಬದ ಪ್ರಯುಕ್ತ ಅಕ್ಷಯ ತೃತೀಯದಿಂದ ಬಂಡಿಹಬ್ಬದವರೆಗೆ ಅಡುಕಟ್ಟೆಯ ಮೇಲೆ ವಿಶ್ರಮಿಸಿ ಪರಿವಾರ ದೇವತೆಗಳ ಮುಖವಾಡವನ್ನು ವೀಕ್ಷಿಸುವ ರೂಢಿ ತಲತಲಾಂತರಗಳಿಂದ ಆಚರಿಸುತ್ತಾ ಬರಲಾಗುತ್ತಿತ್ತು,ದೈವಿ ಕಾರ್ಯಗಳಿಂದ ಹಿಡಿದು ಸ್ವಾತಂತ್ರೋತ್ಸವದಂದು ದ್ವಜಾರೋಹಣ,ಸಾರ್ವಜನಿಕ ಗಣೇಶೋತ್ಸವ, ಯುಗಾದಿ ಉತ್ಸವ ಹೀಗೆ ಅನೇಕಾರು ಕಾರ್ಯಕ್ರಮಗಳು ಇಲ್ಲಿ ಅದ್ದೂರಿತನದಿಂದ ನೆರವೇರುತಿತ್ತು.

ಆದರೆ ಕಳೆದ ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನ ಹೃದಯಬಾಗದಲ್ಲಿರುವ ಅಡುಕಟ್ಟೆಯ ಬೃಹದಾಕಾರದ ಆಲದ ಮರವು ಅತ್ಯಂತ ಜನಜಂಗುಳಿಯ ಪ್ರದೇಶವಾದರು, ಯಾರೊಬ್ಬರಿಗೂ ಸ್ವಲ್ಪವೂ ಹಾನಿಮಾಡದೆ ಧರೆಶಾಯಿಯಾಗಿದ್ದು ತಾಯಿ ಶಾಂತಾದುರ್ಗೆಯ ಮಹಿಮೆ ಎನ್ನುತ್ತಾರೆ ಸ್ಥಳೀಯರು.


Leave a Reply